ಮಡಿಕೇರಿ ಜ.5 : ಅಖಿಲ ಕನಾ೯ಟಕ ಬ್ರಾಹ್ಮಣ ಮಹಾಸಭಾ ವತಿಯಿಂದ ರಾಜ್ಯಮಟ್ಟದ 3 ನೇ ವಿಪ್ರ ಮಹಿಳಾ ಸಮ್ಮೇಳನ ಅಭಿಜಾತೆ ಬೆಂಗಳೂರಿನಲ್ಲಿ ಜನವರಿ 6 ಮತ್ತು 7 ರಂದು ಆಯೋಜಿತವಾಗಿದೆ.
ಅಖಿಲ ಕರ್ನಾಟಕ ಬ್ರಾಹ್ಮಣ ಮಹಿಳಾ ಸಮಾವೇಶದಲ್ಲಿ ಪ್ರಧಾನ ಮಾಡಲಾಗುವ ಧೀಶಕ್ತಿ ಪ್ರಶಸ್ತಿಗೆ ಮಡಿಕೇರಿಯ ಸವಿತಾ ಭಟ್ ಪೂಕಳ ಆಯ್ಕೆಯಾಗಿದ್ದಾರೆ ಎಂದು ವಿಪ್ರ ಮಹಿಳಾ ಘಟಕದ ಕೊಡಗು ಸಂಚಾಲಕಿಯಾದ ಗೀತಾ ಸಂಪತ್ ಕುಮಾರ್ ಮತ್ತು ಸಹಸಂಚಾಲಕಿ ಸವಿತಾ ಯೊಗೀಶ್ ತಿಳಿಸಿದ್ದಾರೆ.
ಅಖಿಲ ಕನಾ೯ಟಕ ಬ್ರಾಹ್ಮಣ ಮಹಾಸಭಾದ ರಾಜ್ಯಾಧ್ಯಕ್ಷರಾದ ಅಶೋಕ್ ಹಾನ೯ಳ್ಳಿಯವರ ಅಧ್ಯಕ್ಷತೆಯಲ್ಲಿ ಬೆಂಗಳೂರಿನ ಶಂಕರಪುರಂನಲ್ಲಿರುವ ಶಂಕರ ಮಠದಲ್ಲಿ 2 ದಿನಗಳ ಸಮ್ಮೇಳನ ನಡೆಯಲಿದೆ. ಸಮ್ಮೇಳನದಲ್ಲಿ ಮಡಿಕೇರಿಯ ಶೖತಿಲಯ ಭಜನಾ ತಂಡವು ಭಜನಾ ಸ್ಪಧೆ೯ಯಲ್ಲಿ ಪಾಲ್ಗೊಳ್ಳುತ್ತಿದೆ. ಕೊಡಗಿನ ಪ್ರೇಕ್ಷ ಭಟ್ ತಂಡದವರು ಸಮ್ಮೇಳನದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ನೀಡಲಿದ್ದು, ಮಾಧ್ಯಮದಲ್ಲಿ ಮಹಿಳೆಯ ಪಾತ್ರ ವಿಚಾರ ಸಂಕಿರಣದಲ್ಲಿ ಕೊಡಗು ಜಿಲ್ಲಾ ಸಂಚಾಲಕಿ ಗೀತಾ ಸಂಪತ್ ನಿರೂಪಕಿ ಆಗಿ ಕಾರ್ಯ ನಿರ್ವಹಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.