ಮಡಿಕೇರಿ ಜ.8 : ಕೂಡಿಗೆಯ ಪವಿತ್ರ ತಿರು ಕುಟುಂಬ ಚರ್ಚ್ ನ ವಾರ್ಷಿಕೋತ್ಸವವು ಶ್ರದ್ಧಾಭಕ್ತಿಯಿಂದ ನೆರವೇರಿತು.
ದೇವಾಲಯದ ಧರ್ಮಗುರುಗಳಾದ ವಂದನೀಯ ಸ್ವಾಮಿ ಚಾರ್ಲ್ಸ್ ನೋರೋನಾ ಅವರ ಸಮ್ಮುಖದಲ್ಲಿ ಕುಶಾಲನಗರದ ಸಂತ ಸಬಾಸ್ಟಿಯನ್ ದೇವಾಲಯದ ಧರ್ಮಗುರು ವಂದನೀಯ ಎಂ.ಮಾರ್ಟಿನ್ ದಿವ್ಯ ಬಲಿಪೂಜೆಯನ್ನು ನೆರವೇರಿಸಿದರು.
ಕೊಡಗು ವಲಯದ ಹಲವು ಧರ್ಮಕೇಂದ್ರದ ಗುರಗಳು ಹಾಗೂ ಕನ್ಯಾ ಸ್ತ್ರೀಯರು ಹಾಜರಿದ್ದರು. ಬಲಿಪೂಜೆಯ ನಂತರ ಭವ್ಯ ತೇರಿನೊಂದಿಗೆ ಮೆರವಣಿಗೆ ನಡೆಯಿತು.










