ಚೆಯ್ಯಂಡಾಣೆ ಜ.7 : ನರಿಯಂದಡ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚೇಲಾವರದಲ್ಲಿ ಅಯೋಧ್ಯೆಯ ಮಂತ್ರಾಕ್ಷತೆಯನ್ನು ಮನೆಗಳಿಗೆ ತೆರಳಿ ವಿತರಿಸಲಾಯಿತು.
ಜ.15ವರೆಗೆ ಮಂತ್ರಾಕ್ಷತೆ ವಿತರಣೆ ಅಭಿಯಾನವಿದ್ದು, ಇದರ ಅಂಗವಾಗಿ ಚೇಲಾವರದ ಪೋನ್ನೊಲ ಸಾರ್ಥವು ಬೈತೂರ್ ಕಾರ್ಯಾರು ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ, ನಂತರ ಚೇಲಾವರದ ಮನೆ ಮನೆಗಳಿಗೆ ತೆರಳಿ ಮಂತ್ರಾಕ್ಷತೆ ಯನ್ನು ವಿತರಿಸಲಾಯಿತು.
ಈ ಸಂದರ್ಭ ನಾಡು ತಕ್ಕರಾದ ಪಟ್ಟಚೆರುವಂಡ ಜಿಮ್ಮ ಚಿಟ್ಟಿಯಪ್ಪ, ಪ್ರಮುಖರಾದ ಪಟ್ಟಚೆರುವಂಡ ಹರಿ ಮುತ್ತಪ್ಪ, ಚರ್ಮಣ, ಮುಂಡಿಯೋಳಂಡ ಪ್ರವೀಣ್ ಈರಪ್ಪ, ಬಾಚಮಂಡ ಲೋಕೇಶ್, ಪವನ್ ಮಂಜು, ಕುಟ್ಟನ ಸೀತಾರಾಂ ಮತಿತ್ತರರು ಹಾಜರಿದ್ದರು.
ವರದಿ : ಅಶ್ರಫ್






