ನಾಪೋಕ್ಲು ಜ.10 : ನಾಪೋಕ್ಲು ನಾಡ್ ಕೊಡವ ಸೌಹಾರ್ದ ಕ್ರೆಡಿಟ್ ಕೋ-ಆಪರೇಟಿವ್ ಆಡಳಿತ ಮಂಡಳಿಯ 2023-24ನೇ ಸಾಲಿನ ಅಧ್ಯಕ್ಷರಾಗಿ ಅಪ್ಪಾರಂಡ.ಎಸ್.ಅಯ್ಯಪ್ಪ ಹಾಗೂ ಉಪಾಧ್ಯರಾಗಿ ಮಾಳೆಯಂಡ ಎ. ಅಯ್ಯಪ್ಪ ಆಯ್ಕೆಯಾಗಿದ್ದಾರೆ.
ನಿರ್ದೇಶಕರಾಗಿ ಬಿದ್ದಾಟಂಡ.ಎ.ರಮೇಶ್ ಚಂಗಪ್ಪ, ಚೇನಂಡ ಈ.ಗಿರೀಶ್ ಪೂಣಚ್ಚ, ಮೂವೇರ ರೇಖಾ ಪ್ರಕಾಶ್, ಕೋಟೇರ ನೈಲಾ ಚಂಗಪ್ಪ, ಅರೇಯಡ.ಎಂ.ಅಶೋಕ್, ಬೋಳ್ಯಂಡ.ಪಿ.ಹರೀಶ್ ಕಾರ್ಯಪ್ಪ, ಚೋಕಿರ.ಎಸ್.ಸಜಿತ್ ಚಿಣ್ಣಪ್ಪ, ಕುಂಡ್ಯೋಳಂಡ.ಸಿ.ವಿಶು ಪೂವಯ್ಯ, ಕುಲ್ಲೇಟ್ಟಿರ.ಎಂ.ದೇವಯ್ಯ, ಕನ್ನಂಬೀರ.ಸಿ.ತಿಮ್ಮಯ್ಯ, ಕಾಟುಮಣಿಯಂಡ.ಎಂ.ಉಮೇಶ್ ಆಯ್ಕೆಯಾದರು.
ಇತ್ತೀಚೆಗೆ ಜರುಗಿದ ಚುನಾವಣೆ ಪ್ರಕ್ರಿಯೆಯಲ್ಲಿ ನೂತನ ಪದಾಧಿಕಾರಿಗಳನ್ನು ನೇಮಕ ಮಾಡಲಾಯಿತು. ವಿರಾಜಪೇಟೆಯ ರಿಟರ್ನಿಂಗ್ ಆಫೀಸರ್ ಸಹಕಾರ ಸಂಘಗಳ ಸಹಾಯಕ ನಿರ್ದೇಶಕರು (ಅಧಿಕ ಪ್ರಭಾರ) ಜೆ.ಮಾಲತಿ ಚುನಾವಣಾ ಅಧಿಕಾರಿಯಾಗಿ ಕಾರ್ಯನಿರ್ವಹಿಸಿ ಎಲ್ಲರಿಗೂ ಶುಭ ಹಾರೈಸಿದರು.
ವರದಿ : ದುಗ್ಗಳ ಸದಾನಂದ