ಮಡಿಕೇರಿ ಜ.13 : ಇದೇ ಜ.26 ರಂದು ನಡೆಯುವ ಗಣರಾಜ್ಯೋತ್ಸವ ದಿನಾಚರಣೆಯನ್ನು ನಗರದ ಜನರಲ್ ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ಸಂಭ್ರಮ ಹಾಗೂ ಸಡಗರದಿಂದ ಅರ್ಥಪೂರ್ಣವಾಗಿ ಆಯೋಜಿಸಲು ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರ ಅಧ್ಯಕ್ಷತೆಯಲಿ ನಡೆದ ಪೂರ್ವಭಾವಿ ಸಭೆಯಲ್ಲಿ ತೀರ್ಮಾನಿಸಲಾಯಿತು. ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರು ಗಣರಾಜ್ಯೋತ್ಸವ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸುವ ನಿಟ್ಟಿನಲ್ಲಿ ಈಗಾಗಲೇ ಸ್ವಾಗತ, ಧ್ವಜಾರೋಹಣ ಮತ್ತು ವೇದಿಕೆ, ಸಾಂಸ್ಕೃತಿಕ, ಕವಾಯತು, ಉಪಾಹಾರ, ಭಾಷಣ, ಸ್ವಚ್ಛತೆ ಮತ್ತು ಕುಡಿಯುವ ನೀರಿನ ಪೂರೈಕೆ ಹೀಗೆ ವಿವಿಧ ಸಮಿತಿಗಳನ್ನು ರಚಿಸಿದ್ದು, ತಮಗೆ ವಹಿಸಿರುವ ಜವಾಬ್ದಾರಿಯನು ಅಚ್ಚುಕಟ್ಟಾಗಿ ನಿರ್ವಹಿಸುವಂತೆ ಸೂಚಿಸಿದರು. ಕಳೆದ ಬಾರಿಯಂತೆ ಸಾಂಸ್ಕೃತಿಕ ಕಾರ್ಯಕ್ರಮ ಏರ್ಪಡಿಸುವಂತೆ ಸಲಹೆ ಮಾಡಿದರು. ಗಣರಾಜ್ಯೋತ್ಸವ ದಿನದಂದು ವಿದ್ಯಾರ್ಥಿಗಳಿಗೆ ಉಪಾಹಾರ ಕಲ್ಪಿಸುವಂತೆ ಆಹಾರ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು. ಗಣರಾಜ್ಯೋತ್ಸವ ದಿನಾಚರಣೆ ಹಿನ್ನೆಲೆ ರಾಷ್ಟ್ರಕವಿ ಕುವೆಂಪು, ಫೀಲ್ಡ್ ಮಾರ್ಷಲ್ ಕಾರ್ಯಪ್ಪ, ಜನರಲ್ ತಿಮ್ಮಯ್ಯ, ಗುಡ್ಡೆಮನೆ ಅಪ್ಪಯ್ಯಗೌಡ, ಮಂಗೇರಿರ ಮುತ್ತಣ್ಣ, ಸ್ಕ್ವಾಡರ್ನ್ ಲೀಡರ್…
ಲೇಖಕ: admin
ಮಡಿಕೇರಿ ಜ.13 : ಮುಂದೆ ಬೇಸಿಗೆ ಎದುರಾಗುತ್ತಿದ್ದು ಕುಡಿಯುವ ನೀರಿನ ಪೂರೈಕೆಗೆ ಯಾವುದೇ ರೀತಿಯ ಸಮಸ್ಯೆಯಾಗಬಾರದು ಎಂದು ಮುಖ್ಯಮಂತ್ರಿ ಅವರ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ತಿಳಿಸಿದ್ದಾರೆ. ಪೊನ್ನಂಪೇಟೆ ತಾಲ್ಲೂಕು ಪಂಚಾಯಿತಿಯ ಸಾಮಥ್ರ್ಯ ಸೌಧದಲ್ಲಿ ವಿರಾಜಪೇಟೆ ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಕುಡಿಯುವ ನೀರಿನ ಸಮಸ್ಯೆಗಳ ಕುರಿತು ಟಾಸ್ಕ್ ಫೊರ್ಸ್ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜಲ ಜೀವನ್ ಮೀಷನ್ ಯೋಜನೆಯಡಿ ಬಾಕಿ ಇರುವ ಎಲ್ಲಾ ಕಾಮಗಾರಿಗಳು ತುರ್ತಾಗಿ ಪೂರ್ಣಗೊಳ್ಳಬೇಕು, ಯಾವುದೇ ಸಾರ್ವಜನಿಕ ದೂರುಗಳು ಬಾರದ ರೀತಿಯಲ್ಲಿ ಕ್ರಮವಹಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು. ವಿದ್ಯುತ್ ಇಲಾಖೆಯಿಂದ ಸಮರ್ಪವಾಗಿ ವಿದ್ಯುತ್ ನ್ನು ಪೂರೈಸಿ ಎಎಒ ನೀರಿನ ಟ್ಯಾಂಕರ್ ಗಳಿಂದ ನೀರನ್ನು ಪಂಪ್ ಮಾಡಲು ಯಾವುದೇ ಸಮಸ್ಯೆಯಾಗದ ರೀತಿಯಲ್ಲಿ ಕ್ರಮವಹಿಸಲು ಸೆಸ್ಕ್ ಇಲಾಖೆಯ ಅಧಿಕಾರಿಗಳಿಗೆ ತಿಳಿಸಿದರು. ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಕುಡಿಯುವ ನೀರಿನ ಸಮಸ್ಯೆಗಳು ಇದ್ದಲ್ಲಿ ಪಂಚಾಯಿತಿ ಅಭಿವೃದ್ದಿ ಅಧಿಕಾರಿಗಳು ಪಟ್ಟಿ ಮಾಡಿ ನೀಡುವಂತೆ ತಿಳಿಸಿದರು. ಬೋರ್ ವೆಲ್, ಮೋಟಾರ್…
ಮಡಿಕೇರಿ ಜ.13 : ಕುಶಾಲನಗರ ತಾಲ್ಲೂಕು ನಂಜರಾಯಪಟ್ಟಣ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾವೇರಿ ನದಿಯಲ್ಲಿ ರಿವರ್ ರ‍್ಯಾಫ್ಟಿಂಗ್ ನಡೆಸಲು ಸಾಮಾಜಿಕ ಹಿಂದುಳಿದ ವರ್ಗದ ಜೇನುಕುರುಬ ಸಮುದಾಯದ ಶ್ರೀ ವಿನೋದ್ ಜೆ.ಇ.ಮಾವಿನಹಳ್ಳ ಹಾಡಿ, ರಂಗಸಮುದ್ರ ಗ್ರಾಮ, ಕುಶಾಲನಗರ ತಾಲ್ಲೂಕು ಇವರಿಗೆ (ಶ್ರೀ ಅವಿನಾಶ್ ಜೆ.ಎಸ್ ಗೈಡ್) ಜಿಲ್ಲಾಧಿಕಾರಿಗಳು ಅನುಮೋದಿಸಿ ನಿರ್ದೇಶಿಸಿದಂತೆ ರ‍್ಯಾಫ್ಟಿಂಗ್ ಪರವಾನಿಗೆಯನ್ನು ಪ್ರವಾಸೋದ್ಯಮ ಇಲಾಖೆಯ ಉಪ ನಿರ್ದೇಶಕರಾದ ಅನಿತಾ ಭಾಸ್ಕರ್ ಅವರು ಪ್ರವಾಸೋದ್ಯಮ ಇಲಾಖೆಯಲ್ಲಿ ವಿತರಿಸಿದರು. ಜಿಲ್ಲೆಯಲ್ಲಿ ಇದೇ ಪ್ರಥಮ ಬಾರಿಗೆ ಜೇನುಕುರುಬ ಸಮುದಾಯಕ್ಕೆ ಸೇರಿದ ಯುವಕರಿಗೆ ರ‍್ಯಾಫ್ಟಿಂಗ್ ಪರವಾನಿಗೆಯನ್ನು ನೀಡಿರುವುದು ಒಂದು ಸಾಮಾಜಿಕ ಮೈಲಿಗಲ್ಲಾಗಿದೆ ಹಾಗೂ ಜೇನುಕುರುಬ ಸಮುದಾಯದವರು ಆರ್ಥಿಕವಾಗಿ ಸಬಲೀಕರಣಗೊಳ್ಳುವ ನಿಟ್ಟಿನಲ್ಲಿ ಇದೊಂದು ಮಹತ್ವದ ಹೆಜ್ಜೆಯಾಗಿದೆ ಎಂದು ಅನಿತಾ ಭಾಸ್ಕರ್ ಅವರು ತಿಳಿಸಿದರು. ಈ ಸಂಧರ್ಭದಲ್ಲಿ ಜಿಲ್ಲಾ ಪ್ರವಾಸೋದ್ಯಮ ಸಮಲೋಚಕರಾದ ಜತೀನ್ ಬೋಪಣ್ಣ, ಪ್ರವಾಸೋದ್ಯಮ ಇಲಾಖೆಯ ಸಿಬ್ಬಂಧಿಗಳಾದ ಶ್ವೇತ ಹಾಗೂ ದಿನೇಶ್ ಉಪಸ್ಥಿತರಿದ್ದರು.
ಕುಶಾಲನಗರ ಜ.12 : ಕುಶಾಲನಗರದ ತಾಲ್ಲೂಕಿನ ಕೂಡುಮಂಗಳೂರು( ಕೂಡ್ಲೂರು) ಸರ್ಕಾರಿ ಪ್ರೌಢಶಾಲೆಯಲ್ಲಿ ಶಾಲೆಯ ಎನ್.ಎಸ್.ಎಸ್. ಘಟಕ, ಸಮಾಜ ಸಂಘ, ವಿದ್ಯಾರ್ಥಿ ಸಂಘ, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ನ ಶಾಲಾ ಘಟಕ, ಸಂಸ್ಥೆಯ ಕುಶಾಲನಗರ ಸ್ಥಳೀಯ ಸಂಸ್ಥೆ ಮತ್ತು ಸುಂಟಿಕೊಪ್ಪ ಜೆಸಿಐ ಸಂಸ್ಥೆಯ ವತಿಯಿಂದ ಸ್ವಾಮಿ ವಿವೇಕಾನಂದರ ಜಯಂತಿ ಹಾಗೂ ರಾಷ್ಟ್ರೀಯ ಯುವ ದಿನವನ್ನು ಆಚರಿಸಲಾಯಿತು. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸುಂಟಿಕೊಪ್ಪ ಜೆಸಿಐ ಸಂಸ್ಥೆಯ ಅಧ್ಯಕ್ಷ ಎಂ.ಸಂಪತ್ ಕುಮಾರ್ , ವಿದ್ಯಾರ್ಥಿಗಳು ವಿಶ್ವದ ಆಧ್ಯಾತ್ಮಿಕ ಗುರು ಎನಿಸಿರುವ ಸ್ವಾಮಿ ವಿವೇಕಾನಂದರ ಉದಾತ್ತ ವ್ಯಕ್ತಿತ್ವ, ಜೀವನ ಕ್ರಮ, ದೂರದೃಷ್ಠಿ ಹಾಗೂ ವಿಚಾರಧಾರೆಗಳನ್ನು ಮೈಗೂಡಿಸಿಕೊಂಡು ಜೀವನದಲ್ಲಿ ಉತ್ತಮ ಸಾಧನೆ ಮಾಡುವ ಮೂಲಕ ರಾಷ್ಟ್ರದ ಸಮಗ್ರತೆ ಹಾಗೂ ಏಕತೆಯನ್ನು ಎತ್ತಿ ಹಿಡಿಯಬೇಕು ಎಂದರು. ಪ್ರಾಸ್ತಾವಿಕವಾಗಿ ಮಾತನಾಡಿದ ಶಾಲಾ ಮುಖ್ಯ ಶಿಕ್ಷಕ ಟಿ.ಜಿ.ಪ್ರೇಮಕುಮಾರ್ , ಸ್ವಾಮಿ ವಿವೇಕಾನಂದರರು ಯುವಜನತೆಗೆ ನೀಡಿದ ಅವರ ಕರೆ ‘ಏಳಿ.. ಎದ್ದೇಳಿ, ಗುರಿ ಮುಟ್ಟುವ ತನಕ ನಿಲ್ಲದಿರಿ’ ಎಂಬುದು ಸರ್ವ ಕಾಲಕ್ಕೂ ನೆನೆಯುವ,…
ಮಡಿಕೇರಿ ಜ.12 : ಯುವ ಜನತೆಯು ತನ್ನಲ್ಲಿ ಅಡಗಿರುವ ಶಕ್ತಿ ಸಾಮರ್ಥ್ಯ ಮತ್ತು ಪ್ರತಿಭೆಯನ್ನು ಧನಾತ್ಮಕ ಚಿಂತನೆಗಳ ಮೂಲಕ ಸಾಧನೆಗೆ ಬಳಸಬೇಕೆಂದು ಪ್ರತಿಭಾ ಆಂಗ್ಲ ಮಾಧ್ಯಮ ಶಾಲೆಯ ಪ್ರಾಂಶುಪಾಲೆ ಗೀತಾ ನಾಯ್ಡು ನುಡಿದರು. ಶಾಲೆಯಲ್ಲಿ ನಡೆದ ರಾಷ್ಟ್ರೀಯ ಯುವ ದಿನಾಚರಣೆ ಕಾರ್ಯಕ್ರಮನ್ನು ಉದ್ಘಾಟಿಸಿ ಮಾತನಾಡಿದರು. ಯುವ ಜನತೆಯ ಜೀವನದ ಪ್ರತೀ ಘಟ್ಟದಲ್ಲೂ ಸ್ವಾಮಿ ವಿವೇಕಾನಂದರ ಜೀವನ ಚರಿತ್ರೆ ಮತ್ತು ಸಂದೇಶಗಳು ನಮಗೆ ದಾರಿ ದೀಪ. ಅವರ ಪ್ರೇರಣಾತ್ಮಕ ನುಡಿಗಳೇ ನಮ್ಮ ಸಾಧನೆಯ ಮಾರ್ಗದರ್ಶನ. ವಿದ್ಯಾರ್ಥಿಗಳು ಎಂದಿಗೂ ಬಹು ಎತ್ತರದ ಕನಸುಗಳುಳ್ಳವರಾಗಬೇಕು, ಆ ಕನಸುಗಳ ಸಾಧನೆಯ ಮೂಲಕ ಸಾರ್ಥಕತೆ ಕಂಡುಕೊಳ್ಳಬೇಕು ಎಂದರು. ಶಿಕ್ಷಕಿ ಸಾನಿಫ ದಿನದ ಮಹತ್ವ ತಿಳಿಸಿದರು. ಕಾರ್ಯಕ್ರಮದಲ್ಲಿ ಶಿಕ್ಷಕಿ ಅಶ್ವಿನಿ ಸ್ವಾಗತಿಸಿ ನಿರೂಪಿಸಿದರು, ಆಡಳಿತ ಮಂಡಳಿಯವರು, ಶಿಕ್ಷಕರಾದ ಯಶಸ್ವಿನಿ, ಸೀಮಾ, ಅಯ್ಯಪ್ಪ, ಮತ್ತು ವಿದ್ಯಾರ್ಥಿಗಳು ಹಾಜರಿದ್ದರು.
ಮಡಿಕೇರಿ ಜ.12 : ಗ್ರಾಮೀಣ ಬದುಕು, ಆಚಾರ ವಿಚಾರ, ಸಂಸ್ಕೃತಿಗಳನ್ನು ಅನಾವರಣಗೊಳಿಸುವ ವೈಶಿಷ್ಟ್ಯಪೂರ್ಣವಾದ ‘ಗ್ರಾಮ ಸಿರಿ’ ಸಮಾರಂಭ ಜ.17 ಮತ್ತು 18 ರಂದು ಮಡಿಕೇರಿ ತಾಲ್ಲೂಕಿನ ಚೆಟ್ಟಿಮಾನಿಯಲ್ಲಿ ನಡೆಯಲಿದೆ. ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಮಡಿಕೇರಿ ತಾಲ್ಲೂಕು ಕಸಾಪ, ಭಾಗಮಂಡಳಿ ಹೋಬಳಿ ಕಸಾಪ ಹಾಗೂ ಕುಂದಚೇರಿ, ಭಾಗಮಂಡಲ ಮತ್ತು ಅಯ್ಯಂಗೇರಿ ಗ್ರಾಮ ಪಂಚಾಯ್ತಿ ಮತ್ತು ಗ್ರಾಮಸ್ಥರ ಸಹಯೋಗದೊಂದಿಗೆ ಗ್ರಾಮೀಣ ಸಂಸ್ಕೃತಿಯ ಸೊಬಗನ್ನು ಎರಡು ದಿನಗಳ ಕಾರ್ಯಕ್ರಮ ಪಸರಿಸಲಿದೆಯೆಂದು ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷರಾದ ಟಿ.ಪಿ.ರಮೇಶ್ ಅವರು ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದರು. ಚೆಟ್ಟಿಮಾನಿಯ ಶಾಲಾ ಮೈದಾನದಲ್ಲಿ ಆರಂಭಿಕ ದಿನವಾದ ಜ.17 ರಂದು ಬೆಳಗ್ಗೆ ರಸ್ತೆ ಓಟದ ಸ್ಪರ್ಧೆ ನಡೆಯಲಿದೆ. ಬಳಿಕ ಬೆಳಗ್ಗೆ 8.30 ಗಂಟೆಗೆ ಧ್ವಜಾರೋಹಣದ ಮೂಲಕ ಚೆಟ್ಟಿಮಾನಿಯ ಕಾಫಿ ಬೆಳೆಗಾರರಾದ ಮಂಗೇರಿರ ಕುಂಞಪ್ಪ ಅವರು ಕ್ರೀಡಾಕೂಟಕ್ಕೆ ಚಾಲನೆ ನೀಡಲಿದ್ದಾರೆ. ಸಂಜೆ 4 ಗಂಟೆಗೆ ಭಾಗಮಂಡಲ ಹೋಬಳಿ ಕಸಾಪ ನಿಕಟಪೂರ್ವ ಅಧ್ಯಕ್ಷರಾದ ಶ್ರೀಧರ್ ಎ.ಎಸ್. ಅಧ್ಯಕ್ಷತೆಯಲ್ಲಿ ನಡೆಯಲಿದೆಯೆಂದು ಹೇಳಿದರು. ಮೆರವಣಿಗೆ-ಪ್ರವೇಶ ದ್ವಾರಗಳ…
ಮಡಿಕೇರಿ ಜ.12 : ಪ್ರಕೃತಿಯ ಆರಾಧಕರಾಗಿ ‘ಭೂಮಿ ಪುತ್ರ’ರೆಂದೇ ಕರೆಸಿಕೊಂಡಿರುವ ಮೊಗೇರ ಸಮಾಜದ ಪೌರಾಣಿಕ ಹಿನ್ನೆಲೆ, ದೈವಗಳ ಮಹತ್ವದ ಕುರಿತು ಅರಿವು ಮೂಡಿಸುವ ನಿಟ್ಟಿನ ‘ಬ್ರಹ್ಮ ಮೊಗೇರರ್’ ತುಳು ಯಕ್ಷಗಾನ ಬಯಲಾಟ ಫೆ.22 ರಂದು ಮದೆನಾಡಿನಲ್ಲಿ ಆಯೋಜಿಸಲಾಗಿದೆಯೆಂದು ಕೊಡಗು ಜಿಲ್ಲಾ ಮೊಗೇರ ಸಮಾಜದ ಮಾಜಿ ಅಧ್ಯಕ್ಷರು ಹಾಗೂ ಹಾಲಿ ಸಲಹೆಗಾರ ಪಿ.ಎಂ.ರವಿ ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತುಳುನಾಡಿನಲ್ಲಿ ಬನಗಳನ್ನು ಸ್ಥಾಪಿಸಿ ದೈವಗಳ ಹೆಸರಿನಲ್ಲಿ ಪ್ರಕೃತಿಯನ್ನು ಪೂಜಿಸಿಕೊಂಡು ಬಂದಂತಹ ಸಮೂಹ ಮೊಗೇರ ಸಮಾಜದ್ದು. ಮೊಗೇರ ಕುಲದಲ್ಲಿ ಹುಟ್ಟಿ ನಾಡಿನ ಹಿತರಕ್ಷಣೆಗಾಗಿ ಪರಾಕ್ರಮ ಮೆರೆದು ಹುತಾತ್ಮರಾದ ಮುದ್ದ ಕಳಲ, ಕಾರ್ನಿಯ ಕಳಲ ಮತ್ತು ತನ್ನಿಮಾನಿಗ ಅವರು ದೈವಾಂಶ ಸಂಭೂತರಾಗಿ ಇಂದಿಗೂ ಪೂಜಿಸಲ್ಪಡುತ್ತಿದ್ದಾರೆ. ಇಂತಹ ಸೂಕ್ಷ್ಮ ವಿಚಾರಗಳನ್ನು ಯಕ್ಷಗಾನದ ಮೂಲಕ ತಿಳಿಯ ಪಡಿಸುವುದು ತಮ್ಮ ಮೂಲ ಉದ್ದೇಶವಾಗಿದೆ ಎಂದು ಹೇಳಿದರು. ತುಳುನಾಡಿನ ಮೊಗೇರ ಜನಾಂಗದ ಕುಲದೈವ ಮೂವೆರ್ ಮುಗೆರ್ಲು ತನ್ನಿಮಾನಿಗರ ಹುಟ್ಟು, ಬಾಲ್ಯ, ಪರಾಕ್ರಮದ ಬದುಕು ಮತ್ತು ಅಂತ್ಯದ ಬಗ್ಗೆ ಇರುವ ಪೌರಾಣಿಕ ಹಿನ್ನೆಲೆಯನ್ನು…
ಮಡಿಕೇರಿ ಜ.12 : ಕೊಡವರಂತಹ ಆದಿಮ ಸಂಜಾತ ಅತೀಸೂಕ್ಷ್ಮ ಸಮುದಾಯಗಳ ಉಳಿವಿಗಾಗಿ ಸಂವಿಧಾನದಡಿಯಲ್ಲಿ ನ್ಯಾಯಸಮ್ಮತವಾದ ಹಕ್ಕುಗಳನ್ನು ಪ್ರತಿಪಾದಿಸಲು ಅವಕಾಶವಿದ್ದು, ಸ್ವಯಂ ನಿರ್ಣಯದ ಹಕ್ಕಿನ ಮೂಲಕ ಕೊಡವ ಲ್ಯಾಂಡ್ ಹೊಂದುವುದು ಕೊಡವರ ಅಂತರ್ಗತ, ಮೂಲಭೂತ, ಜನ್ಮಸಿದ್ಧ ಹಕ್ಕಾಗಿದೆ ಎಂದು ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆಯ ಅಧ್ಯಕ್ಷ ಎನ್.ಯು.ನಾಚಪ್ಪ ಪ್ರತಿಪಾದಿಸಿದ್ದಾರೆ. ರಾಜ್ಯದಲ್ಲಿ ಇತರರ ಬಗ್ಗೆ ಎಂದಿಗೂ ಕಾಳಜಿ ಇಲ್ಲದ ಜನರು ಊಳಿಗಮಾನ್ಯ ಮನೋಭಾವದಿಂದ ರಾಜ್ಯವನ್ನು ಆಳುತ್ತಿದ್ದಾರೆ. ಅವರು ರಾಜ್ಯದ ಕನಿಷ್ಠ 60 ವಿಧಾನಸಭಾ ಕ್ಷೇತ್ರಗಳಲ್ಲಿ ಬಹುಮತವನ್ನು ಹೊಂದಿದ್ದಾರೆ ಮತ್ತು ತಮ್ಮ 60 ವಿಧಾನಸಭಾ ಕ್ಷೇತ್ರಗಳ ಭಾಗವಾಗಿರುವ ಇತರ ಸೂಕ್ಷ್ಮ ಸಮುದಾಯಗಳ ಯೋಗಕ್ಷೇಮದ ಬಗ್ಗೆ ಅವರು ಎಂದಿಗೂ ತಲೆಕೆಡಿಸಿಕೊಂಡಿಲ್ಲ ಎಂದು ಟೀಕಿಸಿದ್ದಾರೆ. ಇತರರ ಬಗ್ಗೆ ಮೊಸಳೆ ಕಣ್ಣೀರು ಸುರಿಸುವ ಮಂದಿ ತಮ್ಮ ಸಮುದಾಯಕ್ಕೆ ಎಷ್ಟು ಸೀಟು ಬೇಕೆನ್ನುವ ಲೆಕ್ಕಾಚಾರದಲ್ಲಿ ಚುನಾವಣೆಗಳ ಸಂದರ್ಭ ಮತಾಂಧತೆಯ ಅಶ್ಲೀಲತೆಯನ್ನು ಅನಾವಣಗೊಳಿಸುತ್ತಾರೆ. ತಮ್ಮ ಈ ನಡೆ ಜಾತ್ಯತೀತತೆಯ ಮತ್ತು ಅಂತರ್ಗತ ರುಜುವಾತುಗಳಿಗೆ ಅನುಗುಣವಾಗಿದೆ ಎಂದು ಹೇಳಿಕೊಂಡೆ ಮತಾಂಧತೆಯ ವಿಕೃತಿಯನ್ನು ಮೆರೆಯುತ್ತಾರೆ. ಕೊಡವರಂತಹ…
ಮಡಿಕೇರಿ ಜ.12 : ಹಿರಿಯ ಸಾಹಿತಿ, ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷರು, ಸೋಮವಾರಪೇಟೆ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷರೂ ಹಾಗೂ ಕುಶಾಲನಗರದಲ್ಲಿ ನಡೆದ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೆಳನದ ಅಧ್ಯಕ್ಷರಾಗಿದ್ದ ಎಸ್.ಸಿ.ರಾಜಶೇಖರ್ ಅವರ ನಿಧನಕ್ಕೆ ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಸಂತಾಪ ಸೂಚಿಸಿದೆ. ನಗರದ ಕನ್ನಡ ಸಾಹಿತ್ಯ ಪರಿಷತ್ತು ಕಛೇರಿಯಲ್ಲಿ ನಡೆದ ಸಂತಾಪ ಸೂಚನಾ ಸಭೆಯಲ್ಲಿ ಮಾತನಾಡಿದ ಜಿಲ್ಲಾ ಕ.ಸಾ.ಪದ ಮಾಜಿ ಅಧ್ಯಕ್ಷ ಟಿ.ಪಿ.ರಮೇಶ್, ಸೋಮವಾರಪೇಟೆ ತಾಲ್ಲೂಕಿನಲ್ಲಿ ಕನ್ನಡ ಸಂಘಗಳನ್ನು ಸ್ಥಾಪಿಸಿ ಆ ಮೂಲಕ ಕನ್ನಡ ಪರ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬಂದ ರಾಜಶೇಖರ್ ಅವರು ಅಧ್ಯಾಪಕರಾಗಿ, ಸಾಹಿತಿಯಾಗಿ ಸಾಹಿತ್ಯ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ್ದಾರೆ ಎಂದರು. ಜಿಲ್ಲಾ ಕ.ಸಾ.ಪ ಗೌರವ ಕಾರ್ಯದರ್ಶಿ ಎಸ್.ಐ.ಮುನೀರ್ ಅಹಮ್ಮದ್ ಮಾತನಾಡಿದರು. ಮೌನಾಚರಣೆಯ ಮೂಲಕ ರಾಜಶೇಖರ್ ಅವರಿಗೆ ಸಭೆ ಗೌರವ ಅರ್ಪಿಸಿತು. ಜಿಲ್ಲಾ ಕ.ಸಾ.ಪ ಗೌರವ ಕಾರ್ಯದರ್ಶಿ ರೇವತಿ ರಮೇಶ್, ಮಡಿಕೇರಿ ತಾಲ್ಲೂಕು ಕ.ಸಾ.ಪ. ಅಧ್ಯಕ್ಷೆ ತುಳಸಿ ಮೋಹನ್,…
ಮಡಿಕೇರಿ ಜ.11 : ಕೊಡಗು ಜಿಲ್ಲಾ ಸಹಕಾರ ಬ್ಯಾಂಕ್ ಶತಮಾನ ಪೂರ್ಣಗೊಳಿಸಿರುವ ಹಿನ್ನೆಲೆ ಮಡಿಕೇರಿಯಲ್ಲಿ ರೂ.8.44 ಕೋಟಿ ವೆಚ್ಚದಲ್ಲಿ ಸುಸಜ್ಜಿತವಾಗಿ ನಿರ್ಮಿಸಲಾದ ನೂತನ ಶತಮಾನೋತ್ಸವ ಭವನ “ಉನ್ನತಿ” ಯ ಉದ್ಘಾಟನಾ ಸಮಾರಂಭ ಜ.21 ರಂದು ನಡೆಯಲಿದೆ ಎಂದು ಬ್ಯಾಂಕ್ ಅಧ್ಯಕ್ಷ ಕೊಡಂದೇರ ಪಿ.ಗಣಪತಿ ತಿಳಿಸಿದರು. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಉದ್ದೇಶಿತ ಕಟ್ಟಡವನ್ನು ಎರಡು ವರ್ಷಗಳ ಅಲ್ಪ ಕಾಲಾವಧಿಯಲ್ಲಿ ನಿರ್ಮಿಸಲಾಗಿದ್ದು, ಪ್ರಗತಿಯ ಪ್ರತೀಕವಾಗಿ “ಉನ್ನತಿ” ಎಂದು ಹೆಸರಿಡಲಾಗಿದೆ. ಶತಮಾನೋತ್ಸವ ಸಂಭ್ರಮದ ಅಂಗವಾಗಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು. ಜ.14 ರಂದು ಸಂಜೆ 7 ಗಂಟೆಗೆ ನೂತನ ಶತಮಾನೋತ್ಸವ ಕಟ್ಟಡದ ವಾಸ್ತು ಪೂಜೆ ಮತ್ತು ವಾಸ್ತು ಬಲಿ, ಜ.15 ರಂದು ಬೆಳಗ್ಗೆ 7 ಗಂಟೆಗೆ ಗಣಹೋಮ ಹಾಗೂ 10.30ಕ್ಕೆ ಸತ್ಯನಾರಾಯಣ ಪೂಜೆ ನಡೆಯಲಿದೆ. ಜ.19 ಮತ್ತು 20ರಂದು ಬ್ಯಾಂಕ್ ಗ್ರಾಹಕರು, ಕೃಷಿಕರು ಹಾಗೂ ಜಿಲ್ಲೆಯ ಜನರಿಗಾಗಿ ಬೆಳಿಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ನಗರದ ಗಾಂಧಿ ಮೈದಾನದಲ್ಲಿ ಜಿಲ್ಲಾ ಮಟ್ಟದ ವಾಹನ…






