ಮಡಿಕೇರಿ ಜ.10 : ತಾಂತ್ರಿಕ ಮತ್ತು ತಾಂತ್ರಿಕೇತರ ಕ್ಷೇತ್ರದಲ್ಲಿ ಅಗ್ನಿಪತ್ ಯೋಜನೆಯ ಅಡಿಯಲ್ಲಿ ಭಾರತೀಯ ವಾಯುಸೇನೆಯಲ್ಲಿ ಅಗ್ನಿವೀರ್ ವಾಯು ಹುದ್ದೆಯಲ್ಲಿ ಸೇವೆ ಸಲ್ಲಿಸಲು 2025 ಜನವರಿಯಲ್ಲಿ ನಡೆಯುವ ಆನ್‍ಲೈನ್ ಪರೀಕ್ಷೆಗೆ ಪೂರ್ವ ನೋಂದಣಿ ಪ್ರಕ್ರಿಯೆಯು ಪ್ರಾರಂಭವಾಗಿದ್ದು, ಆಸಕ್ತರು ಜನವರಿ, 17 ರಿಂದ ಫೆಬ್ರವರಿ, 6 ರೊಳಗೆ ವೆಬ್‍ಸೈಟ್ http://agnipathvayu.cdac.in ಮೂಲಕ ನೋಂದಣಿ ಮಾಡಿಕೊಳ್ಳಬಹುದು.
ಅರ್ಜಿ ಸಲ್ಲಿಸಲು 17 1/2 ವರ್ಷದಿಂದ 21 ವರ್ಷ ವಯಸ್ಸಿನವರು ಮತ್ತು ಪಿಯುಸಿ/ ತತ್ಸಮಾನ ಪರೀಕ್ಷೆಯಲ್ಲಿ ಕಲಾ, ವಾಣಿಜ್ಯ, ವಿಜ್ಞಾನ ಮತ್ತು ಯಾವುದೇ ವಿಷಯದಲ್ಲಿ ಡಿಪ್ಲೊಮಾ ವಿಭಾಗದಲ್ಲಿ ಶೇ.50 ಅಂಕಗಳೊಂದಿಗೆ ಹಾಗೂ ಇಂಗ್ಲೀಷ್ ಪರೀಕ್ಷೆಯಲ್ಲಿ ಶೇ.50 ರೊಂದಿಗೆ ತೇರ್ಗಡೆ ಹೊಂದಿರಬೇಕು.
ಹೆಚ್ಚಿನ ಮಾಹಿತಿಗೆ ಉದ್ಯೋಗಾಧಿಕಾರಿ, ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ, ಮಡಿಕೇರಿ ಇವರನ್ನು ಖುದ್ದಾಗಿ ಅಥವಾ ದೂ.ಸಂ. 08272-225851 ನ್ನು ಸಂಪರ್ಕಿಸಬಹುದು ಎಂದು ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯ ಉದ್ಯೋಗಾಧಿಕಾರಿ ಉಮಾ ಅವರು ತಿಳಿಸಿದ್ದಾರೆ.











