ವಿರಾಜಪೇಟೆ ಜ.11 : ಒಗ್ಗಟ್ಟಿನ ಬಲ ಇದ್ದಾಗ ಮಾತ್ರ ಕೊಡವ ಜನಾಂಗ ಉಳಿಯಲು ಸಾಧ್ಯ. ಕೊಡವ ಪೊಮ್ಮಕ್ಕಡ ಕೂಟ ಜನಾಂಗದ ಅಭಿವೃದ್ಧಿಗೆ ಶ್ರಮಿಸುವ ಮೂಲಕ ಏಳಿಗೆಯನ್ನು ಪಡೆಯಲೆಂದು ಬಾಳುಗೊಡು ಕೊಡವ ಸಮಾಜಗಳ ಒಕ್ಕೂಟದ ಅಧ್ಯಕ್ಷ ಕಳ್ಳಿಚಂಡ ವಿಷ್ಣು ಕಾರ್ಯಪ್ಪ ಹೇಳಿದರು.
ಕೊಡವ ಪೊಮ್ಮಕ್ಕಡ ಕೂಟದ ವತಿಯಿಂದ ಕೊಡವ ಸಮಾಜದ ಆವರಣದಲ್ಲಿ ನಡೆದ ಪುತ್ತರಿ ಒತ್ತೊರ್ಮೆ ಕೂಟದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಕಳ್ಳಿಚಂಡ ವಿಷ್ಣು ಕಾರ್ಯಪ್ಪ ಅವರು, ತಾಯಿಯೇ ನಮ್ಮ ಮೊದಲ ಗುರು. ನಾವು ಭೂಮಿ ತಾಯಿಯನ್ನು ಪೂಜೆ ಮಾಡುವವರು. ಭೂಮಿಗೆ ತಾಯಿಯ ಸ್ಥಾನ ನೀಡಿದ್ದೇವೆ. ಹಾಗಾಗಿ ತಾಯಿ, ಹೆಂಡತಿ, ಮಕ್ಕಳು ಎಲ್ಲರಲ್ಲೂ ಪೂಜನೀಯ ಭಾವದಿಂದ ಕಾಣಬೇಕು ಎಂದರು.
ಹೆಣ್ಣಿನ ಪಾತ್ರ ಮಹತ್ವದಾಗಿದ್ದು, ಪ್ರತಿಯೊಬ್ಬರ ಯಶಸ್ಸಿನ ಹಿಂದೆ ಮಹಿಳೆ ಇದ್ದಾಳೆ. ತಾಯಿ ಮಕ್ಕಳಿಗೆ ಮೊದಲು ಸಂಸ್ಕಾರ ಕಲಿಸಬೇಕು. ಜೊತೆಗೆ ವಿದ್ಯೆ ಕೊಡಬೇಕು. ಬುದ್ದಿ ಹೇಳಬೇಕು. ಮಕ್ಕಳನ್ನು ಆಸ್ತಿಯಾಗಿ ಮಾಡಿ ಅವರನ್ನು ಓದಿಸಿ ಅವರ ಕಾಲಮೇಲೆ ಅವರನ್ನು ನಿಲ್ಲುವಂತೆ ಮಾಡಿ ಎಂದು ಕಿವಿಮಾತು ಹೇಳಿದರು.
ಕೊಡವರಿಗೆ ಎಸ್ಟಿ ಟ್ಯಾಗ್ ದೊರೆತಲ್ಲಿ ನಮ್ಮ ಸಮುದಾಯ ಮತ್ತಷ್ಟು ಮುಂದುವರೆಯಲು ಸಾಧ್ಯವಾಗುತ್ತದೆ. ಎಲ್ಲರಿಗೂ ಸಮಯದ ಮಹತ್ವ ತಿಳಿದಿರಬೇಕು. ಹಾಗಿದ್ದಲ್ಲಿ ಮಾತ್ರ ಸಮಾಜದಲ್ಲಿ, ಜೀವನದಲ್ಲಿ ಮುಂದುವರೆಯಲು ಸಾಧ್ಯ ಎಂದರು.
ಬಾಳುಗೊಡು ಸಮಾಜದಲ್ಲಿ ಮುಂದಿನ ಬಾರಿ ಹುತ್ತರಿ ಹಬ್ಬ ಆಚರಣೆ ಮಾಡುವುದಾಗಿ ತಿಳಿಸಿದರಲ್ಲದೆ ನಮ್ಮ ಸಮುದಾಯದಲ್ಲಿ ಹೆಚ್ಚು ಮಕ್ಕಳು ಬೇಕು. ಹಾಗೆಯೇ ಅವರನ್ನು ಸರಿಯಾದ ದಾರಿಯಲ್ಲಿ ನಡೆಯುವಂತೆ ಮಾಡಬೇಕು. ಕೊಡವರ ಅಭಿವೃದ್ಧಿ ನಮ್ಮ ಸಮಾಜದ ಅಭಿವೃದ್ಧಿ ಆಗಬೇಕು ಎಂದರು.
ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದ ಕಳ್ಳಿಚಂಡ ಶಾಲಿನಿ ಕಾರ್ಯಪ್ಪ, ದೇವರು ಹೆಣ್ಣಿಗೆ ಒಂದು ಅದ್ಬುತ ಶಕ್ತಿ ನೀಡಿರುತ್ತಾರೆ. ತಾಯಿ ಎನ್ನುವುದು ಬಿಂಬ. ಎಲ್ಲಾ ಕೆಲಸವನ್ನು ಸಮಚಿತ್ತದಿಂದ ನಿಭಾಯಿಸುವುದು ನಮ್ಮ ಕರ್ತವ್ಯ ಎಂದರು.
ಇತ್ತಿಚೆಗೆ ನಮ್ಮ ಹೆಣ್ಣು ಮಕ್ಕಳು ಬಹಳ ದಿಕ್ಕು ತಪ್ಪುವ ಸಾಧ್ಯತೆ ಹೆಚ್ಚಾಗುತ್ತಿದೆ. ಅದನ್ನು ಪೋಷಕರು ಸಮರ್ಥಿಸಬಾರದು. ಅವರಿಗೆ ಬುದ್ದಿ ಹೇಳಿ ಅವರ ಜೀವನ ಸುಧಾರಿಸಲು ತಂದೆ ತಾಯಿ ದಾರಿ ದೀಪವಾಗಬೇಕು, ಹಿರಿಯರಿಗೆ ಗೌರವ ನೀಡಬೇಕೆಂದು ಸಲಹೆ ನೀಡಿದರು.
ಮಹಿಳೆಯರು ದಿನನಿತ್ಯ ಯೋಗ, ದ್ಯಾನ ಮಾಡುವ ಅಭ್ಯಾಸವನ್ನಿಟ್ಟುಕೊಳ್ಳಬೇಕು ಎಂದ ಅವರು, ಇದರಿಂದ ಸಮಸ್ಯೆಗಳು ಪರಿಹಾರವಾಗಲಿದ್ದು, ದಿನನಿತ್ಯದ ಒತ್ತಡ ಕಡಿಮೆಯಾಗುತ್ತದೆ ಎಂದು ಸಲಹೆ ನೀಡಿದರು.
ಚುಮ್ಮಕ್ಕ ಗ್ರೂಪ್‍ನ ಅಧ್ಯಕ್ಷೆ ಉದ್ದಪಂಡ ವಿಮಲ ಮಾತನಾಡಿ, ಎಲ್ಲಾ ಮಹಿಳೆಯರಿಗೂ ವೇದಿಕೆ ದೊರಕುವಂತಾಗಿದೆ. ಜಂಜಾಟದ ನಡುವೆ ಇರುವ ಮಹಿಳೆಯರಿಗೆ ಈ ರೀತಿಯ ಕಾರ್ಯಕ್ರಮ ಒಂದು ವೇದಿಕೆ ಕಲ್ಪಿಸಿದೆ, ಎಲ್ಲರಿಗೂ ಶುಭವಾಗಲಿ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕೊಡವ ಪೊಮ್ಮಕ್ಕದ ಒಕ್ಕೂಟದ ಅಧ್ಯಕ್ಷೆ ಮನೆಯಪಂಡ ಕಾಂತಿ ಸತೀಶ್, ಕೊಡವ ಸಮುದಾಯದಲ್ಲಿ ಮಕ್ಕಳ ಸಂಖ್ಯೆ ಕ್ಷೀಣಿಸುತ್ತಿದೆ. ಇದು ಹೀಗೆ ಮುಂದುವರೆಯಬಾರದು. ಮನೆ ತುಂಬ ಮಕ್ಕಳಿರಬೇಕು. ಈ ನಿಟ್ಟಿನಲ್ಲಿ ಪೋಷಕರು ತಮ್ಮ ಮಕ್ಕಳಿಗೆ ತಿಳಿ ಹೇಳಿ ಕೊಡವ ಜನಾಂಗದ ಅಭಿವೃದ್ಧಿಗೆ ಸಹಕರಿಸಬೇಕು ಎಂದು ಕರೆ ನೀಡಿದರು.
ಕೂಟದ ಹಿರಿಯ ಸಲಹೆಗಾರರಾದ ನಾಯಕಂಡ ಬೇಬಿ ಚಿಣ್ಣಪ್ಪ ಕೊಡವ ಸಂಪ್ರದಾಯದಂತೆ ತಪ್ಪಡಕ ಕಟ್ಟುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಅತಿಥಿ ಗಣ್ಯರು ಸಾಂಪ್ರದಾಯಿಕ ಉಡುಪು ಧರಿಸಿ ದೇವರ ನೆಲೆಯಲ್ಲಿ ಕದಿರು ಕಟ್ಟಿ, ಅಕ್ಕಿ ಹಾಕಿ ಸರ್ವರಿಗೂ ಒಳಿತಾಗಲಿ ಎಂದು ಪ್ರಾರ್ಥಿಸಿದರು.
ಕಾರ್ಯಕ್ರಮದಲ್ಲಿ ಪುಚ್ಚಿಮಂಡ ರಾಧಾ ಕಾರ್ಯಪ್ಪ, ಮುಂಡಂಡ ರಾಣು ಮಂದಣ್ಣ, ಪಾಲಚಂಡ ಸೀಮಾ ಹಾಗೂ ಮುಖ್ಯ ಅತಿಥಿಗಳಾಗಿದ್ದ ಕಳ್ಳಿಚಂಡ ವಿಷ್ಣು ಕಾರ್ಯಪ್ಪ ಹಾಗೂ ಶಾಲಿನಿ ಕಾರ್ಯಪ್ಪ ಅವರನ್ನು ಒಕ್ಕೂಟದ ವತಿಯಿಂದ ಸನ್ಮಾನಿಸಿ, ಗೌರವಿಸಲಾಯಿತು.
ಕೂಟದ ಉಪಾಧ್ಯಕ್ಷೆ ಅಮ್ಮುಣಿಚಂಡ ಈಶ್ವರಿ ಗಂಗಮ್ಮ, ಸಲಹಾ ಸಮಿತಿ ಸದಸ್ಯರಾದ ಬಿದ್ದಂಡ ರಾಣಿ ಹಾಗೂ ನಾಯಕಂಡ ಬೇಬಿ ಚಿಣ್ಣಪ್ಪ ಹಾಜರಿದ್ದರು.
ಚುಮ್ಮಕ್ಕ ಗುಂಪಿನ ಸದಸ್ಯರು ಸ್ವಾಗತ ನೃತ್ಯ, ಕೋಲಾಟ ಹಾಗೂ ಇತರ ನೃತ್ಯ ಪ್ರದರ್ಶನ ನೀಡಿದರು. ಇದೆ ಸಂದರ್ಭ ಹಾಡು ನೃತ್ಯ ಪ್ರದರ್ಶನ ನೆರೆದವರ ಮೆಚ್ಚುಗೆಗೆ ಪಾತ್ರವಾಯಿತು.
ಕೊನೆಯಲ್ಲಿ ಮಹಿಳೆಯರಿಗೆ ವಿವಿಧ ಸ್ಪರ್ಧೆ ಹಾಗೂ ವಾಲಗತ್ತಾಟ್ ಸ್ಪರ್ಧೆ, ಸೀರೆಯ ಬೆಲೆ ಹೇಳುವ ಸ್ಪರ್ಧೆ ನಡೆದು ವಿಜೇತರಿಗೆ ಬಹುಮಾನ ನೀಡಲಾಯಿತು.
ಕೊಡವ ಪೊಮ್ಮಕ್ಕಡ ಒಕ್ಕೂಟದ ಕಾರ್ಯದರ್ಶಿ ಬಯವಂಡ ಇಂದಿರಾ ಬೆಳ್ಯಪ್ಪ ಸ್ವಾಗತಿಸಿದರೆ, ಮಾಳೇಟಿರ ಕವಿತಾ ಶ್ರೀನಿವಾಸ್ ನಿರೂಪಿಸಿದರು. ಖಜಾಂಚಿ ತಾತಂಡ ಯಶು ಕಬೀರ್ ವಂದಿಸಿದರು.
Breaking News
- *ಸೋಮವಾರಪೇಟೆ : ಹಾಡಹಗಲೇ ಮಹಿಳೆಯ ಸರ, ಹಣ ಕದ್ದ ಚೋರರಿಗೆ ಗೂಸ*
- *ವೀರ ಸೇನಾನಿಗಳಿಗೆ ಅವಮಾನ : ವೀರಶೈವ ಲಿಂಗಾಯತ ಸಂಘಟನಾ ವೇದಿಕೆಯ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಎಸ್.ಮಹೇಶ್ ಖಂಡನೆ*
- *ಕಿಡಿಗೇಡಿಯ ಗಡಿಪಾರಿಗೆ ಮತ್ತು ಉನ್ನತ ಮಟ್ಟದ ತನಿಖೆಗೆ ಕೊಡವ ನ್ಯಾಷನಲ್ ಕೌನ್ಸಿಲ್ ಒತ್ತಾಯ*
- *ವಾರ ಭವಿಷ್ಯ: ನ.25 ರಿಂದ ಡಿ.1ರ ವರೆಗೆ ಯಾರ ಭವಿಷ್ಯ ಹೇಗಿದೆ…*
- *ವೀರ ಸೇನಾನಿಗಳನ್ನು ಅವಮಾನಿಸಿದವರನ್ನು ಗಡಿಪಾರು ಮಾಡದಿದ್ದರೆ ಕೊಡಗು ಬಂದ್ : ಜಬ್ಬೂಮಿ ಸಂಘಟನೆ ಎಚ್ಚರಿಕೆ*
- *ಹೊದ್ದೂರಿನ ಕಬಡಕೇರಿ ಗ್ರಾಮದಲ್ಲಿ ಸ್ವಚ್ಛತಾ ಶ್ರಮದಾನ*
- *ಕೊಡಗು ಕೃಷಿ ವಿಜ್ಞಾನ ವೇದಿಕೆಯ ಬೆಳ್ಳಿ ಮಹೋತ್ಸವ : ನ.26 ರಂದು ರೈತ ಮೇಳ*
- *ಡಿ.1 ರಂದು ಗಾಳಿಬೀಡುವಿನಲ್ಲಿ ಬಾಣೆ ಹಬ್ಬ*
- *ನ.26 ರಂದು ಮಡಿಕೇರಿಯಲ್ಲಿ ಜಿಕೀರ್, ಜಾರಿ ಮತ್ತು ನಾತೆ-ರಸುಲ್” ಗಾಯನ*
- *ವಿಶ್ವಾಸ್ ವೆಂಕಟ್ ಗೆ ಟೇಬಲ್ ಟೆನ್ನಿಸ್ ನಲ್ಲಿ ರನ್ನರ್ ಪ್ರಶಸ್ತಿ*