ವಿರಾಜಪೇಟೆ ಜ.11: ಶಿಕ್ಷಣ ಇಲಾಖೆಯ ಆದೇಶದಂತೆ ಅಕ್ಷರ ದಾಸೋಹದ ಸಹಾಯಕ ನಿರ್ದೇಶಕ ರಾಜೇಶ್ ಅವರ ಮಾರ್ಗದರ್ಶನದಲ್ಲಿ ಅಮ್ಮತ್ತಿ ಒಂಟಿ ಅಂಗಡಿ ಕ್ಲಸ್ಟರ್ ಮಟ್ಟದಲ್ಲಿ ದೇವಣಗೇರಿ ಶಾಲೆಯಲ್ಲಿ ಅಡುಗೆ ಸಿಬ್ಬಂದಿಗಳಿಗೆ ಅಡುಗೆ ಸ್ಪರ್ಧೆ ನಡೆಯಿತು.
ತೀರ್ಪುಗಾರರಾಗಿ ಶಿಕ್ಷಣ ಸಂಯೋಜಕರಾದ ಮಾರ್ಗರೇಟ್ ಮತ್ತು ವಿಶಾಲಶ್ರೀ ಹಾಗೂ ವಿರಾಜಪೇಟೆ ಮತ್ತು ಕಲ್ತೋಡು ಕ್ಲಸ್ಟರ್ ಸಿಆರ್ಪಿ ವೆಂಕಟೇಶ್ ಕಾರ್ಯನಿರ್ವಹಿಸಿದರು.
ಇದೇ ಸಂದರ್ಭ ಪ್ರಥಮ ದ್ವಿತೀಯ, ತೃತೀಯ ಸ್ಥಾನ ಪಡೆದ ವಿಜೇತರಿಗೆ ಬಹುಮಾನವನ್ನು ನೀಡಿ ಗೌರವಿಸಲಾಯಿತು.
ಭಾಗವಹಿಸಿದ ಎಲ್ಲಾ ಅಡುಗೆ ಸಿಬ್ಬಂದಿಗಳಿಗೆ ಪ್ರೋತ್ಸಾಹಕರ ಬಹುಮಾನವನ್ನು ನೀಡಲಾಯಿತು.