ಮಡಿಕೇರಿ ಜ.11 : ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷರು, ಹಿರಿಯ ಸಾಹಿತಿಗಳೂ ಆದ ಎಸ್.ಸಿ.ರಾಜಶೇಖರ್ ಅವರು ಮೈಸೂರಿನಲ್ಲಿ ನಿಧನರಾಗಿದ್ದಾರೆ.
ವಯೋಸಹಜವಾದ ಅನಾರೋಗ್ಯದಿಂದ ಬಳಲುತ್ತಿದ್ದ ರಾಜಶೇಖರ್ ಅವರು ಮೈಸೂರಿನ ಜೆಪಿ.ನಗರದ ಮಗನ ಮನೆಯಲ್ಲಿ ನೆಲೆಸಿದ್ದರು. ಇವರು ಜ.10 ರಂದು ಕೊನೆಯುಸಿರೆಳೆದಿದ್ದಾರೆ.
ರಾಜಶೇಖರ ಅವರು ವ್ಯಾಪಕ ಓದಿನ ಉಪನ್ಯಾಸಕರು, ಸಾಹಿತಿಗಳು ಆಗಿದ್ದರು. ಅವರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಜಿಲ್ಲೆಯಲ್ಲಿ ಹಲವು ಸಾಹಿತ್ಯ ಪರ ಚಟುವಟಿಕೆಗಳನ್ನು ನಡೆಸಿದ್ದರು.
:: ಸಂತಾಪ ::
ರಾಜಶೇಖರ್ ಅವರ ನಿಧನಕ್ಕೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕೇಶವ ಕಾಮತ್, ಮಾಜಿ ಅಧ್ಯಕ್ಷರಾದ ಎಂ.ಎಸ್.ಪೂವಯ್ಯ, ಟಿ.ಪಿ.ರಮೇಶ್, ಲೋಕೇಶ್ ಸಾಗರ್, ಮಾಜಿ ಕಾರ್ಯದರ್ಶಿ ಜೆ.ಸೋಮಣ್ಣ ಸಂತಾಪ ಸೂಚಿಸಿದ್ದಾರೆ.









