ಮಡಿಕೇರಿ ಜ.11 : ಭಾರತ ಔಷಧಿ ವ್ಯಾಪಾರಿಗಳ ಸಂಘದ ಸಂಘಟನಾ ಕಾಯ೯ದಶಿ೯ಯಾಗಿ ಆಯ್ಕೆಯಾದ ಮಡಿಕೇರಿಯ ಸಪ್ತಗಿರಿ ಔಷಧಿ ಮಾರಾಟ ಸಂಸ್ಥೆಯ ಉದ್ಯಮಿ ಅಂಬೆಕಲ್ ಜೀವನ್ ಕುಶಾಲಪ್ಪ ಅವರನ್ನು ಕನಾ೯ಟಕ ರಾಜ್ಯ ಔಷಧಿ ವ್ಯಾಪಾರಿಗಳ ಸಂಘದ ವತಿಯಿಂದ ಸನ್ಮಾನಿಸಲಾಯಿತು.
ಬೆಂಗಳೂರಿನ ನಗರಬಾವಿಯಲ್ಲಿರುವ ಕಿಂಗ್ಸ್ ಕ್ಲಬ್ ನಲ್ಲಿ ಆಯೋಜಿತ ಸಮಾರಂಭದಲ್ಲಿ ಅಂಬೆಕಲ್ ಜೀವನ್ ಕುಶಾಲಪ್ಪ ಅವರನ್ನು ರಾಜ್ಯ ಔಷಧಿ ವ್ಯಾಪಾರಿಗಳ ಸಂಘದ ಅಧ್ಯಕ್ಷ ರಘುನಾಥ ರೆಡ್ಡಿ, ಅಖಿಲ ಭಾರತ ಔಷಧ ವ್ಯಾಪಾರಿಗಳ ಸಂಘದ ಅಧ್ಯಕ್ಷ ಜಗನ್ನಾಥ್ ಸಿಂಧೆ, ರಾಷ್ಟ್ರೀಯ ಕಾಯ೯ದಶಿ೯ ರಾಜೀವ್ ಸಿಂಘಾಲ್, ದಕ್ಷಿಣ ವಲಯ ಉಪಾಧ್ಯಕ್ಷ ಮೋಹನ್, ಮತ್ತಿತರರು ಗೌರವಿಸಿ ಸನ್ಮಾನಿಸಿದರು. ಇದೇ ಸಂದಭ೯ ರಾಜ್ಯದ ವಿವಿಧ ಜಿಲ್ಲೆಗಳ ಔಷಧಿ ವ್ಯಾಪಾರಸ್ಥರ ಸಂಘದ ವತಿಯಿಂದಲೂ ಜೀವನ್ ಅವರನ್ನು ಸನ್ಮಾನ ಮಾಡಲಾಯಿತು.
ಜೀವನ್ ಅವರು ರಾಷ್ಟ್ರೀಯ ಮಟ್ಟದಲ್ಲಿ ಔಷಧಿ ವ್ಯಾಪಾರಿಗಳ ವಿವಿಧ ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುವ ಭರವಸೆ ತಮಗಿದ್ದು, ಪಾಂಡಿಚೇರಿ, ಲಕ್ಷ್ದದ್ವೀಪದಲ್ಲಿ ಸಂಘಟನೆ ಬಲಗೊಳಿಸುವ ನಿಟ್ಟಿನಲ್ಲಿ ಹೆಚ್ಚಿನ ಮುತುವಜಿ೯ ವಹಿಸಲು ಜೀವನ್ ಅವರನ್ನು ಅಲ್ಲಿನ ಉಸ್ತುವಾರಿಯನ್ನಾಗಿ ನಿಯೋಜಿಸಲಾಗಿದೆ ಎಂದು ರಾಷ್ಟ್ರೀಯ ಅಧ್ಯಕ್ಷ ಜಗನ್ನಾಥ್ ಶಿಂಧೆ ಹೇಳಿದರು.
ಈ ಸಂದಭ೯ ಮಾತನಾಡಿದ ಜೀವನ್ ಕುಶಾಲಪ್ಪ, ಕೊಡಗು ಜಿಲ್ಲೆಯಲ್ಲಿ ಕಳೆದ ವಷ೯ಗಳಿಂದ ಔಷದಿ ಸಗಟು ವಹಿವಾಟು ನಡೆಸುತ್ತಿರುವ ತನ್ನನ್ನು ರಾಜ್ಯ ಸಂಘದ ಪದಾಧಿಕಾರಿಗಳು ರಾಷ್ಟ್ರೀಯ ಸಂಘದ ಸಂಘಟನಾ ಕಾಯ೯ದಶಿ೯ಯಾಗಿ ಆಯ್ಕೆಯಾಗಲು ಅವಕಾಶ ನೀಡಿದ್ದು ಸಂತೋಷ ತಂದಿದೆ. ಮುಂದಿನ ದಿನಗಳಲ್ಲಿ ಔಷಧಿ ವ್ಯಾಪಾರಸ್ಥರ ವಿವಿಧ ಸಮಸ್ಯೆಗಳ ಪರಿಹಾರ ಸಂಬಂಧಿತ ರಾಷ್ಟ್ರಮಟ್ಟದಲ್ಲಿ ಚಚಿ೯ಸುವುದಾಗಿ ಭರವಸೆ ನೀಡಿದರು. ಸದ್ಯದಲ್ಲಿಯೇ ಮಡಿಕೇರಿಯಲ್ಲಿ ಕೊಡಗು ಜಿಲ್ಲಾ ಔಷಧಿ ವ್ಯಾಪಾರಿಗಳ ಸಂಘದ ನೂತನ ಕೆಮಿಸ್ಟ್ ಭವನಕ್ಕೆ ಭೂಮಿಪೂಜೆ ನೆರವೇರಿಸುವುದಾಗಿಯೂ ಸಂಘದ ಜಿಲ್ಲಾಧ್ಯಕ್ಷ ಜೀವನ್ ಭರವಸೆ ನೀಡಿದರು.
ಅಂಬೆಕಲ್ ಕುಶಾಲಪ್ಪ, ಸುಶೀಲಾ ಕುಶಾಲಪ್ಪ, ಸುಮಾಜೀವನ್, ಜಿಲ್ಲಾ ಚೇಂಬರ್ ಆಫ್ ಕಾಮಸ್೯ ಪ್ರಧಾನ ಕಾಯ೯ದಶಿ೯ ಅಂಬೆಕಲ್ ನವೀನ್, ಕೊಡಗು ಔಷಧಿ ವ್ಯಾಪಾರಿಗಳ ಸಂಘದ ನಿದೇ೯ಶಕರಾದ ಪುರುಷೋತ್ತಮ್, ವಸಂತ್ ಕುಮಾರ್, ಪ್ರಸಾದ್ ಗೌಡ ಹಾಜರಿದ್ದರು.