ನಾಪೋಕ್ಲು ಜ.12 : ಕಾರು ಮತ್ತು ಜೀಪಿನ ನಡುವೆ ಅಪಘಾತ ಸಂಭವಿಸಿ ಕೊಡಗಿನ ಕೊಡಗಿನ ಮಹಿಳೆಯೊಬ್ಬರು ಮೃತಪಟ್ಟಿರುವ ಘಟನೆ ರಾಮನಗರದಲ್ಲಿ ನಡೆದಿದೆ. ಕುಶಾಲನಗರ ಸಮೀಪ ಬೈಲುಕುಪ್ಪೆ ನಿವಾಸಿ ಬಿ.ಎಂ.ಸುಬ್ಬಯ್ಯ ಎಂಬುವವರ ಪತ್ನಿ ನೇತ್ರಾವತಿ (29) ಮೃತ ದುರ್ದೈವಿ. ಬಿ.ಎಮ್. ಸುಬ್ಬಯ್ಯ ತಮ್ಮ ಕಾರಿನಲ್ಲಿ ಅವರ ಪತ್ನಿ ನೇತ್ರಾವತಿ, ಪುತ್ರ ದಿವಿತ್ ಹಾಗೂ ಅಕ್ಕ ಮೂರ್ನಾಡು ನಿವಾಸಿ ಜಯಂತಿ ಅವರೊಂದಿಗೆ ಬೆಂಗಳೂರಿನಿಂದ ಕುಶಾಲನಗರಕ್ಕೆ ಬರುವ ಸಂದರ್ಭ ರಾಮನಗರದಲ್ಲಿ ಕಾರು ಮತ್ತು ಜೀಪಿನ ನಡುವೆ ಅಪಘಾತ ಸಂಭವಿಸಿದೆ. ನೇತ್ರಾವತಿ ಮೃತಪಟ್ಟಿದ್ದು, ಬಿ.ಎಮ್. ಸುಬ್ಬಯ್ಯ(38), ಪುತ್ರ ಮೂರೂವರೆ ವರ್ಷದ ದಿವಿತ್ ಹಾಗೂ ಅಕ್ಕ ಜಯಂತಿ (40) ಕೆಂಗೇರಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಈ ಬಗ್ಗೆ ರಾಮನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.
ನೇತ್ರಾವತಿ ಅವರ ಅಂತ್ಯಕ್ರಿಯೆ ಸುಬ್ಬಯ್ಯ ಅವರ ತೋಟದ ಮನೆ ಗೋಣಿಕೊಪ್ಪಲು, ಮಾಯಾಮುಡಿಯಲ್ಲಿ ನೆರವೇರಿತು. ವರದಿ : ದುಗ್ಗಳ ಸದಾನಂದ









