ನಾಪೋಕ್ಲು ಜ.12 : ಅಯೋಧ್ಯೆಯಲ್ಲಿ ಜ.22 ರಂದು ನಡೆಯುವ ಶ್ರೀರಾಮ ಪ್ರಾಣ ಪ್ರತಿಷ್ಠಾಪನಾ
ಕಾರ್ಯಕ್ರಮದ ಅಂಗವಾಗಿ ಪಾಲೂರು ಗ್ರಾಮದಲ್ಲಿ ಮನೆ ಮನೆಗೆ ಪವಿತ್ರ ಮಂತ್ರಾಕ್ಷತೆ ವಿತರಣೆ ಮಾಡಲಾಯಿತು.
ಪಾಲೂರು ಶ್ರೀ ಮಹಾಲಿಂಗೇಶ್ವರ ದೇವಾಲಯದಲ್ಲಿ ಮಂತ್ರಾಕ್ಷತೆಗೆ ವಿಶೇಷ ಪೂಜೆ ಸಲ್ಲಿಸಿ ನಂತರಹಿಂದೂ ಸಂಘಟನೆಯ ಪ್ರಮುಖರು ಮಂತ್ರಾಕ್ಷತೆಯನ್ನು ಪಾಲೂರು ಗ್ರಾಮ ವ್ಯಾಪ್ತಿಯ ಮನೆ ಮನೆಗಳಿಗೆ ವಿತರಿಸಿದರು.
ಈ ಸಂದರ್ಭ ಸೂದನ ಮದನ್, ಸೂದನ ಸುಜಿ, ಬೈತಾಡ್ಕ ಡೆಲಿವಿ ದೇವಯ್ಯ, ಎಡಿಕೇರಿ ಪ್ರವೀಣ ಸೇರಿದಂತೆ ಮುಖ್ಯ ಪಟ್ಟವರು ಭಾಗವಹಿಸಿದ್ದರು.
ವರದಿ : ದುಗ್ಗಳ ಸದಾನಂದ








