ವಿರಾಜಪೇಟೆ ಜ.12 : ಕರ್ನಾಟಕ ಸ್ಪೋರ್ಟ್ಸ್ ಡ್ಯಾನ್ಸ್ ಅಸೋಸಿಯೇಷನ್ ವತಿಯಿಂದ ಮಂಡ್ಯದಲ್ಲಿ ನಡೆದ ರಾಜ್ಯಮಟ್ಟದ ನೃತ್ಯ ಸ್ಪರ್ಧೆಯಲ್ಲಿ ವಿರಾಜಪೇಟೆಯ ಟೀಂ ಇಂಟೋಪೀಸ್ ತಂಡ 9 ಚಿನ್ನ, 5 ಬೆಳ್ಳಿ, 4 ಕಂಚಿನ ಪದಕವನ್ನು ಗೆದ್ದುಗೊಂಡು ರಾಷ್ಟ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದೆ.
ವಿದ್ಯಾರ್ಥಿಗಳು ನೃತ್ಯ ತರಬೇತುದಾರರಾದ ವಿಷ್ಣು ಅವರ ಬಳಿ ತರಬೇತಿ ಪಡೆಯುತ್ತಿದ್ದು, ಫೆ.5ರಂದು ಜಮ್ಮುವಿನಲ್ಲಿ ನಡೆಯುವ ರಾಷ್ಟ ಮಟ್ಟದ ಸ್ಪರ್ಧೆ ನಡೆಯಲಿದೆ.










