ಮಡಿಕೇರಿ ಜ.12 : ಶ್ರೀ ಕಾವೇರಮ್ಮೆ ಕೊಡವ ಮತ್ತು ಅಮ್ಮಕೊಡವ ಹಿತರಕ್ಷಣಾ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಜ.15 ರಂದು ಕಾವೇರಿ ಕ್ಷೇತ್ರ ಭಾಗಮಂಡಲದ ಟ್ರಸ್ಟ್ ನ ಜಾಗದಲ್ಲಿ `ಚಂಡಿಕಾ ಹೋಮ’ ನಡೆಯಲಿದೆ ಎಂದು ಟ್ರಸ್ಟ್‍ನ ಅಧ್ಯಕ್ಷ ಮುದ್ದಂಡ ಬಿ.ದೇವಯ್ಯ ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಪುತ್ತೂರಿನ ಸುಬ್ರಹ್ಮಣ್ಯ ಬೆಳ್ಳೂಕರಾಯ ಅವರ ನೇತೃತ್ವದಲ್ಲಿ ಬೆಳಗ್ಗೆ 7 ಗಂಟೆಯಿಂದ ಶ್ರೀ ಗಣಪತಿ ಹೋಮ, ಶ್ರೀ ಸತ್ಯನಾರಾಯಣ ಸ್ವಾಮಿ ಪೂಜೆ, ಶತರುದ್ರ ಪಠಣ ಹಾಗೂ ಚಂಡಿಕಾ ಹೋಮ ನಡೆಯಲಿದೆ ಎಂದರು.
ಜಿಲ್ಲೆಯ ಕೊಡವ ಮತ್ತು ಅಮ್ಮಕೊಡವ ಜನಾಂಗ ಬಾಂಧವರು ಒಂದಾಗಿ ಸೇರಿ ಟ್ರಸ್ಟ್ ನ ಸಹಯೋಗದಲ್ಲಿ ಚಂಡಿಕಾ ಹೋಮವನ್ನು ಆಯೋಜಿಸಿಕೊಂಡು ಬರಲಾಗುತ್ತಿದೆ. ಪುರಾಣಗಳಲ್ಲಿ ಪ್ರಸ್ತಾಪವಾಗಿರುವಂತೆ ಅಗಸ್ತ್ಯ ಮುನಿಗಳು ಮತ್ತು ಕಾವೇರಿಯ ನಡುವೆ ಕಲಹವೇರ್ಪಟ್ಟಾಗ ಕಾವೇರಿಯ ಪರವಾಗಿ ನಿಂತ ಕೊಡವರಿಗೆ ಮತ್ತು ಅಮ್ಮ ಕೊಡವರಿಗೆ ಅಗಸ್ತ್ಯ ಮುನಿಗಳು ಶಾಪ ನೀಡಿದ್ದರು. ಈ ಬಗ್ಗೆ ಅಷ್ಟಮಂಗಲ ಪ್ರಶ್ನೆಯಲ್ಲಿ ಬಂದ ಪರಿಹಾರ ಕ್ರಮಗಳಂತೆ ಕಾವೇರಿಯ ಕ್ಷೇತ್ರದಲ್ಲಿ `ಚಂಡಿಕಾ ಹೋಮ’ವನ್ನು ನಡೆಸಿಕೊಂಡು ಬರಲಾಗುತ್ತಿದೆ ಎಂದು ತಿಳಿಸಿದರು.
ಈ ಹಿಂದಿನಿಂದಲೂ ನಡೆಸಿಕೊಂಡು ಬಂದ ಪೂಜಾ ಕಾರ್ಯದಲ್ಲಿ ಸಂಗ್ರಹವಾದ ಹೆಚ್ಚುವರಿ ಹಣವನ್ನು ಕ್ರೋಢಿಕರಿಸಿಕೊಂಡು, ಭಾಗಮಂಡಲದ ಶ್ರೀ ಭಗಂಡೇಶ್ವರ ದೇವಾಲಯದ ಮುಂಭಾಗದ ಗದ್ದೆಯ ಒತ್ತಿನಲ್ಲಿ 50 ಸೆಂಟು ಜಾಗವನ್ನು ಖರೀದಿಸಲಾಗಿದೆ. ಇಲ್ಲಿ ಜನಾಂಗದ ಅನುಕೂಲಕ್ಕಾಗಿ ಒಂದು ಸಭಾಂಗಣ, ಊಟದ ವ್ಯವಸ್ಥೆಗಾಗಿ ಅಡುಗೆ ಕೋಟೆ ಹಾಗೂ ಭೋಜನಾಲಯ ನಿರ್ಮಿಸಲಾಗುವುದು.
ಹೊರ ಪ್ರದೇಶದಲ್ಲಿರುವ ಕೊಡವ ಜನಾಂಗ ಬಾಂಧವರು ಕಾವೇರಿಗೆ ಬಂದು ಉಳಿದುಕೊಳ್ಳಲು ಅನುಕೂಲವಾಗುವಂತೆ ಭವನ ನಿರ್ಮಿಸಲು ತೀರ್ಮಾನಿಲಾಗಿದೆ. ಸರಕಾರದಿಂದ ಆರ್ಥಿಕ ಸಹಾಯವನ್ನು ಪಡೆಯಲು ಪ್ರಸ್ತವಾನೆಯನ್ನು ಸಲ್ಲಿಸಲಾಗಿದೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಟ್ರಸ್ಟ್ ನ ಕಾರ್ಯದರ್ಶಿ ಮುಕ್ಕಾಟ್ಟಿರ ಎಂ.ನಾಣಯ್ಯ, ಟ್ರಸ್ಟಿಗಳಾದ ಟಿ.ಡಿ.ಶ್ಯಾಮಲ, ತೋಲಂಡ ಸೋಮಯ್ಯ ಹಾಗೂ ಅಂಚೆಟ್ಟಿರ ಮನು ಮುದ್ದಪ್ಪ ಉಪಸ್ಥಿತರಿದ್ದರು.
Breaking News
- *ಕೊಡಗಿನ ಆದಿವಾಸಿಗಳ ಸಮಸ್ಯೆಗಳನ್ನು ಆಲಿಸಿದ ಮುಖ್ಯಮಂತ್ರಿ : ಅಧಿಕಾರಿಗಳಿಗೆ 2 ತಿಂಗಳ ಗಡುವು*
- *ಸಿಎನ್ಸಿಯಿಂದ “ಕೊಡವ ನ್ಯಾಷನಲ್ ಡೇ” ಮತ್ತು ಸಂವಿಧಾನ ದಿನಾಚರಣೆ : 9 ಪ್ರಮುಖ ನಿರ್ಣಯಗಳ ಮಂಡನೆ*
- *ಮಡಿಕೇರಿ : ನ.27 ರಂದು ವಿವಿಧೆಡೆ ವಿದ್ಯುತ್ ವ್ಯತ್ಯಯ*
- *ಮಡಿಕೇರಿಯಲ್ಲಿ ಮಕ್ಕಳ ದಿನಾಚರಣೆ : ಮಕ್ಕಳ ಪ್ರತಿಭೆಯನ್ನು ಪ್ರೋತ್ಸಾಹಿಸಿ : ಸಿವಿಲ್ ನ್ಯಾಯಾಧೀಶೆ ಶುಭ*
- *ವಿರಾಜಪೇಟೆಯಲ್ಲಿ ನ.27 ರಂದು ಕಾವೇರಿ ಕಾರ್ನಿವಾಲ್ ಫೆಸ್ಟ್*
- *ಚೆಟ್ಟಳ್ಳಿ ಗ್ರಾ.ಪಂ ಉಪಚುನಾವಣೆ : ಅಯ್ಯಂಡ್ರ ಭಾಗೀರಥಿ ಗೆಲುವು*
- *ಸಹಕಾರ ತರಬೇತಿ (ಡಿಸಿಎಂ)ಗೆ ಅರ್ಜಿ ಆಹ್ವಾನ*
- *ತ್ಯಾಗರಾಜ ಕಾಲೋನಿ ಅಂಗನವಾಡಿ ಕೇಂದ್ರದಲ್ಲಿ ಬಾಲ ಮೇಳ : ಪರಿಸರರೊಂದಿಗೆ ಮಕ್ಕಳು ಬೆಳೆಯಬೇಕು : ಗೀತಾ ಗಿರೀಶ್*
- *ಮಡಿಕೇರಿಯಲ್ಲಿ ಸಂವಿಧಾನ ದಿನಾಚರಣೆ : ರಾಷ್ಟ್ರದ ಅಭಿವೃದ್ಧಿಗೆ ಸಂವಿಧಾನ ಪಾತ್ರ ಪ್ರಮುಖ : ಹೆಚ್ಚುವರಿ ಜಿಲ್ಲಾಧಿಕಾರಿ ಆರ್.ಐಶ್ವರ್ಯ*
- *ಪುತ್ತೂರು : ವಿಸಿಇಟಿಯಲ್ಲಿ ಮಂಗಳೂರು ವಿಭಾಗ ಮಟ್ಟದ ವಾಲಿಬಾಲ್ ಪಂದ್ಯಾವಳಿ*