ಸುಂಟಿಕೊಪ್ಪ ಜ.12 : ಸುಂಟಿಕೊಪ್ಪ ಸರಕಾರಿ ಶಾಲೆಗೆ ಬೆಟ್ಟಗೇರಿ ತೋಟದ ಮಾಲಿಕರಾದ ವಿನೋದ್ ಶಿವಪ್ಪ ಅವರ ಪುತ್ರ ವಿಶಾಲ್ ಶಿವಪ್ಪ ಹಾಗೂ ಅವರ ಪತ್ನಿ ನಟಿ ಶುಭ್ರಾ ಅಯ್ಯಪ್ಪ ಭೇಟಿ ನೀಡಿ, ಶಾಲಾ ಪರಿಸರ ಹಾಗೂ ಮೂಲಭೂತ ಸೌಕರ್ಯಗಳ ಬಗ್ಗೆ ಪರಿಶೀಲಿಸಿದರು.
ನಂತರ ಶಾಲಾ ವಿದ್ಯಾರ್ಥಿಗಳಿಗೆ ಟ್ರ್ಯಾಕ್ ಶೂಟು ಹಾಗೂ ಕಂಪ್ಯೂಟರ್‍ಗಳನ್ನು ನೀಡುವುದಾಗಿ ಭರವಸೆ ನೀಡಿದರು.
ಅಲ್ಲದೇ ಶಾಲೆಯ ಮಕ್ಕಳಿಗೆ ಕೈ ತೊಳೆಯುವ ತೊಟ್ಟಿಯನ್ನು ಹಾಗೂ ಮೇಲ್ಚಾವಣಿಯನ್ನು ನಿರ್ಮಿಸಿಕೊಟ್ಟರು.
ಈ ಸಂದರ್ಭ ಸುಂಟಿಕೊಪ್ಪ ಗ್ರಾ.ಪಂ ಮಾಜಿ ಉಪಾಧ್ಯಕ್ಷ ಪ್ರಸಾದ್ ಕುಟ್ಟಪ್ಪ, ಸದಸ್ಯರಾದ ಆಲಿಕುಟ್ಟಿ, ಶಬ್ಬೀರ್ ಹಾಗೂ ಶಾಲಾ ಶಿಕ್ಷಕರು ಮತ್ತಿತರರು ಹಾಜರಿದ್ದರು.









