ಮಡಿಕೇರಿ. ಜ, 12: ಜಿಲ್ಲಾ ಶಿಶು ಕಲ್ಯಾಣ ಸಂಸ್ಥೆಯ ಸುಪರ್ದಿಯಲ್ಲಿರುವ ಬಾಲಭವನದ ಸನಿಹ ಇರುವ “ಚೇತನ ಚಿಲುಮೆ” ಮಕ್ಕಳ ಉದ್ಯಾನವನ್ನು ‘ಶಕ್ತಿ’ ಸಲಹಾ ಸಂಪಾದಕ ಬಿ.ಜಿ.ಅನಂತಶಯನ ಉದ್ಘಾಟಿಸಿದರು.
ಈ ಹಿಂದೆ ಚಾಲ್ತಿಯಲ್ಲಿದ್ದ ಉದ್ಯಾನವು ಕೋವಿಡ್ ಬಳಿಕ ಗಿಡಗಂಟಿಗಳಿಂದ ತುಂಬಿ ಮುಚ್ಚಲ್ಪಟ್ಟಿತ್ತು. ಇದೀಗ ಸಾರ್ವಜನಿಕ ಒತ್ತಾಯದ ಮೇಲೆ ಪುಟ್ಟ ಉದ್ಯಾನವನ್ನು ಶಿಶು ಕಲ್ಯಾಣ ಸಂಸ್ಥೆ ಹೊಸ ರೂಪು ನೀಡಿ ಮಕ್ಕಳು, ಆಸಕ್ತರ ಬಳಕೆಗೆ ತೆರೆದಿದೆ. ಉದ್ಯಾನವನ್ನು ಸಾರ್ವಜನಿಕರಿಗೂ ಒದಗಿಸಲಿದ್ದು, ಐದು ರೂಪಾಯಿ ಟಿಕೆಟ್ ಇರಿಸುವುದಾಗಿ ಸಂಸ್ಥೆಯ ಕಾರ್ಯಾಧ್ಯಕ್ಷ ರವೀಂದ್ರ ರೈ ಹೇಳಿದರು.
ಪ್ರಧಾನ ಕಾರ್ಯದರ್ಶಿ ನಮಿತಾ ರೈ, ಕೆಮಿಸ್ಟ್ರ್ ಮತ್ತು ಡ್ರಗ್ಗಿಸ್ಟ್ರ್ ಸಂಸ್ಥೆಯ ರಾಷ್ಟ್ರೀಯ ಜಂಟಿ ಕಾರ್ಯದರ್ಶಿ ಎ.ಕೆ. ಜೀವನ್, ರೋಟರಿ ಮಿಸ್ಟಿಹಿಲ್ಸ್ ಕಾರ್ಯದರ್ಶಿ ರವೀಂದ್ರ ರೈ, ಯೋಗ ಮಾರ್ಗದರ್ಶಕಿ ಶಿಲ್ಪಾ ರೈ, ಸಂಸ್ಥೆಯ ಸದಸ್ಯರಾದ ಬೇಬಿ ಪೂವಯ್ಯ, ಪಾಲಾಕ್ಷ, ಪತ್ರಕರ್ತ ಗಿರೀಶ್, ಕೌಸರ್, ರಂಜಿತ್ ಕವಲಪಾರ, ಕವಿತ ಹಾಗೂ ಇತರರು ಹಾಜರಿದ್ದರು.