ಮಡಿಕೇರಿ ಜ.12 : ಯುವ ಜನತೆಯು ತನ್ನಲ್ಲಿ ಅಡಗಿರುವ ಶಕ್ತಿ ಸಾಮರ್ಥ್ಯ ಮತ್ತು ಪ್ರತಿಭೆಯನ್ನು ಧನಾತ್ಮಕ ಚಿಂತನೆಗಳ ಮೂಲಕ ಸಾಧನೆಗೆ ಬಳಸಬೇಕೆಂದು ಪ್ರತಿಭಾ ಆಂಗ್ಲ ಮಾಧ್ಯಮ ಶಾಲೆಯ ಪ್ರಾಂಶುಪಾಲೆ ಗೀತಾ ನಾಯ್ಡು ನುಡಿದರು.
ಶಾಲೆಯಲ್ಲಿ ನಡೆದ ರಾಷ್ಟ್ರೀಯ ಯುವ ದಿನಾಚರಣೆ ಕಾರ್ಯಕ್ರಮನ್ನು ಉದ್ಘಾಟಿಸಿ ಮಾತನಾಡಿದರು.
ಯುವ ಜನತೆಯ ಜೀವನದ ಪ್ರತೀ ಘಟ್ಟದಲ್ಲೂ ಸ್ವಾಮಿ ವಿವೇಕಾನಂದರ ಜೀವನ ಚರಿತ್ರೆ ಮತ್ತು ಸಂದೇಶಗಳು ನಮಗೆ ದಾರಿ ದೀಪ. ಅವರ ಪ್ರೇರಣಾತ್ಮಕ ನುಡಿಗಳೇ ನಮ್ಮ ಸಾಧನೆಯ ಮಾರ್ಗದರ್ಶನ. ವಿದ್ಯಾರ್ಥಿಗಳು ಎಂದಿಗೂ ಬಹು ಎತ್ತರದ ಕನಸುಗಳುಳ್ಳವರಾಗಬೇಕು, ಆ ಕನಸುಗಳ ಸಾಧನೆಯ ಮೂಲಕ ಸಾರ್ಥಕತೆ ಕಂಡುಕೊಳ್ಳಬೇಕು ಎಂದರು.
ಶಿಕ್ಷಕಿ ಸಾನಿಫ ದಿನದ ಮಹತ್ವ ತಿಳಿಸಿದರು. ಕಾರ್ಯಕ್ರಮದಲ್ಲಿ ಶಿಕ್ಷಕಿ ಅಶ್ವಿನಿ ಸ್ವಾಗತಿಸಿ ನಿರೂಪಿಸಿದರು, ಆಡಳಿತ ಮಂಡಳಿಯವರು, ಶಿಕ್ಷಕರಾದ ಯಶಸ್ವಿನಿ, ಸೀಮಾ, ಅಯ್ಯಪ್ಪ, ಮತ್ತು ವಿದ್ಯಾರ್ಥಿಗಳು ಹಾಜರಿದ್ದರು.