ವಿರಾಜಪೇಟೆ ಜ.13 : ಕರ್ನಾಟಕ ಸ್ಪೋರ್ಟ್ಸ್ ಡ್ಯಾನ್ಸ್ ಅಸೋಸಿಯೇಷನ್ ವತಿಯಿಂದ ಮಂಡ್ಯದ ಡಾ. ಬಿ.ಆರ್. ಅಂಬೇಡ್ಕರ್ ಭವನದ ಸಭಾಂಗಣದಲ್ಲಿ ನಡೆದ ಕರ್ನಾಟಕ ಸ್ಟೇಟ್ ಸ್ಪೋಟ್ರ್ಸ್ ಡಾನ್ಸ್ ಚಾಂಪಿನ ಶಿಪ್ ಸ್ಪರ್ಧೆಯಲ್ಲಿ ಮಗ್ಗುಲದ ಲಿಟಲ್ ಸ್ಕಾಲರ್ಸ್ ಅಕಾಡೆಮಿಯ ಯು.ಕೆ.ಜಿ ವಿದ್ಯಾರ್ಥಿ ವಿಹಾ ಮುತ್ತಮ್ಮ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾಳೆ.
ಫ್ರೀ ಸ್ಟೈಲ್ ನೃತ್ಯದಲ್ಲಿ ಕಂಚಿನ ಪದಕ ಮತ್ತು ಸಾಮೂಹಿಕ ನೃತ್ಯದಲ್ಲಿ ಚಿನ್ನದ ಪದಕವನ್ನು ಗೆದ್ದು, ಜಮ್ಮುವಿನಲ್ಲಿ ನಡೆಯುವ ರಾಷ್ಟ್ರಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.
ವಿರಾಜಪೇಟೆ ನಿವಾಸಿ ಐತಿಚಂಡ ರಕ್ಷಿತ ಅವರ ಪುತ್ರಿಯಾಗಿರುವ ವಿಹಾ ಮುತ್ತಮ್ಮ, ವಿರಾಜಪೇಟೆಯ ವಿಷ್ಣು ಅವರ ಟೀಮ್ ಇಂಟೊಪೀಸ್ ನೃತ್ಯ ಶಾಲೆಯಲ್ಲಿ ತರಬೇತಿ ಪಡೆಯುತ್ತಿದ್ದಾರೆ.









