ವಿರಾಜಪೇಟೆ ಜ.13 : ಕರ್ನಾಟಕ ಸ್ಪೋಟ್ರ್ಸ್ ಡ್ಯಾನ್ಸ್ ಅಸೋಷಿಯೇಷನ್ ವತಿಯಿಂದ ಮಂಡ್ಯದಲ್ಲಿ ನಡೆದ ರಾಜ್ಯಮಟ್ಟದ ನೃತ್ಯ ಸ್ಪರ್ಧೆಯಲ್ಲಿ ಸಂತ ಅನ್ನಮ್ಮ ಶಾಲೆಯ ವಿದ್ಯಾರ್ಥಿ ಎಂ.ಶ್ರೀದೇವಿ ಹಾಗೂ ಕೂರ್ಗ್ ವ್ಯಾಲಿ ಶಾಲೆಯ ವಿದ್ಯಾರ್ಥಿನಿ ದೇಚಮ್ಮ ಕಪಲ್ ಮತ್ತು ಗುಂಪು ವಿಭಾಗದಲ್ಲಿ ಪ್ರಥಮ ಸ್ಥಾನವನ್ನು ಗಳಿಸಿ ರಾಷ್ಟ್ರಮಟ್ಟದ ನೃತ್ಯ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.
ಶ್ರೀದೇವಿ ವಿರಾಜಪೇಟೆ ತಾಲೂಕಿನ ಕೆ. ಬೋಯಿಕೇರಿ ಗ್ರಾಮದ ಮುರುಗೇಶ್ ಮತ್ತು ತುಳಸಿ ದಂಪತಿಯ ಪುತ್ರಿ.
ದೇಚಮ್ಮ ವಿರಾಜಪೇಟೆ ಪಟ್ಟಣದ ಅಯ್ಯಪ್ಪ ಬೆಟ್ಟದ ನಿವಾಸಿ ದೀಪಕ್ ಮತ್ತು ಅನುರಾಧ ಅವರ ಪುತ್ರಿ.
ಈ ವಿದ್ಯಾರ್ಥಿಗಳು ವಿರಾಜಪೇಟೆಯ ಟೀಂ ಇಂಟೋಪೀಸ್ ನೃತ್ಯ ಶಾಲೆಯಲ್ಲಿ ನೃತ್ಯ ಅಭ್ಯಾಸ ಮಾಡುತ್ತಿದ್ದು ವಿಷ್ಣು ಅವರು ತರಬೇತಿ ನೀಡುತ್ತಿದ್ದಾರೆ. ರಾಷ್ಟ್ರಮಟ್ಟದ ಸ್ಪರ್ಧೆ ಜಮ್ಮು ಕಾಶ್ಮೀರದಲ್ಲಿ ಫೆ.5 ಮತ್ತು 6 ರಂದು ನಡೆಯಲಿದೆ.









