ನಾಪೋಕ್ಲು ಜ.15 : ಅಭಿವೃದ್ಧಿ ಕೆಲಸಗಳಲ್ಲಿ ರಾಜಕೀಯ ಮಾಡುವುದಿಲ್ಲ , ಅಭಿವೃದ್ಧಿ ಕೆಲಸಗಳು ಜನರಿಗೆ ಗೋಸ್ಕರ ಹೊರತು ಯಾವುದೇ ಪಕ್ಷಗಳಿಗೆ ಅಥವಾ ಯಾವುದೇ ಪಕ್ಷದ ನಾಯಕರಿಗಾಗಿ ಅಲ್ಲ ಎಂದು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಹಾಗೂ ಶಾಸಕ ಶಾಸಕ ಎ.ಎಸ್.ಪೊನ್ನಣ್ಣ ಹೇಳಿದರು.
ಬಲ್ಲಮಾವಟಿ ಗ್ರಾ.ಪಂ ಒಳಪಟ್ಟ ಕಕ್ಕಬ್ಬೆ-ನೆಲಜಿ ರಸ್ತೆಯ ಒಂದುವರೆ ಕಿಲೋಮೀಟರ್ ದೂರದ ರಸ್ತೆ 35 ಲಕ್ಷ ರೂ.ಗಳ ಅನುದಾನದಲ್ಲಿ ಮರು ಡಾಂಬರೀಕರಣ ಆದ ರಸ್ತೆಯನ್ನು ನಾಪೋಕ್ಲು-ಭಾಗಮಂಡಲ -ಕಕ್ಕಬ್ಬೆ ಜಂಕ್ಷನ್ ನ ನೆಲಜಿ ಯಲ್ಲಿ ಉದ್ಘಾಟಿಸಿ ಮಾತನಾಡಿದರು.
ನಿಗಧಿತ ಅವಧಿಯಲ್ಲಿ ಗುಣಮಟ್ಟದ ಕಾಮಗಾರಿಯನ್ನು ನಿರ್ವಹಿಸಿ ಪೂರ್ಣಗೊಂಡಿದೆ. ಇದೇ ರೀತಿ ಅಭಿವೃದ್ಧಿ ಕಾರ್ಯಗಳನ್ನು ಹಂತ ಹಂತವಾಗಿ ಕೈಗೊಳ್ಳಲಾಗುವುದು. ಎರಡು ಮೂರು ತಿಂಗಳಲ್ಲಿ ಆರಂಭಿಸಿದ ಬಹುತೇಕ ಕಾಮಗಾರಿಗಳು ಪೂರ್ಣಗೊಂಡಿವೆ ಎಂದರು.
ಈ ಸಂದರ್ಭ ಗ್ರಾಮಸ್ಥರ ಮನವಿಗೆ ಸ್ಪಂದಿಸಿದ ಶಾಸಕರು, ನಾಪೋಕ್ಲು-ಭಾಗಮಂಡಲ ರಸ್ತೆಯ ಹಳೆ ತಾಲೂಕಿನಿಂದ ಪುಲಿಕೋಟುವರೆಗಿನ ರಸ್ತೆ ದುರಸ್ತಿ ಕಾರ್ಯ ಒಂದು ತಿಂಗಳ ಒಳಗೆ ರಸ್ತೆಗಳ ಗುಂಡಿ ಮುಚ್ಚಿ ಸುಗಮ ವಾಹನ ಸಂಚಾರಕ್ಕೆ ಅನುವು ಮಾಡಿಕೊಡುವಂತೆ ಸ್ಥಳದಲ್ಲಿದ್ದ ಲೋಕೋಪಯೋಗಿ ಇಲಾಖೆ ಸಹಾಯಕ ಅಭಿಯಂತರ ಸತೀಶ್ ಅವರಿಗೆ ಆದೇಶ ಮಾಡಿದರು.
ಈ ಸಂದರ್ಭ ನಾಪೋಕ್ಲು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಎ.ಇಸ್ಮಾಯಿಲ್, ನಾಪೋಕ್ಲು ವಲಯ ಕಾಂಗ್ರೆಸ್ ಅಧ್ಯಕ್ಷ ಮಾಚೇಟಿರ ಕುಶು ಕುಶಾಲಪ್ಪ, ಬಲ್ಲಮಾವಟಿ ವಲಯ ಅಧ್ಯಕ್ಷ ತಾಪಂಡ ಅಪ್ಪಣ್ಣ, ಬೂತ್ ಅಧ್ಯಕ್ಷ ಕೈಬುಳಿರ ಸಾಬು ಗಣಪತಿ, ಪ್ರಮುಖರಾದ ಕೋಟೆರ ರಘು ಚಂಗಪ್ಪ, ನಾಪನೆರವ0ಡ ಮಿಟ್ಟು , ಪಂಜೇರಿರ ಪೂನಚ್ಚ , ನೆರವಂಡ ಉಮೇಶ್, ಮಚ್ಚುರ ರವೀಂದ್ರ, ಎಮ್ಮೆ ಮಾಡು ಜಮಾತ್ ಅಧ್ಯಕ್ಷ ಅಬೂಬಕ್ಕರ್ ಸಖಾಫಿ, ಬೋಳ್ಳಂಡ ಶರೀನ್, ಬಾಚಮಂಡ ಲವ ಚಿನ್ನಪ್ಪ, ಸೂರಜ್ ಹೊಸೂರು, ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ಮನವಟ್ಟಿರ ಹರೀಶ್, ಚೇಕ್ ಪುಂಡ ಕಂಬು ನಂಜಪ್ಪ, ಸುನಿಲ್, ಮಣವಟ್ಟಿರ ಪಾಪು ಚಂಗಪ್ಪ, ದಯ ಕುಟ್ಟಪ್ಪ, ಸ್ವರೂಪ್, ಲೋಕೋಪಯೋಗಿ ಇಲಾಖೆ ಇಂಜಿನಿಯರ್ ಸತೀಶ್ ಸೇರಿದಂತೆ ಗ್ರಾಮಸ್ಥರು ಪಾಲ್ಗೊಂಡಿದ್ದರು.
ವರದಿ : ದುಗ್ಗಳ ಸದಾನಂದ.