ಮಡಿಕೇರಿ ಜ.17 : ಕೇಂದ್ರ ಲೋಕಸೇವಾ ಅಯೋಗದ ಪೂರ್ವಭಾವಿ ಪರೀಕ್ಷೆಗಳು ಮೇ, 26 ರಂದು ನಡೆಯಲಿದೆ.
ಯುಪಿಎಸ್‍ಸಿ ಸ್ಪರ್ಧಾತ್ಮಕ ಪರೀಕ್ಷೆ ಗಮನದಲ್ಲಿರಿಸಿ ಫೆಬ್ರವರಿ, 01 ರಿಂದ ಬೆಂಗಳೂರಿನ ಕೃಷಿಕ್ ಸರ್ವೋದಯ ಫ಼ೌಂಡೇಶನ್ ಕೇಂದ್ರ ಕಚೇರಿಯಲ್ಲಿ ಮೂರು ತಿಂಗಳ ಕಾಲ ನುರಿತ ವಿಷಯ ತಜ್ಞರಿಂದ ಆಕಾಂಕ್ಷಿಗಳ ಕೈಗೆಟುಕುವ ರಿಯಾಯಿತಿ ಶುಲ್ಕದಲ್ಲಿ ಆಫ್‍ಲೈನ್ ಹಾಗೂ ಆನ್‍ಲೈನ್ ತರಬೇತಿ ಪ್ರಾರಂಭಿಸಲಾಗುವುದು.
ಆಫ್‍ಲೈನ್ ತರಬೇತಿಗೆ ರೂ.25 ಸಾವಿರ ಹಾಗೂ ಆನ್‍ಲೈನ್ ತರಬೇತಿಗೆ ರೂ. 15 ಸಾವಿರ ನಿಗದಿಯಾಗಿದ್ದು ತರಬೇತಿಗೆ ಹಾಜರಾಗುವ ಅರ್ಹ ಅಭ್ಯರ್ಥಿಗಳಿಗೆ ಹಾಸ್ಟೆಲ್ ಸೌಲಭ್ಯ ಮತ್ತು ವಿದ್ಯಾರ್ಥಿ ವೇತನ ನೀಡಲಾಗುವುದು. ಗ್ರಂಥಾಲಯ ಸೌಲಭ್ಯ ಹಾಗೂ ಪ್ರತ್ಯೇಕ ಸ್ಟಡಿ ಕ್ಯುಬಿಕಲ್ ವ್ಯವಸ್ಥೆಯಿದೆ. ಆಸಕ್ತ ಅಭ್ಯರ್ಥಿಗಳು ಜನವರಿ, 25 ರೊಳಗೆ 7625000990 ಅಥವಾ 080-25202299 ಸಂಪರ್ಕಿಸಿ ತರಬೇತಿಗೆ ತಮ್ಮ ಹೆಸರು ನೋಂದಾಯಿಸಿಕೊಳ್ಳಬಹುದು ಎಂದು ಹಾಸನ ಶಾಖೆಯ ಕೃಷಿಕ್ ಸರ್ವೋದಯ ಫೌಂಡೇಶನ್ ಗೌರವ ಕಾರ್ಯದರ್ಶಿ ಎಚ್.ಪಿ.ಮೋಹನ್ ತಿಳಿಸಿದ್ದಾರೆ.










