ಮಡಿಕೇರಿ ಜ.17 : ಕುಂಜಿಲ ಪಯ್‍ನರಿ ಜುಮುಆ ಮಸೀದಿ ಪುನರ್ ನಿರ್ಮಾಣದ ಶಂಕುಸ್ಥಾಪನಾ ಸಮಾರಂಭ ಜ.19 ರಂದು ನಡೆಯಲಿದೆ.
ಕುಂಜಿಲ ಪಯ್‍ನರಿ ಆವರಣದಲ್ಲಿ ಮಧ್ಯಾಹ್ನ 2 ಗಂಟೆಗೆ ಸಯ್ಯಿದ್ ಸ್ವಾದಿಖ್‍ಅಲಿ ಶಿಹಾಬ್ ತಂಙಳ್ ಪಾಣಕ್ಕಾಡ್ ಹಾಗೂ ಸಯ್ಯಿದ್ ಜಲಾಲುದ್ದೀನ್ ಸಖಾಫಿ ಅಲ್ ಬುಖಾರಿ ವಳಪಟ್ಟಣಂ ಖಾಝಿ ನೂತನ ಮಸೀದಿ ಕಟ್ಟಡಕ್ಕೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.
ಕುಂಜಿಲ ಪಯ್‍ನರಿ ಆಡಿಟೋರಿಯಂ ನಲ್ಲಿ ನಡಯಲಿರುವ ಸಭಾ ಕಾರ್ಯಕ್ರಮವನ್ನು ಖತೀಬರಾದ ಜನಾಬ್ ನಿಝಾರ್ ಅಹ್ಸನಿ ಉದ್ಘಾಟಿಸಲಿದ್ದು, ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಹಾಗೂ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಅವರು ಅಧ್ಯಕ್ಷತೆ ವಹಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ವಕ್ಫ್, ವಸತಿ, ಅಲ್ಪಸಂಖ್ಯಾತರ ಅಭಿವೃದ್ಧಿ ಸಚಿವ ಬಿ.ಝಡ್.ಝಮೀರ್ ಅಹಮ್ಮದ್ ಖಾನ್, ಕರ್ನಾಟಕ ರಾಜ್ಯ ವಕ್ಫ್ ಮಂಡಳಿ ಅಧ್ಯಕ್ಷ ಕೆ.ಅನ್ವರ್ ಬಾಷಾ, ಬೆಂಗಳೂರು ಶಾಂತಿ ನಗರ ಶಾಸಕ ಹಾಗೂ ಫುಟ್‍ಬಾಲ್ ಅಸೋಸಿಯೇಷನ್ ನ ರಾಷ್ಟ್ರೀಯ ಉಪಾಧ್ಯಕ್ಷ ಎನ್.ಎ.ಹಾರಿಸ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಸ್.ಎ.ಹುಸೈನ್, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಧರ್ಮಜ ಉತ್ತಪ್ಪ, ಕೆಪಿಸಿಸಿ ಸದಸ್ಯ ಕೆ.ಎ.ಯಾಕೂಬ್ ಸೋಮವಾರಪೇಟೆ, ಜನಾಬ್ ಇಮ್ರಾನ್ ಸಿದ್ಧೀಖೀ ಬಿಳಿಗುಂದ ಸೇರಿದಂತೆ ಹಲವು ಗಣ್ಯರು ಪಾಲ್ಗೊಳ್ಳಲಿದ್ದಾರೆ. ಕುಂಜಿಲ ಪಯ್‍ನರಿ ಸುನ್ನೀ ಮುಸ್ಲಿಂ ಜಮಾಅತ್ ನ ಅಧ್ಯಕ್ಷ ಎಂ.ಎ.ಸೌಖತ್ ಆಲಿ ಪ್ರಾಸ್ತಾವಿಕ ಭಾಷಣ ಮಾಡಲಿದ್ದಾರೆ ಎಂದು ಕುಂಜಿಲ ಪಯ್‍ನರಿ ಸುನ್ನೀ ಮುಸ್ಲಿಂ ಜಮಾಅತ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.









