ಮಡಿಕೇರಿ ಜ.18 : ಕುಶಾಲನಗರ ಪುರಸಭೆಯ ಎಸ್‍ಎಫ್‍ಸಿ (ಎಸ್‍ಸಿಪಿ)(ಟಿಎಸ್‍ಪಿ) ಶೇ.7.25 ರ ಅನುದಾನದಡಿ 2022-23 ನೇ ಅವಧಿಯಲ್ಲಿ ಕುಶಾಲನಗರ ಪುರಸಭೆ ವ್ಯಾಪ್ತಿಯಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸುತ್ತಿರುವ ಸ್ಪರ್ಧಾರ್ಥಿಗಳಿಗೆ ಸಹಾಯಧನ ನೀಡುವುದು ಮತ್ತು ಕುಶಾಲನಗರ ಪುರಸಭೆ ವ್ಯಾಪ್ತಿಯಲ್ಲಿ ಬಡಜನರ ಶಸ್ತ್ರ ಚಿಕಿತ್ಸೆಗೆ ಸಹಾಯಧನ ನೀಡುವುದು ಹಾಗೂ ಕುಶಾಲನಗರ ಪುರಸಭೆ ವ್ಯಾಪ್ತಿಯ ಪರಿಶಿಷ್ಟ ಪಂಗಡದ ವರ್ಗದ 10 ವರ್ಷದ ಮಕ್ಕಳಿಗೆ ಒಂದು ಬಾರಿಗೆ ಆರೋಗ್ಯ/ ಜೀವ ವಿಮೆ ಒದಗಿಸುವುದು ಹಾಗೂ 2020-21 ನೇ ಸಾಲಿಗೆ ಎಸ್‍ಎಫ್‍ಸಿ(ಟಿಎಸ್‍ಪಿ) ಅನುದಾನದಡಿ ಯಶಸ್ವಿನಿ ಯೋಜನೆಯಡಿ ಗುರುತಿಸಲ್ಪಟ್ಟ ದವಾಖಾನೆಗಳಲ್ಲಿ ಶಸ್ತ್ರ ಚಿಕಿತ್ಸೆಗೆ ಸಹಾಯಧನ ನೀಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
2022-23 ನೇ ಅವಧಿಯಲ್ಲಿ ಕುಶಾಲನಗರ ಪುರಸಭೆ ವ್ಯಾಪ್ತಿಯಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸುತ್ತಿರುವ ಸ್ಪರ್ಧಾರ್ಥಿಗಳಿಗೆ ಸಹಾಯಧನಕ್ಕೆ ಅರ್ಜಿ ಸಲ್ಲಿಸುವಾಗ ಅರ್ಜಿಯೊಂದಿಗೆ ಪಡಿತರ ಚೀಟಿ, ಮತದಾರರ ಗುರುತಿನ ಚೀಟಿ, ಆಧಾರ್ ಕಾರ್ಡ್, ಇತ್ತೀಚಿನ ವಾಸಸ್ಥಳ ದೃಢೀಕರಣ ಪತ್ರ, ಫಲಾನುಭವಿಯ 01 ಭಾವಚಿತ್ರ, ಜಾತಿ ಮತ್ತು ಆದಾಯ ದೃಢೀಕರಣ ಪತ್ರ(ಆದಾಯವು 3 ಲಕ್ಷದೊಳಗಿರಬೇಕು) ಹಾಗೂ ಬ್ಯಾಂಕ್ ಪಾಸ್ ಪುಸ್ತಕ ಸಲ್ಲಿಸಬೇಕು.
ಕುಶಾಲನಗರ ಪುರಸಭೆ ವ್ಯಾಪ್ತಿಯಲ್ಲಿ ಬಡಜನರ ಶಸ್ತ್ರ ಚಿಕಿತ್ಸೆಗೆ ಸಹಾಯಧನಕ್ಕೆ ಅರ್ಜಿ ಸಲ್ಲಿಸುವಾಗ ಅರ್ಜಿಯೊಂದಿಗೆ ಪಡಿತರ ಚೀಟಿ, ಮತದಾರರ ಗುರುತಿನ ಚೀಟಿ, ಆಧಾರ್ ಕಾರ್ಡ್, ಇತ್ತೀಚಿನ ವಾಸಸ್ಥಳ ದೃಢೀಕರಣ ಪತ್ರ, ಫಲಾನುಭವಿಯ 01 ಭಾವಚಿತ್ರ, ಆದಾಯ ದೃಢೀಕರಣ ಪತ್ರ(ಆದಾಯವು 3 ಲಕ್ಷದೊಳಗಿರಬೇಕು), ಶಸ್ತ್ರ ಚಿಕಿತ್ಸೆಗೆ ಸಂಬಂಧಪಟ್ಟಂತೆ ದಾಖಲೆಗಳು ಮತ್ತು ಮೂಲ ಬಿಲ್ಲುಗಳು, ಶಸ್ತ್ರ ಚಿಕಿತ್ಸೆಯು ಜನವರಿ, 2023 ಮಾಹೆಯ ಮೇಲ್ಪಟ್ಟಿರಬೇಕು ಹಾಗೂ ಬ್ಯಾಂಕ್ ಪಾಸ್ ಪುಸ್ತಕ ಸಲ್ಲಿಸಬೇಕು.
ಕುಶಾಲನಗರ ಪುರಸಭೆ ವ್ಯಾಪ್ತಿಯ ಪರಿಶಿಷ್ಟ ಪಂಗಡದ ವರ್ಗದ 10 ವರ್ಷದ ಮಕ್ಕಳಿಗೆ ಒಂದು ಬಾರಿಗೆ ಆರೋಗ್ಯ/ ಜೀವ ವಿಮೆ ಒದಗಿಸುವುದು. ಪಡಿತರ ಚೀಟಿ, ಆಧಾರ್ ಕಾರ್ಡ್, ಇತ್ತೀಚಿನ ವಾಸಸ್ಥಳ ದೃಢೀಕರಣ ಪತ್ರ, ಜನನ ಪ್ರಮಾಣ ಪತ್ರ, ಅಭ್ಯರ್ಥಿಯ 01 ಭಾವಚಿತ್ರ, ಜಾತಿ ಮತ್ತು ಆದಾಯ ದೃಢೀಕರಣ ಪತ್ರ(ಆದಾಯವು 3 ಲಕ್ಷದೊಳಗಿರಬೇಕು) ಮತ್ತು ಬ್ಯಾಂಕ್ ಪಾಸ್ ಪುಸ್ತಕ ಸಲ್ಲಿಸಬೇಕು.
ಯಶಸ್ವಿನಿ ಯೋಜನೆಯಡಿ ಗುರುತಿಸಲ್ಪಟ್ಟ ದವಾಖಾನೆಗಳಲ್ಲಿ ಶಸ್ತ್ರ ಚಿಕಿತ್ಸೆಗೆ ಸಹಾಯಧನಕ್ಕೆ ಅರ್ಜಿ ಸಲ್ಲಿಸುವಾಗ ಅರ್ಜಿಯೊಂದಿಗೆ ಪಡಿತರ ಚೀಟಿ, ಮತದಾರರ ಗುರುತಿನ ಚೀಟಿ, ಆಧಾರ್ ಕಾರ್ಡ್, ಇತ್ತೀಚಿನ ವಾಸಸ್ಥಳ ದೃಢೀಕರಣ ಪತ್ರ, ಫಲಾನುಭವಿಯ 01 ಭಾವಚಿತ್ರ, ಜಾತಿ ಮತ್ತು ಆದಾಯ ದೃಢೀಕರಣ ಪತ್ರ(ಆದಾಯವು 3 ಲಕ್ಷದೊಳಗಿರಬೇಕು), ಶಸ್ತ್ರ ಚಿಕಿತ್ಸೆಗೆ ಸಂಬಂಧಪಟ್ಟಂತೆ ದಾಖಲೆಗಳು ಮತ್ತು ಮೂಲ ಬಿಲ್ಲುಗಳನ್ನು ಸಲ್ಲಿಸಬೇಕು. ಅರ್ಜಿದಾರರ ಆಯ್ಕೆಯನ್ನು ಪುರಸಭೆ ಕಾಯ್ದಿರಿಸಿಕೊಂಡಿದೆ ಎಂದು ಕುಶಾಲನಗರ ಪುರಸಭೆ ಮುಖ್ಯಾಧಿಕಾರಿ ಕೃಷ್ಣಪ್ರಸಾದ್ ತಿಳಿಸಿದ್ದಾರೆ.









