ಮಡಿಕೇರಿ ಜ.18 : ಭಾರತೀಯ ಜನತಾ ಪಕ್ಷದ ಕೃಷಿ ಮೋರ್ಚಾದ ನೂತನ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಡಾ. ಬಿ.ಸಿ.ನವೀನ್ ಕುಮಾರ್ ನೇಮಕಗೊಂಡಿದ್ದಾರೆ.
ಕೇಂದ್ರ ಹಾಗೂ ರಾಜ್ಯ ಸರಕಾರದ ಯೋಜನೆಗಳನ್ನು ಪರಿಣಾಮಕಾರಿ ಅನುಷ್ಠಾನಕ್ಕೆ ತರುವ ನಿಟ್ಟಿನಲ್ಲಿ ಪ್ರಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಡಾ. ಬಿ.ಸಿ.ನವೀನ್ ಕುಮಾರ್ ವಿಶ್ವಾಸ ವ್ಯಕ್ತಪಡಿಸಿದರು.
2010ರಲ್ಲಿ ಪಕ್ಷದ ಸದಸ್ಯರಾಗಿ ಸೇರ್ಪಡೆಗೊಂಡ ಇವರು, 2016ರಲ್ಲಿ ವೈದ್ಯಕೀಯ ಪ್ರಕೋಷ್ಠದ ಕೊಡಗು ಜಿಲ್ಲಾ ಸಂಚಲಕರಾಗಿ, 2017ರಲ್ಲಿ ವಿಭಾಗೀಯ ಸಂಚಾಲಕರಾಗಿ, 2020ರಲ್ಲಿ ಕೃಷಿ ಮೋರ್ಚಾದ ರಾಜ್ಯ ಕಾರ್ಯದರ್ಶಿಯಾಗಿ ಕೆಲಸಮಾಡಿದ್ದಾರೆ. ಮಡಿಕೇರಿಯಲ್ಲಿರುವ ಶ್ರೀ ರಾಜರಾಜೇಶ್ವರಿ ಆಸ್ಪತ್ರೆಯ ಮುಖ್ಯಸ್ಥರಾಗಿರುವ ಡಾ. ಬಿ.ಸಿ.ನವೀನ್ ಕುಮಾರ್ ಮಕ್ಕಳ ತಜ್ಞರಾಗಿ ಪ್ರಖ್ಯಾತಿಗಳಿಸಿದ್ದಾರೆ.









