ಮಡಿಕೇರಿ ಜ.15 : ಅಯೋಧ್ಯೆಯಲ್ಲಿ ಶ್ರೀ ರಾಮನ ಬಾಲ ಮೂರ್ತಿಯ ಪ್ರತಿಷ್ಠಾಪನಾ ಸಂದರ್ಭ ಮಡಿಕೇರಿಯ ಮಲ್ಲಿಕಾರ್ಜುನ ನಗರದಲ್ಲಿರುವ ಕೊಡಗಿನ ಏಕೈಕ ಶ್ರೀ ಕೋದಂಡ ರಾಮ ದೇವಾಲಯದಲ್ಲಿ ಧಾರ್ಮಿಕ ಕಾರ್ಯಕ್ರಮ ನಡೆಯಲಿದೆ.
ಬೆಳಿಗ್ಗೆ ಎಂದಿನಂತೆ ನಿತ್ಯ ಪೂಜೆ ನಡೆಯಲಿದೆ. ಪೂರ್ವಾಹ್ನ 11.30 ಕ್ಕೆ ಶ್ರೀ ವಿಷ್ಣು ಸಹಸ್ರ ನಾಮಾರ್ಚನೆ ಏರ್ಪಟ್ಟಿದೆ. ಮಧ್ಯಾಹ್ನ 12 ಗಂಟೆಗೆ ಮಹಾಪೂಜೆ ನಡೆಯಲಿದ್ದು ಬಳಿಕ ಪ್ರಸಾದ ವಿತರಿಸಲಾಗುವುದು.
ಅಲ್ಲದೆ ದೇವಾಲಯ ಆವರಣದಲ್ಲಿ ಅಯೋಧ್ಯೆಯಲ್ಲಿ ನಡೆಯುವ ಶ್ರೀ ರಾಮ ಪ್ರತಿಷ್ಠಾಪನಾ ಕಾರ್ಯದ ದೃಶ್ಯಗಳನ್ನು ಪರದೆಯಲ್ಲಿ ಪ್ರಸಾರ ಮಾಡಲಾಗುವುದು. ಸಂಜೆ 6.30 ರ ಬಳಿಕ ಮುಹಿಳೆಯರಿಂದ ಭಜನಾ ಕಾರ್ಯಕ್ರಮ ನಡೆಯಲಿದೆ. ಬಳಿಕ ಪ್ರಸಾದ ವಿನಿಯೋಗವಿದೆ.









