ಮಡಿಕೇರಿ ಜ.18 : ಚೆಟ್ಟಳ್ಳಿ ಪ್ರಾಥಮಿಕ ಕೃಷಿ ಸಹಕಾರ ಸಂಘದ ಈರಳೆ ಘಟಕದಲ್ಲಿ ಪ್ರತಿಷ್ಠಾಪಿಸಿರುವ ಪಂಚಮುಖಿ ವಾಯುಪುತ್ರ ಮೂರ್ತಿಗೆ ಒಂದು ವರ್ಷ ತುಂಬಿದ ಹಿನ್ನೆಲೆ ಮಕರ ಸಂಕ್ರಾತಿಯಂದು ವಾರ್ಷಿಕ ವಿಶೇಷ ಪೂಜೆ ನಡೆಯಿತು.
ಈರಳೆ ಶಾಖೆಯಲ್ಲಿರುವ ಪಂಚಮುಖಿ ವಾಯುಪುತ್ರ ಮೂರ್ತಿಗೆ ವಿಶೇಷ ಅಲಂಕಾದೊಂದಿಗೆ ಪೂಜೆಸಲ್ಲಿಸಿ ಮಕ್ಕಳು ಹಾಗೂ ಸಾರ್ವಜನಿಕರಿಂದ ಆರತಿ ಬೆಳಗಲಾಯಿತು.
ಇದೇ ಸಂದರ್ಭ ಚೆಟ್ಟಳ್ಳಿ ಸಹಕಾರ ಸಂಘದ ಶ್ರೀನರೇಂದ್ರ ಮೋದಿ ಭವನದಲ್ಲಿರುವ ವಿಘ್ನೇಶ್ವರ, ವೀರಾಂಜನೇಯ, ಮಹಾವಿಷ್ಣುವಿಗೆ, ಮುಖ್ಯಕಚೇರಿಯಲ್ಲಿರುವ ಪಶುಪತಿ ನಾಥ ಹಾಗೂ ಕಾವೇರಿಮಾತೆಗೆ ಪೂಜೆ ಸಲ್ಲಿಸಲಾಯಿತು. ಮಹಾಮಂಗಳಾರತಿಯ ನಂತರ ಪ್ರಸಾದವಿ ನಿಯೋಗ ನೆರವೇರಿತು.
ಈ ಸಂದರ್ಭ ಮಾತನಾಡಿದ ಸಂಘದ ಅಧ್ಯಕ್ಷ ಬಲ್ಲಾರಂಡ ಮಣಿ ಉತ್ತಪ್ಪ, ವಾಯುಪುತ್ರ ಮೂರ್ತಿಯ ಪ್ರತಿಷ್ಠಾಪನೆಯ ಸಂದರ್ಭ ಊರಿನ ಮಕ್ಕಳಿಂದ ಕ್ಷೀರಾಭಿಶೇಖ ನೆರವೇರಲಾಗಿತ್ತು. ಇದೀಗ ಅದೇ ಮಕ್ಕಳಿಂದ ಪಂಚಮುಖಿ ವಾಯುಪುತ್ರನಿಗೆ ಆರತಿ ಬೆಳಗಿಸಿರುವುದು ವಿಶೇಷ ಎಂದರು.









