ಮಡಿಕೇರಿ ಜ.19 : ನಗರದ ಕೊಡಗು ವಿದ್ಯಾಲಯದ 9 ನೇ ತರಗತಿ ವಿದ್ಯಾರ್ಥಿ ಸಿ.ಎಸ್.ರಘುವಂಶಿ ದೆಹಲಿಯಲ್ಲಿ ನಡೆಯುತ್ತಿರುವ ಗಣರಾಜ್ಯೋತ್ಸವ ಶಿಬಿರದಲ್ಲಿ ಪಾಲ್ಗೊಂಡಿದ್ದಾನೆ.
ಎನ್‍ಸಿಸಿ ಕೆಡೆಟ್ ಸಾಜೆರ್ಂಟ್ ರಘುವಂಶಿ ಸಿ.ಎಸ್ ಕರ್ನಾಟಕ ಗೋವಾ ಡೈರೆಕ್ಟ್ ರೇಟ್ ನ ಜೂನಿಯರ್ ವಿಭಾಗದ ಬೆಸ್ಟ್ ಕೆಡೆಟ್ ಆಗಿದ್ದಾನೆ. ಈತ ಗಣರಾಜ್ಯೋತ್ಸವ ಶಿಬಿರಕ್ಕೆ ಆಯ್ಕೆಯಾಗಿರುವ ಕೊಡಗು ಜಿಲ್ಲೆಯ ಏಕೈಕ ವಿದ್ಯಾರ್ಥಿಯಾಗಿದ್ದಾನೆ.
ರಘುವಂಶಿಯ ಸಂದರ್ಶನ ಡಿ.ಡಿ ಚಾನಲ್ ಮತ್ತು ಸಂಸದ್ ಟಿ.ವಿ ಚಾನೆಲ್ ನಲ್ಲಿ ಪ್ರಸಾರವಾಗಲಿದೆ. 19ನೇ ಕರ್ನಾಟಕ ಬೆಟಾಲಿಯನ್ ನ ಎನ್‍ಸಿಸಿ ಕೆಡೆಟ್ ಆಗಿರುವ ರಘುವಂಶಿ, ಮಡಿಕೇರಿಯ ಸಿವಿಲ್ ಇಂಜಿನಿಯರ್ ಸಿ.ಆರ್.ಶಿವಕುಮಾರ್ ಹಾಗೂ ಸಂಧ್ಯಾ ಪಿ. ದಂಪತಿಯ ಪುತ್ರನಾಗಿದ್ದಾನೆ.




















