ನಾಪೋಕ್ಲು ಜ.20 : NEWS DESK : ಮೂರ್ನಾಡು ಪಿಯುಸಿ ಕಾಲೇಜಿನಲ್ಲಿ ನಡೆದ ಡಾನ್ಸ್ ಸ್ಪರ್ಧೆಯಲ್ಲಿ ಸೇಕ್ರಡ್ ಹಾರ್ಟ್ಸ್ ಆಂಗ್ಲ ಮಾಧ್ಯಮ ಶಾಲೆ ವಿಧ್ಯಾರ್ಥಿಗಳು ಪ್ರಥಮ ಸ್ಥಾನ ಗಳಿಸಿದರು.
ಶಾಲೆಯ ವಿದ್ಯಾರ್ಥಿಗಳಾದ ಕೌಶಲ್ಯ, ಸಾರಿಕಾ, ಸಿ.ಯು.ನಿಶಾನ, ಎಂ.ಬಿ.ಅನ0ತ್, ಪಿ.ಎನ್.ಸಂಶೀರ, ಪಿ.ಎನ್. ನಾದಿಯ, ಕೆ.ಕೆ.ಜಿಯಾದ್, ಪಿ. ಹೆಚ್.ಯಾಶೀರ್ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮೂರ್ನಾಡು ವಿದ್ಯಾಸಂಸ್ಥೆಯ ಅಧ್ಯಕ್ಷ ಬಾಚೆಟ್ಟಿರ ಮಾದಪ್ಪ ವಹಿಸಿದ್ದರು. ನಾಪೋಕ್ಲು ಶ್ರೀ ರಾಮ ಟ್ರಸ್ಟ್ ಸಂಸ್ಥೆಯ ಪ್ರಾಂಶುಪಾಲ ಕಲಿಯಾಟoಡ ಶಾರದ ಅಪ್ಪಣ್ಣ ಪಾಲ್ಗೊಂಡಿದ್ದರು.
ವರದಿ : ದುಗ್ಗಳ ಸದಾನಂದ








