ಮಡಿಕೇರಿ ಜ.20 :NEWS DESK : ಹಿಂದೂ ವಿವಾಹಕ್ಕೆ ಸಂಭಂದಿಸಿದಂತೆ ಹಿಂದೂ ಧರ್ಮದಲ್ಲಿ ಜನಿಸಿದ ವಧು-ವರರಿಗೆ ಉತ್ತಮ ಜೋಡಿ ಕಲ್ಪಿಸುವ ನಿಟ್ಟಿನಲ್ಲಿ ವಿಶ್ವ ಹಿಂದೂ ಮಾಂಗಲ್ಯ ಮಂಚ್ ಆರಂಭವಾಗಿದ್ದು, ಜ.12 ರಂದು ವಿರಾಜಪೇಟೆಯಲ್ಲಿ ಕೊಡಗು ಜಿಲ್ಲಾ ಘಟಕ ಉದ್ಘಾಟನೆಗೊಳ್ಳಲಿದೆ ಎಂದು
ಮಂಚ್ ನ ರಾಜ್ಯಾಧ್ಯಕ್ಷ ವಿನೋದ್ ತರ್ಮಲ್ ತಿಳಿಸಿದ್ದಾರೆ.
ವಿರಾಜಪೇಟೆಯ ಘಟಕದ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ
ಅವರು, ಹಿಂದೂ ಧರ್ಮದ ವಧು ಮತ್ತು ವರರಿಗೆ ಉತ್ತಮ ಬಾಳಸಂಗಾತಿ ದೊರಕಿಸಿಕೊಡಬೇಕು ಎನ್ನುವ ಪರಿಕಲ್ಪನೆಯಿಂದ ಸಂಸ್ಥೆಯನ್ನು ಆರಂಭಿಸಲಾಗಿದ್ದು, ರಾಜ್ಯದ ಇತರ ಭಾಗಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಇದೀಗಾ ಕೊಡಗು ಜಿಲ್ಲೆಗೆ ಸಿಮಿತವಾದಂತೆ ಕೊಡಗು ಜಿಲ್ಲಾ ಘಟಕದ ಕಾರ್ಯ ಕಛೇರಿಯನ್ನು ವಿರಾಜಪೇಟೆ ನಗರದಲ್ಲಿ ಪ್ರಾರಂಭಿಸಲಾಗುವುದು ಎಂದರು.
ವಿಶ್ವ ಹಿಂದೂ ಮಾಂಗಲ್ಯ ಮಂಚ್‍ನ ಪ್ರಮುಖರಾದ ಕೆ.ಎನ್.ಶಶಿ ಕುಮಾರ್ ಮಾತನಾಡಿ, ಹಿಂದೂ ಧರ್ಮವನ್ನು ಆಚರಿಸಿಕೊಂಡು ಬರುತ್ತಿರುವ ಜಾತಿ ಉಪ ಜಾತಿಗಳನ್ನು ಒಂದೇ ವೇದಕೆಯಲ್ಲಿ ತರುವುದಾಗಿದೆ. ವಧು ವರರಿಗೆ ಸೂಕ್ತ ಬಾಳ ಸಂಗಾತಿಯನ್ನು ದೊರಕಿಸಿಕೊಡುವುದು ಸಂಸ್ಥೆಯ ಪ್ರಮುಖ ವಿಷಯವಾಗಿದೆ. ವಧು-ವರರು ಸಂಸ್ಥೆಯ ಕಚೇರಿಯಲ್ಲಿ ಸಂಸ್ಥೆಯಿಂದ ಕೇಳಲಾಗುವ ದಾಖಲೆಗಳನ್ನು ಒದಗಿಸಿ, ನಿಗದಿಗೊಳಿಸಿರುವ ರೂ.500 ಗಳನ್ನು ನೀಡಿ ನೊಂದಾಯಿಸಿಕೊಳ್ಳತಕ್ಕದ್ದು. ವಿವಾಹಕ್ಕೆ ಯೋಗ್ಯರಾದ ಪ್ರಾಪ್ತ ವಯಸ್ಸಿನ ವ್ಯಕ್ತಿಗಳಿಗೆ ಮಾಹಿತಿ ವಿನಿಮಯ ಮಾಡಿಕೊಳ್ಳಲಾಗುತ್ತದೆ ಎಂದರು.
ಜ.21 ರಂದು ಬೆಳಿಗ್ಗೆ 10.30 ಗಂಟೆಗೆ ಅಖಿಲ ಭಾರತ ವಿಶ್ವ ಹಿಂದೂ ಮಾಂಗಲ್ಯ ಮಂಚ್ ನ ಪ್ರಧಾನ ಕಾರ್ಯದರ್ಶಿ ಸಿ.ಕೆ.ಜನಚಂದ್ರನ್ ಮಾಸ್ಟರ್ ಘಟಕವನ್ನು ಉದ್ಘಾಟಿಸಲಿದ್ದು, ಸಮಾಜದ ಇತರ ಕ್ಷೇತ್ರದ ಗಣ್ಯರು ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ವಿಶ್ವ ಹಿಂದೂ ಮಾಂಗಲ್ಯ ಮಂಚ್ ನ ಪ್ರಮುಖ ದಾಮೋಧರ್ ಆಚಾರ್ಯ ಹಾಜರಿದ್ದರು.








