ಮಡಿಕೇರಿ ಜ.20 : NEWS DESK : ದೆಹಲಿಯಲ್ಲಿ ಜ.26 ರಂದು ನಡೆಯಲಿರುವ ಗಣರಾಜ್ಯೋತ್ಸವದ ಪಥ ಸಂಚಲನಕ್ಕೆ ಕೊಡಗಿನ ಬಿ.ಎಸ್.ರಕ್ಷಿತಾ ಆಯ್ಕೆಯಾಗಿದ್ದಾಳೆ.
ಬೆಂಗಳೂರಿನ ಜ್ಯೋತಿ ನಿವಾಸ್ ಕಾಲೇಜಿನಲ್ಲಿ ಅಂತಿಮ ಬಿ.ಎಸ್ಸಿ. ವ್ಯಾಸಂಗ ಮಾಡುತ್ತಿರುವ ಇವಳು, ಎನ್.ಸಿ.ಸಿ. ಘಟಕದಿಂದ ಪರೇಡ್ ಗೆ ಆಯ್ಕೆಯಾಗಿದ್ದಾಳೆ.
ವಿರಾಜಪೇಟೆಯ ಬೇಟೋಳಿ ಗ್ರಾ.ಪಂ ಮಾಜಿ ಸದಸ್ಯ ಬಿ. ಎನ್. ರಮೇಶ್ ಅವರ ಮೊಮ್ಮಗಳು ಮತ್ತು ಬೆಂಗಳೂರಿನಲ್ಲಿ ರಾಜ್ಯ ಮೀಸಲು ಪೊಲೀಸ್ ಪಡೆಯ ಅಧಿಕಾರಿ ಬಿ.ಆರ್. ಶುಭ ಶಂಕರ್ ಹಾಗೂ ಶಿಕ್ಷಕಿ ಬಿ.ಎನ್.ನಳಿನಾಕ್ಷಿ ಅವರ ಪುತ್ರಿಯಾಗಿರುವ ರಕ್ಷಿತಾ ಈ ಹಿಂದೆಯೂ ಎನ್. ಸಿ. ಸಿ. ಯ ಅನೇಕ ಶಿಬಿರಗಳು ಹಾಗೂ ತರಬೇತಿಗಳಲ್ಲಿ ಪಾಲ್ಗೊಂಡು ಉತ್ತಮ ಎನ್.ಸಿ.ಸಿ. ಕೆಡೆಟ್ ಎಂಬ ಮನ್ನಣೆಗೂ ಪಾತ್ರಳಾಗಿದ್ದಾಳೆ.









