ಮಡಿಕೇರಿ ಜ.20 : NEWS DESK : ಹನ್ನೆರಡನೇ ಶತಮಾನದಲ್ಲಿ ಕನ್ನಡ ನಾಡನ್ನು ಸಾಮಾಜಿಕವಾಗಿ ಹಾಗೂ ಸಾಂಸ್ಕೃತಿಕವಾಗಿ ಶ್ರೀಮಂತಗೊಳಿಸಿದ ಭಕ್ತಿ ಭಂಡಾರಿ ಬಸವೇಶ್ವರರನ್ನು ರಾಜ್ಯದ ಸಾಂಸ್ಕೃತಿಕ ನಾಯಕರಾಗಿ ಘೋಷಿಸಿದ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರದ ಕ್ರಮ ಸ್ತುತ್ಯಾರ್ಹವಾದುದು ಎಂದು ಕೊಡಗು ಜಿಲ್ಲಾ ವಚನ ಸಾಹಿತ್ಯ ವೇದಿಕೆ ಅಧ್ಯಕ್ಷ ಕೆ.ಎಸ್.ಮೂರ್ತಿ ಹೇಳಿಕೆ ನೀಡಿದ್ದಾರೆ.
ಪತ್ರಿಕಾ ಪ್ರಕಟಣೆ ನೀಡಿದ ಅವರು, ಸಮಾಜದಲ್ಲಿ ಇಂದಿಗೂ ಸಾಮಾಜಿಕ ಪಿಡುಗಾಗಿಯೇ ಉಳಿದಿರುವ ಜಾತಿ, ವರ್ಣ, ವರ್ಗ, ಲಿಂಗ ಬೇಧದ ವಿರುದ್ದದ ಬಸವೇಶ್ವರರು ಹನ್ನೆರಡನೇ ಶತಮಾನದಲ್ಲಿಯೇ ಧ್ವನಿ ಮೊಳಗಿಸಿದ್ದರು ಎಂದ ಅವರುಕೊಡಗು ಜಿಲ್ಲೆಯ ಮಹಾ ಜನತೆಯ ಪರವಾಗಿ ರಾಜ್ಯ ಸರ್ಕಾರದ ದಿಟ್ಟಕ್ರಮವನ್ನು ಪ್ರಶಂಸಿಸಿದ್ದಾರೆ.