ಮಡಿಕೇರಿ ಜ.21 : ಸಾಮಾಜಿಕ ಜಾಲತಾಣದ ಮೂಲಕವೇ ಕವಿತೆ ಮತ್ತು ಕಥೆಗಳನ್ನು ಬರೆದುಕೊಳ್ಳುವ ನೂರಾರು ಮಂದಿ ಸಾಹಿತ್ಯಾಸಕ್ತರನ್ನು ಸೇರಿಸಿ ರಚಿಸಿರುವ ಸಾಮಾಜಿಕ ಜಾಲತಾಣದ ಕನ್ನಡ ಸಾಹಿತ್ಯ ಬಳಗ ಕಥಾಗುಚ್ಛದ ಮಂದಿಗೆ ಕಣಿವೆಯ ರಾಮಲಿಂಗೇಶ್ವರ ಸಭಾಂಗಣದಲ್ಲಿ ಭಾನುವಾರ ನಡೆದ “ಸ್ನೇಹ ಕೂಟ” ಕಾರ್ಯಕ್ರಮ ಒಂದೆಡೆ ಸೇರಲು ಉತ್ತಮ ವೇದಿಕೆಯಾಯಿತು.
ಸಾಹಿತ್ಯ ಬಳಗದ ಸಂಸ್ಥಾಪಕಿ ಲತಾ ಜೋಷಿ ಅವರ ನೇತೃತ್ವದಲ್ಲಿ ಜಿಲ್ಲೆ ಮತ್ತು ಹೊರ ಜಿಲ್ಲೆಗಳ ಸಾಹಿತಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸಾಹಿತ್ಯ, ಸಂಸ್ಕೃತಿ, ವಿಚಾರ ವಿನಿಮಯ ಮಾಡಿಕೊಂಡರು. ಜಿಲ್ಲಾ ಜಾನಪದ ಪರಿಷತ್ ಅಧ್ಯಕ್ಷ ಬಿ.ಜಿ.ಅನಂತಶಯನ ಅವರು ಮಾತನಾಡಿ ಅನೇಕ ಜಿಲ್ಲೆಗಳ ಸಾಹಿತ್ಯಾಸಕ್ತರನ್ನು ಸೇರಿಸಿ ಸ್ನೇಹ ಬಳಗ ಕಟ್ಟಿ ಸಾಹಿತ್ಯಾತ್ಮಕವಾದ ಕಾರ್ಯಕ್ರಮಗಳನ್ನು ರೂಪಿಸುತ್ತಿರುವುದು ಶ್ಲಾಘನೀಯ ಎಂದರು.
ಲತಾ ಜೋಷಿ ಮಾತನಾಡಿ, ಫೇಸ್ ಬುಕ್ ಸಾಹಿತ್ಯ ವೇದಿಕೆ 6 ವರ್ಷಗಳ ಹಿಂದೆ ಆರಂಭವಾಯಿತು. ಇದರಲ್ಲಿ ಸಾಹಿತ್ಯ ಕೃಷಿ ಮಾಡುವ ಬೇರೆ ಬೇರೆ ಜಿಲ್ಲೆಗಳ ಸಹಸ್ರಾರು ಮಂದಿ ಸದಸ್ಯರಿದ್ದಾರೆ. ನಮ್ಮಲ್ಲಿರುವ ಸದಸ್ಯರುಗಳೇ ಬರೆಯುವ ಅರ್ಥಗರ್ಭಿತ ಸಾಹಿತ್ಯ ಸಂಗ್ರಹವನ್ನು ಕಲೆ ಹಾಕಿ ಹತ್ತಕ್ಕೂ ಹೆಚ್ಚು ಪುಸ್ತಕಗಳನ್ನು ಹೊರತಂದಿದ್ದೇವೆ ಎಂದು ತಿಳಿಸಿದರು. ಸ್ನೇಹ ಕೂಟದ ಸದಸ್ಯರೆಲ್ಲರೂ ಫೇಸ್ ಬುಕ್ ನಲ್ಲಿಯೇ ಚರ್ಚಿಸಿ ತೀರ್ಮಾನಗಳನ್ನು ಕೈಗೊಂಡು ವರ್ಷದಲ್ಲಿ ಎರಡು ಕಾರ್ಯಕ್ರಮಗಳನ್ನು ರೂಪಿಸುತ್ತೇವೆ. ಪ್ರತೀ ವರ್ಷ ರಾಜ್ಯದ ಬೇರೆ ಬೇರೆ ಜಿಲ್ಲೆಗಳಿಗೆ ಸಾಹಿತ್ಯ ಪ್ರವಾಸ ಹಮ್ಮಿಕೊಂಡು ಅಲ್ಲಿನ ಪ್ರಕೃತಿ, ಪರಿಸರ ಹಾಗೂ ಜನಜೀವನದ ಜೊತೆಗೆ ಅಲ್ಲಿನ ಸಾಂಸ್ಕೃತಿಕ ವೈಭವಗಳನ್ನು ಅರಿಯುವ ಕೆಲಸ ಮಾಡುತ್ತೇವೆ ಎಂದು ವಿವರಿಸಿದರು. ಕುಶಾಲನಗರ ಕೊಡವ ಸಮಾಜದ ಮಹಿಳಾ ಸದಸ್ಯರು ಕೊಡವ ಹಾಡು, ನೃತ್ಯ ಪ್ರದರ್ಶಿಸಿದರು.
ಮಿಲನ ಭರತ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಅರೆ ಭಾಷೆ ಸಂಸ್ಕೃತಿ ಸಾರುವ ಸುಗ್ಗಿ ಸುವ್ವಾಲೆ ನೃತ್ಯ, ಜಾನಪದ ಪರಿಷತ್ ಜಿಲ್ಲಾಧ್ಯಕ್ಷ ಬಿ.ಜಿ.ಅನಂತಶಯನ, ಜಯಶ್ರೀ ಅನಂತ ಶಯನ, ರಂಜಿತ್ ಹಾಗೂ ಕೌಸರ್ ಅವರಿಂದ ಹುತ್ತರಿ ಹಾಡು, ಕೊಕ್ಕಲೆರ ಧರಣಿ ತಂಡದಿಂದ ಕನ್ನಡ ಹಾಡು, ಭಾವಗೀತೆ, ಜಾನಪದ ಗೀತೆ ಮೊದಲಾದ ನೃತ್ಯ ವೈಭವಗಳು ನಡೆದವು.
ಕನ್ನಡ ಕಥಾ ಗುಚ್ಛದ ಸಂಘಟಕ ಚಾಮರಾಜನಗರದ ಬಾಹುಬಲಿ ಜಯರಾಜು, ಹಿರಿಯ ಸಂಘಟಕ ಕೆ.ವಿ.ಶಶಿಧರ್, ಆಪ್ತ ಸಲಹೆಗಾರ ಡಿ.ಮಲ್ಲಾರೆಡ್ಡಿ, ಪ್ರಮುಖರಾದ ಗಿರೀಶ್ ಕುಲಕರ್ಣಿ, ಚಂದ್ರಶೇಖರ್, ರಾಘವೇಂದ್ರ ಇನಾಮ್ ದಾರ್, ಹರೀಶ್ ಕುಮಾರ್ ರಾವ್, ಸುಜಾತ ರೆಡ್ಡಿ, ಇಂಧೂಮಣಿ, ಕೊಡಗಿನ ಸದಸ್ಯರಾದ ಡಾ.ಸೂರ್ಯಕುಮಾರ್, ಸಾಹಿತಿ ಕಣಿವೆಯ ಭಾರದ್ವಾಜ್ ಆನಂದ ತೀರ್ಥ, ನೌಷಧ್ ಜನ್ನತ್, ಇರ್ಫಾನ್ ಹಸನ್ ಕುಟ್ಟಿ, ಸೌಮ್ಯ ಉಮೇಶ್, ಕೃಪಾದೇವರಾಜು, ಹೇಮಂತ್ ಪಾರೆರ, ನೂತನ್, ಶಿಲ್ಪ, ಪವಿತ್ರ, ರೇಣುಕಾ, ಜಯಶ್ರೀ ಅನಂತಶಯನ, ಕೃಪಾ ದೇವರಾಜ್, ಹಾ.ತಿ.ಜಯಪ್ರಕಾಶ್, ಮಾಲತಿ ಭಾರದ್ವಾಜ್, ಸೂರ್ಯನಾರಾಯಣ ಹಾಗೂ ಕಣಿವೆ ದೇವಾಲಯ ಸಮಿತಿ ಅಧ್ಯಕ್ಷ ಕೆ.ಎನ್.ಸುರೇಶ್ ಉಪಸ್ಥಿತರಿದ್ದರು. ಸ್ನೇಹ ಕೂಟದ ಪ್ರಮುಖರಿಗೆ ಗಿಡಗಳನ್ನು ನೀಡಿ ಗೌರವಿಸಲಾಯಿತು.ಕಣಿವೆ ಶ್ರೀ ರಾಮಲಿಂಗೇಶ್ವರ ದೇವಾಲಯದ ಆಡಳಿತ ಮಂಡಳಿ ಅಧ್ಯಕ್ಷ ಕೆ.ಎನ್.ಸುರೇಶ್, ವೈದ್ಯ ಸೂರ್ಯ ಕುಮಾರ್, ಬಿ.ಜಿ.ಅನಂತ ಶಯನ ಹಾಗೂ ಸಂಘಟಕರನ್ನು ಸನ್ಮಾನಿಸಲಾಯಿತು.
Breaking News
- *ಲಾರಿ ಡಿಕ್ಕಿಯಾಗಿ ಬಾಲಕಿ ಸಾವು*
- *ಅದವಿಯಾಗೆ ಅಭಿನಂದನೆ*
- *ನಿಧನ ಸುದ್ದಿ*
- *ಇವಿಎಂ ಬದಲು ಬ್ಯಾಲೆಟ್ ಪೇಪರ್ ಕೋರಿದ್ದ ಪಿಐಎಲ್ ಸುಪ್ರೀಂ ಕೋರ್ಟಲ್ಲಿ ವಜಾ*
- *ಕಾರಾಗೃಹ ವಾರ್ಡನ್ ಹುದ್ದೆಗೆ ಆಹ್ವಾನ*
- *ವೀರ ಸೇನಾನಿಗಳಿಗೆ ಅಗೌರವ : ಕುಲಾಲ ಕುಂಬಾರ ಸಂಘ ಖಂಡನೆ*
- *ಡಿ.1 ರಂದು ಜಿಲ್ಲಾ ಮಟ್ಟದ ಕ್ರಿಸ್ಮಸ್ ಕರೋಲ್ ಗಾಯನ ಸ್ಪರ್ಧೆ*
- *ಆರೋಪಿಯ ಗಡಿಪಾರಿಗೆ ಹಿಂದು ಜಾಗರಣ ವೇದಿಕೆ ಒತ್ತಾಯ*
- *ಸೋಮವಾರಪೇಟೆ ತಾಲ್ಲೂಕು ಮಟ್ಟದ ಪ್ರೌಢಶಾಲಾ ವಿಭಾಗದ ವಿವಿಧ ಸ್ಪರ್ಧಾ ಕಾರ್ಯಕ್ರಮ*
- *ಸೋಮವಾರಪೇಟೆ : ಬಾಲ್ಯ ವಿವಾಹ ಶಿಕ್ಷಾರ್ಹ ಅಪರಾಧ : ಹಿರಿಯ ಸಿವಿಲ್ ನ್ಯಾಯಾಧೀಶ ಗೋಪಾಲಕೃಷ್ಣ*