ಮಡಿಕೇರಿ ಜ.22 NEWS DESK : ಭಾರತ ಸರ್ಕಾರ, ನೆಹರು ಯುವ ಕೇಂದ್ರ ಮಡಿಕೇರಿ, ಯುವ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯ, ಮಡಿಕೇರಿ ಸಂಚಾರಿ ಪೊಲೀಸ್, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಂಯುಕ್ತಾಶ್ರಯದಲ್ಲಿ ರಸ್ತೆ ಸುರಕ್ಷತೆ ಜಾಗೃತಿ ಅಭಿಯಾನ ನಡೆಯಿತು.
ಹಿರಿಯ ಪಾರ್ಥಮಿಕ ಶಾಲೆ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಿಎಸ್‍ಐ ಸಿ.ವಿ.ಶ್ರೀಧರ್ ಮಾತನಾಡಿ, ಮಕ್ಕಳಿಗೆ ಸಂಚಾರಿ ನಿಯಮಗಳು ತುರ್ತು ಸಂದರ್ಭದಲ್ಲಿ ಯಾವ ನಂಬರ್ ಸಹಾಯ ಪಡೆಯಬೇಕು ಹೀಗೆ ಹಲವಾರು ವಿಷಯಗಳ ಬಗ್ಗೆ ಮಾಹಿತಿ ನೀಡಿದರು.
ಎಎಸ್‍ಐ ರಂಗೇಗೌಡ, ಎಎಸ್‍ಐ ನಂದ, ಪೊಲೀಸ್ ಕಾನ್ಸ್ಟೇಬಲ್ ಮಂಜು ಪಾಲ್ಗೊಂಡು ಮಾತನಾಡಿ, ಪೊಲೀಸ್ ಸಿಗ್ನಲ್ ಪಾಲಿಸಿ, ನಿಮ್ಮ ವಾಹನವನ್ನು “ಪಾರ್ಕಿಂಗ್ ಏರಿಯಾಗಳಲ್ಲಿ” ಮಾತ್ರ ನಿಲುಗಡೆ ಮಾಡಿ, ರಸ್ತೆಯ ಮಧ್ಯದಲ್ಲಿ ನಿಮ್ಮ ವಾಹನವನ್ನು ನಿಲ್ಲಿಸಬೇಡಿ, ಚಾಲನೆ ಮಾಡುವಾಗ ಎಂದಿಗೂ ಮದ್ಯದ ಪ್ರಭಾವಕ್ಕೆ ಒಳಗಾಗಬೇಡಿ, ಜೀಬ್ರಾ ಕ್ರಾಸಿಂಗ್‌ನಲ್ಲಿ ಪಾದಚಾರಿಗಳು ರಸ್ತೆ ದಾಟುವಾಗ ನಿಮ್ಮ ವಾಹನವನ್ನು ನಿಲ್ಲಿಸಿ ಎಂದರು.
ಬ್ಲೈಂಡ್ ಕಾರ್ನರ್‌ಗಳಲ್ಲಿ ಓವರ್‌ಟೇಕ್ ಮಾಡಬೇಡಿ, ಮುಂಬರುವ ವಾಹನಕ್ಕೆ ದಾರಿ ನೀಡಿ, ಪ್ರಯಾಣಿಕರೊಂದಿಗೆ ನಿಮ್ಮ ವಾಹನವನ್ನು ಓವರ್ಲೋಡ್ ಮಾಡಬೇಡಿ, ರಾತ್ರಿ ಪ್ರಯಾಣದ ಸಮಯದಲ್ಲಿ ಡಿಮ್ಮರ್ ಬಳಸಿ, ಕಾನೂನುಬದ್ಧವಾಗಿ ಅನುಮತಿಸದ ಸರಕುಗಳನ್ನು ಸಾಗಿಸಬೇಡಿ, ನಿಮ್ಮ ಪರವಾನಗಿ ಮತ್ತು ವಾಹನದ ಸಂಬಂಧಿತ ಪೇಪರ್‌ಗಳನ್ನು ಯಾವಾಗಲೂ ಒಯ್ಯಿರಿ, ನೀವು ಪ್ರತಿ ಬೆಳಿಗ್ಗೆ ಅದನ್ನು ಹೊರತೆಗೆಯುವ ಮೊದಲು ನಿಮ್ಮ ವಾಹನದ ಸ್ಥಿತಿಯನ್ನು ಪರಿಶೀಲಿಸಿ,ಪ್ರಯಾಣಿಕರಿಗೆ ಸೌಜನ್ಯದಿಂದಿರಿ, ನಿಮ್ಮ ವಾಹನದಲ್ಲಿ ಪ್ರಥಮ ಚಿಕಿತ್ಸಾ ಪೆಟ್ಟಿಗೆಯನ್ನು ಇರಿಸಿ, ಯಾವುದೇ ಮೋಟಾರು ಅಪಘಾತದ ಬಗ್ಗೆ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿ,ಯಾವುದೇ ಅಪಘಾತ ಸಂಭವಿಸಿದಾಗ ಗಾಯಾಳುಗಳನ್ನು ಹತ್ತಿರದ ಆಸ್ಪತ್ರೆಗೆ ಸಾಗಿಸಿ ಸುವಂತೆ ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರು ಹಾಗೂ ನೆಹರು ಕೇಂದ್ರದ ಸಿಬ್ಬಂದಿಗಳಾದ ದೀಪ್ತಿ, ರಂಜಿತ ಹಾಜರಿದ್ದರು.