ಸುಂಟಿಕೊಪ್ಪ,ಜ.22 NEWS DESK : ಆಯೋಧ್ಯೆಯಲ್ಲಿ ಶ್ರೀ ರಾಮ ಮಂದಿರ ಲೋಕಾರ್ಪಣೆಯೊಂದಿಗೆ ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆಯ ಹಿನ್ನಲೆಯಲ್ಲಿ ದೇಶದ್ಯಾಂತ ನಡೆದ ವಿಶೇಷ ಪೂಜಾ ಮತ್ತು ಇತರ ಧಾರ್ಮಿಕ ಕಾರ್ಯಕ್ರಮಗಳು ಸುಂಟಿಕೊಪ್ಪ ಹೋಬಳಿ ವ್ಯಾಪ್ತಿಯಲ್ಲಿ ಕೂಡ ಪ್ರತಿಸ್ಪಂದನಗೊಂಡು ಪ್ರತಿ ಹಳ್ಳಿಯ ದೇವಾಲಯಗಳಲ್ಲಿ ವಿಶೇಷ ಪೂಜೆ ಹೋಮ, ಹವನದಿಗಳ ಸಹಿತ ಅನ್ನಸಂತರ್ಪಣೆಯೊಂದಿಗೆ ಸಹಸ್ರಹಾರು ಭಕ್ತರು ಪಾಲ್ಗೊಂಡು ಐತಿಹಾಸಿಕ ಕ್ಷಣವನ್ನು ಸಂಭ್ರಮಿಸಿದರು. ಹೆಚ್ಚಿನ ದೇವಾಲಯಗಳಲ್ಲಿ ಬಹೃತ್ ಟಿವಿ ಪರದೆ ಅಳವಡಿಸುವ ಮೂಲಕ ಭಕ್ತಾಧಿಗಳು ಪೂಜೆಯೊಂದಿಗೆ ಅಯೋಧ್ಯೆಯ ನೇರ ಕಾರ್ಯಕ್ರಮವನ್ನು ಕಣ್ತುಂಬಿಕೊಂಡರು.
ಸುಂಟಿಕೊಪ್ಪದ ಶ್ರೀ ಕೊದಾಂಡರಾಮ ದೇವಾಲಯದಲ್ಲಿ ವಿಶೇಷ ಪೂಜೆ ಅನ್ನಸಂತರ್ಪಣೆ ನಡೆಯಿತು.
ಬೆಳಿಗ್ಗೆ ಗಣಪತಿ ಹೋಮದೊಂದಿಗೆ ಪ್ರಾರಂಭವಾಗಿ ರಾಮತರಾಕ ಹೋಮವನ್ನು ನಡೆಸಲಾಯಿತು. ಪೂಜಾ ಕೈಂಕರ್ಯಗಳನ್ನು ಪ್ರಧಾನ ಅರ್ಚಕ ದರ್ಶನ್ ಭಟ್, ಮನೋಜ್ ಭಟ್, ವೆಂಕಟರಮಣ ಭಟ್ ನೇರವೇರಿಸಿದರು.
ಮಧ್ಯಾಹ್ನ ಮಹಾಪೂಜೆಯ ಬಳಿಕ ಅನ್ನ ಸಂತರ್ಪಣೆ ನೆರವೇರಿತು.
ಕಾರ್ಯಕ್ರಮದ ನೇತೃತ್ವವನ್ನು ಪಿ.ಆರ್.ಸುನಿಲ್ ಕುಮಾರ್, ಎಸ್.ಶಾಂತರಾಂ ಕಾಮತ್, ಡಿ.ನರಸಿಂಹ, ಎಂ.ಎಸ್.ಸುನಿಲ್, ಧನುಕಾವೇರಪ್ಪ, ಬಿ.ಕೆ.ಮೋಹನ್, ಪ್ರಶಾಂತ್ ಕೋಕಾ, ವಾಸುದೇವ, ನಿಖಿಲ್ ಸೇರಿದಂತೆ ಸ್ವಯಂ ಸೇವಕರು ವಸಹಿಸಿದ್ದರು.
ದೊಡ್ಡಮನೆ ಆನಂದ್ ಬಸಪ್ಪ ರಿಗೆ ಗೌರವ ಅರ್ಪಣೆ : 1972ನೇ ಇಸವಿಯಲ್ಲಿ ಪನ್ಯ ತೋಟದ ಮಾಲೀಕರಾದ ಸರಸ್ವತಿ ಬಸಪ್ಪ ಮತ್ತು ಡಿ. ಬಸಪ್ಪ ಅವರು ಸುಂಟಿಕೊಪ್ಪದ ಕೊದಾಂಡ ರಾಮ ದೇವಾಲಯವನ್ನು ನಿರ್ಮಿಸಿಕೊಟ್ಟಿದ್ದರು.
ಅಲ್ಲದೆ ಜವಾಬ್ದಾರಿ ಮತ್ತು ನಿರ್ವಹಣೆಯನ್ನು ಅವರ ಕಾಲದವರೆಗೂ ನಿರ್ವಹಿಸಿ ಆನಂತರ ಅವರ ಪುತ್ರ ಡಿ.ಆನಂದ ಬಸಪ್ಪ ವಹಿಸಿದ್ದರು. ಪ್ರಸ್ತುತ ಅವರು ಈ ದೇವಾಲಯವನ್ನು ಸುಂಟಿಕೊಪ್ಪದ ಶ್ರೀ ರಾಮ ಸೇವಾ ಸಮಿತಿ ಟ್ರಸ್ಟ್‍ಗೆ ವಹಿಸಿರುತ್ತಾರೆ. ಈ ಹಿನ್ನಲೆಯಲ್ಲಿ ಡಿ.ಆನಂದ ಬಸಪ್ಪ ಅವರನ್ನು ಕಾರ್ಯಕ್ರಮದಲ್ಲಿ ಗೌರವಿಸಲಾಯಿತು.
ಈ ಸಂದರ್ಭ ಟ್ರಸ್ಟಿಗಳಾದ ಕೆ.ಪಿ.ಜಗನ್ನಾಥ್, ಎ.ಲೋಕೇಶ್ ಕುಮಾರ್, ಬಿ.ಎಸ್.ಅಶೋಕ್ ಮತ್ತು ಮಂಜುನಾಥ್ ಅವರು ನಡೆಸಿಕೊಟ್ಟರು.
ಈ ಸಂದರ್ಭ ಟ್ರಸ್ಟ್ ಅಧ್ಯಕ್ಷ ಎಸ್.ಬಿ.ಶಂಕರ್ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಊರಿನ ಪ್ರಮುಖರು, ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.
ಕೊಡಗರಹಳ್ಳಿಯ ಶ್ರೀ ಬೈತೂರಪ್ಪ ಪೊವ್ವೆದಿ ಬಸವೇಶ್ವರ ದೇವಾಲಯದಲ್ಲಿ ವಿಶೇಷ ಪೂಜೆ, ಭಜನೆ ಬಳಿಕ ಅನ್ನ ಸಂತರ್ಪಣೆ ನಡೆಯಿತು.
ಶ್ರೀ ಬೈತೂರಪ್ಪ ಭಜನಾ ಮಂಡಳಿಯವರು ಬೆಳಗ್ಗೆ ಮತ್ತು ಸಂಜೆ ತಲಾ 3 ಗಂಟೆಗಳ ಕಾಲ ಭಜನಾ ಕಾರ್ಯಕ್ರಮವನ್ನು ನಡೆಸಿಕೊಟ್ಟರು.
ಕಾರ್ಯಕ್ರಮದಲ್ಲಿ ಟ್ರಸ್ಟ್ ಅಧ್ಯಕ್ಷ ಕೆ.ಎನ್.ಪೂಣಚ್ಚ ಕಾರ್ಯದರ್ಶಿ ಬಿ.ಸಿ.ದಿನೇಶ್, ಖಜಾಂಜಿ ಡಾ.ಎ.ಬಿ.ತಮ್ಮಯ್ಯ, ಟ್ರಸ್ಟಿಗಳಾದ ಜೆ.ಎಂ.ಹ್ಯಾರಿ ಕಾರ್ಯಪ್ಪ, ಎ.ಎಂ.ಸನ್ನಿ ಕಾರ್ಯಪ್ಪ, ಕೆ.ಎಸ್.ಮಂಜುನಾಥ್, ಎಂ.ಎಸ್.ಸುರೇಶ್ ಚಂಗಪ್ಪ, ಸಿ.ಎನ್.ದತ್ತ ಸೋಮಣ್ಣ ಪರುಪತ್ಯೆದಾರರಾದ ಎ.ಪಿ.ರಾಜೇಂದ್ರ, ಬೈತೂರಪ್ಪ ಭಜನಾ ಮಂಡಳಿಯ ಪುರೋಷತ್ತೋಮ ಬಂಗೇರ, ಪೂವಪ್ಪ, ಅಯ್ಯಪ್ಪ ನಾಯರ್, ನೀತಾ ಹರೀಶ್ ಸೇರಿದಂತೆ ನೂರಾರು ಭಕ್ತರು ಪಾಲ್ಗೊಂಡಿದ್ದರು.
7ನೇ ಹೊಸಕೋಟೆಯ ಶ್ರೀ ಗಣಪತಿ ದೇವಾಲಯದಲ್ಲಿ ವಿಶೇಷ ಪೂಜೆ ಮತ್ತು ಅನ್ನ ಸಂತರ್ಪಣಾ ಕಾರ್ಯಕ್ರಮ ನಡೆಯಿತು.
ನೂರಾರು ಭಕ್ತರು ಪಾಲ್ಗೊಂಡಿದ್ದರು. ಇಲ್ಲಿಗೆ ಸಮೀಪದ ಮಾರುತಿನಗರದ ಶ್ರೀ ಆಂಜನೇಯ ದೇವಸ್ಥಾನದಲ್ಲಿ ವಿಶೇಷ ಪೂಜೆ, ಅನ್ನ ಸಂತರ್ಪಣೆ ನಡೆಯಿತು.
ಕಂಬಿಬಾಣೆಯ ಶ್ರೀ ರಾಮ ಮತ್ತು ಚಾಮುಂಡೇಶ್ವರಿ ದೇವಾಲಯದಲ್ಲಿ ವಿಶೇಷ ಪೂಜೆ ಮತ್ತು ಅನ್ನ ಸಂತರ್ಪಣೆ ನಡೆಯಿತು.
ಸುತ್ತ ಮುತ್ತಲಿನ ಗ್ರಾಮಗಳಿಂದ ನೂರಾರು ಸಂಖ್ಯೆಯಲ್ಲಿ ಭಕ್ತಾಧಿಗಳು ಪಾಲ್ಗೊಂಡಿದ್ದರು. ಕಾರ್ಯಕ್ರಮದ ಅಂಗವಾಗಿ ಗಣಪತಿ ಹೋಮ ಮತ್ತು ರಾಮತಾರಕ ಹೋಮವನ್ನು ದೇವಾಲಯದ ಪ್ರಧಾನ ಅರ್ಚಕರಾದ ಪ್ರಭಾಕರ ಕುದ್ದಣ್ಣಾಯ್ಯ ಮತ್ತು ಪ್ರಜಲ್ವ ಕುದ್ದಣ್ಣಾಯ್ಯ ನಡೆಸಿಕೊಟ್ಟರು.
ಕಾರ್ಯಕ್ರಮದ ನೇತೃತ್ವವನ್ನು ದೇವಾಲಯ ಸಮಿತಿ ಅಧ್ಯಕ್ಷ ಡಾ.ಶಶಿಕಾಂತರೈ, ಕಾರ್ಯದರ್ಶಿ ಬಿ.ಪಿ.ಗಣೇಶ, ಖಜಾಂಜಿ ಅಜಿತ್ ಕುಮಾರ್ ಸೇರಿದಂತೆ ದೇವಾಲಯದ ಪದಾಧಿಕಾರಿಗಳು ಸೇವಕರು ನಡೆಸಿಕೊಟ್ಟರು.
ಸುಂಟಿಕೊಪ್ಪ ರಾಮ ಮಂದಿರದಲ್ಲಿ ನಡೆಯುವ ಪೂಜಾ ಕಾರ್ಯಕ್ರಮದ ಅಂಗವಾಗಿ ಸ್ಥಳೀಯ ಹಿಂದೂ ಬಾಂಧವರು ಕೋಳಿ, ಕುರಿ, ಮೀನು ಮಾರಾಟದ ಮಾಲೀಕರಿಗೆ ಸೋಮವಾರ ಮಧ್ಯಾಹ್ನದವರಿಗೆ ತಮ್ಮ ಅಂಗಡಿಗಳನ್ನು ಮುಚ್ಚಿದರು.