ಮಡಿಕೇರಿ ಜ.23 NEWS DESK : ಅಯೋಧ್ಯೆಯಲ್ಲಿ ಶ್ರೀ ಬಾಲರಾಮನ ಪ್ರಾಣ ಪ್ರತಿಷ್ಠಾಪನೆ ಪ್ರಯುಕ್ತ ಕತ್ತಲೆಕಾಡು, ಜೇನುಕೊಲ್ಲಿ ವಿನಾಯಕ ಸೇವಾ ಸಮಿತಿ ವತಿಯಿಂದ ದೀಪೋತ್ಸವ ಹಾಗೂ ಭಜನಾ ಕಾರ್ಯಕ್ರಮ ಜರುಗಿತು.
ಸಮಿತಿ ಆವರಣದಲ್ಲಿ ಗ್ರಾಮದ ಸಾರ್ವಜನಿಕರು ಹಣತೆಗಳನ್ನು ಬೆಳಗಿದರು. ಬಳಿಕ ಸುಭಾಷ್ ಮತ್ತು ಸ್ಥಳೀಯ ಮಕ್ಕಳು ಭಜನಾ ಕಾರ್ಯಕ್ರಮ ನಡೆಸಿಕೊಟ್ಟರು. ಸಾರ್ವಜನಿಕರಿಗೆ ಅನ್ನಸಂತರ್ಪಣೆ ನಡೆಯಿತು. ಕತ್ತಲೆಕಾಡು, ಜೇನುಕೊಲ್ಲಿ, ಕ್ಲೋಸ್‌ಬರ್ನ್ ಭಾಗದ ಸಾರ್ವಜನಿಕರು ಪಾಲ್ಗೊಂಡಿದ್ದರು.
ಸಮಿತಿ ಅಧ್ಯಕ್ಷ ಎಂ.ಎಸ್. ಅಶೋಕ್, ಕಾರ್ಯದರ್ಶಿ ಬ್ರಿಜೇಶ್ ರೈ, ಖಜಾಂಚಿ ಸತೀಶ್ ರೈ, ಮಾಜಿ ಅಧ್ಯಕ್ಷ ಹೊನ್ನಪ್ಪ ಆಚಾರ್ಯ, ಮಹಿಳಾ ಘಟಕದ ಪ್ರತಿಭಾ, ರಮಣಿ ಶೇಷಪ್ಪ, ವಿದ್ಯಾರ್ಥಿ ಘಟಕದ ಸದಸ್ಯರು, ಸಾರ್ವಜನಿಕರು ಈ ಸಂದರ್ಭ ಇದ್ದರು.









