ಮಡಿಕೇರಿ ಜ.24 NEWS DESK : ಪ್ರಸಕ್ತ(2023-24) ಸಾಲಿಗೆ ವಕ್ಫ್ ನೋಂದಾಯಿತ/ ಸಂಘ ಕಾಯ್ದೆಯಡಿ ನೊಂದಾಯಿತ ಮದರಸಾಗಳಲ್ಲಿ ವ್ಯಾಸಂಗ ಮಾಡುತ್ತಿರುವ 13 ರಿಂದ 18 ವರ್ಷದ ಒಳಗಿನ ಮಕ್ಕಳಿಗೆ ಧಾರ್ಮಿಕ ಶಿಕ್ಷಣದ ಜೊತೆ 2 ವರ್ಷಗಳ ಕಾಲ ಔಪಚಾರಿಕ ಮತ್ತು ಗಣಕೀಕೃತ ಶಿಕ್ಷಣವನ್ನು (ಆನ್‍ಲೈನ್-ಆಫ್‍ಲೈನ್ ಕೋಚಿಂಗ್) ನೀಡಲು ಹಾಗೂ ಎಸ್‍ಎಸ್‍ಎಲ್‍ಸಿ, ಪಿಯುಸಿ, ಪದವಿಯನ್ನು ರಾಜ್ಯ, ರಾಷ್ಟ್ರೀಯ ಮುಕ್ತ ಶಾಲೆಗಳ, ಎನ್‍ಐಒಎಸ್, ದೂರ ಶಿಕ್ಷಣ ಮೂಲಕ ನೀಡುವುದಕ್ಕಾಗಿ ಅಗತ್ಯ ಮೂಲಭೂತ ಸೌಕರ್ಯಗಳನ್ನು ಒದಗಿಸಲು ರಾಜ್ಯದಲ್ಲಿರುವ ನೋಂದಾಯಿತ ಮದರಸಾಗಳಿಗೆ ಔಪಚಾರಿಕ ಮತ್ತು ಗಣಕೀಕೃತ ಶಿಕ್ಷಣವನ್ನು ನೀಡಲು ಮದರಸಾ ಸಂಸ್ಥೆಗಳಿಂದ ಅರ್ಜಿ ಸಲ್ಲಿಸಲು (htt ps://dom.karnataka.gov.in) ಮೂಲಕ ಅರ್ಹ ನೋಂದಾಯಿತ ಮದರಸಾಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.
ಮದರಸಾ ಸಂಸ್ಥೆಗಳು ರಾಜ್ಯದಲ್ಲಿ ವಕ್ಫ್ ನೋಂದಾಯಿತ/ ಇತರೆ ಸಂಘ ಸಂಸ್ಥೆ ಕಾಯ್ದೆಯಡಿ ನೋಂದಾಯಿತ ಮದರಸಾ ಸಂಸ್ಥೆಯಾಗಿರಬೇಕು. ಮದರಸಾದಲ್ಲಿ 40 ಅರ್ಹ ವಿದ್ಯಾರ್ಥಿಗಳಿರಬೇಕು. ಮದರಸಾಗಳು ತರಗತಿ ಕೊಠಡಿಗಳೊಂದಿಗೆ ವಸತಿ ಸೌಲಭ್ಯವನ್ನು ಹೊಂದಿರಬೇಕು. ಅರ್ಜಿ ಸಲ್ಲಿಸಲು ಜನವರಿ, 31 ರವರೆಗೆ ಅವಕಾಶ ನೀಡಲಾಗಿದೆ. ಹೆಚ್ಚಿನ ಮಾಹಿತಿಗೆ ಕಚೇರಿ ದೂ.ಸಂ.08272-225528/ 220214 ನ್ನು ಸಂಪರ್ಕಿಸಬಹುದು ಎಂದು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಬಿ.ಎಂ.ದಿವಾಕರ ತಿಳಿಸಿದ್ದಾರೆ.