ಸುಂಟಿಕೊಪ್ಪ ಜ.24 : ಸಂತ ಅಂತೋಣಿ ಹಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿ ಲೋಹಿತ್ ಕುಮಾರ್ ಗೆ ರಾಜ್ಯಪಾಲರಿಂದ ಕಬ್ ಸೇವಾದಳ ವಿಭಾಗದಲ್ಲಿ ರಾಜ್ಯ ಪುರಸ್ಕಾರ ಪ್ರಶಸ್ತಿ ಲಭಿಸಿದೆ.
ಬೆಂಗಳೂರಿನಲ್ಲಿ ನಡೆದ ಕಬ್ ಸೇವಾದಳದ ವಿಭಾಗದ ಸಮಾರಂಭದಲ್ಲಿ ರಾಜ್ಯಪಾಲ ಥಾವರ್‍ಚಂದ್ ಗೆಹ್ಲೋಟ್ ಪ್ರಶಸ್ತಿ ಪ್ರಧಾನ ಮಾಡಿ ಗೌರವಿಸಿದರು.
ಪ್ರಶಸ್ತಿಗೆ ಭಾಜನರಾದ ವಿದ್ಯಾರ್ಥಿಗೆ ಮಾರ್ಗದರ್ಶಕರಾಗಿ ಕಬ್ ಮಾಸ್ಟರ್ ಈವಾ ಜೀತಾ ಬೆನ್ನಿಸ್ ಉತ್ತಮ ತರಬೇತಿಯನ್ನು ನೀಡಿದ್ದು, ಶಾಲಾ ಮುಖ್ಯ ಶಿಕ್ಷಕಿ ವೀರಾ ಡಿಸೋಜ ಹಾಗೂ ಆಡಳಿತ ಮಂಡಳಿಯವರು ಬಾಲಕನ ಸಾಧನೆಯನ್ನು ಅಭಿನಂದಿಸಿದರು.









