ಮಡಿಕೇರಿ ಜ.24 NEWS DESK : ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ 2023-24ನೇ ಸಾಲಿನ “ಗೌರಮ್ಮ ದತ್ತಿ ಪ್ರಶಸ್ತಿ” ಪುರಸ್ಕಾರಕ್ಕೆ ಜಿಲ್ಲೆಯ ಮಹಿಳಾ ಲೇಖಕಿಯರಿಂದ ಕನ್ನಡ ಭಾಷಾ ಕೃತಿಗಳನ್ನು ಆಹ್ವಾನಿಸಲಾಗಿದೆ.
ಈ ಮೊದಲು ಇತರ ಪ್ರಶಸ್ತಿ ಪಡೆದ ಕೃತಿಗಳನ್ನು ಕಳುಹಿಸಲು ಅವಕಾಶ ಇರುವುದಿಲ್ಲ. ತಮ್ಮ ಪ್ರಕಟಿತ ಒಂದು ಕೃತಿಯನ್ನು ಮೂರು ಪ್ರತಿಗಳಲ್ಲಿ, ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಕಚೇರಿ, ಎಸ್.ಜಿ.ಎಸ್.ಆರ್.ವೈ ಕಟ್ಟಡ, ಅಂಬೇಡ್ಕರ್ ಭವನದ ಬಳಿ, ಫೀ.ಮಾ.ಕಾರ್ಯಪ್ಪ ವೃತ್ತ, ಮಡಿಕೇರಿ-571201 ಇಲ್ಲಿಗೆ ಕಳುಹಿಸಿ ಕೊಡಬೇಕು.
ಕೃತಿಯನ್ನು ಕಳುಹಿಸಲು ಫೆ.5 ಕೊನೆಯ ದಿನವಾಗಿದ್ದು, ಹೆಚ್ಚಿನ ಮಾಹಿತಿಗೆ ಎಸ್.ಐ.ಮುನೀರ್ ಅಹಮ್ಮದ್-9886181613, ರೇವತಿ ರಮೇಶ್-9663254829 ಸಂಪರ್ಕಿಸಬಹುದಾಗಿದೆ.









