ಮಡಿಕೇರಿ ಜ.29 NEWS DESK : ಮರಗೋಡುವಿನ ಸರ್ಕಾರಿ ಹಿರಿಯ ಮಾದರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ನಡೆದ ಮೊದಲನೇ ವರ್ಷದ ಕೊಡಗು ಜಿಲ್ಲಾ ಹಿಂದೂ ಮಲಯಾಳಿ ಫುಟ್ಬಾಲ್ ಕಪ್ ಪಂದ್ಯಾವಳಿಯ ಸಮಾರೋಪ ಸಮಾರಂಭದಲ್ಲಿ ಕೊಡಗು ಜಿಲ್ಲೆಯ ಹಿಂದೂ ಮಲಯಾಳಿ ಸಮಾಜದ ಏಳು ಸಾಧಕರನ್ನು ಸನ್ಮಾನಿಸಿ ಗೌರವಿಸಲಾಯಿತು.
ನಿವೃತ್ತ ಯೋಧ ಹಾಗೂ ಫುಟ್ಬಾಲ್ ಆಟಗಾರ ಶ್ರೀನಿವಾಸ್(ಸತ್ಯ), ಕೊಡಗು ಜಿಲ್ಲಾ ಹಿಂದೂ ಮಲಯಾಳಿ ಸಮಾಜದ ಅಧ್ಯಕ್ಷ ಹಾಗೂ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ,ವಿ.ಎಮ್ ವಿಜಯನ್, ಮರಗೋಡು ಭಾರತಿ ಪದವಿಪೂರ್ವ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಹಾಗೂ ಉಪನ್ಯಾಸಕರಾಗಿದ್ದ ಶಾಜಿ ಪಿ.ಟಿ, ಉರಗ ತಜ್ಞ ಹಾಗೂ ಉರಗ ರಕ್ಷಕ ಗೋಣಿಕೊಪ್ಪಲಿನ ಎ.ಒನ್ ಟೂರ್ಸ್ ಅಂಡ್ ಟ್ರಾವೆಲ್ಸ್ ಮಾಲೀಕ ಶರತ್ ಕಾಂತ್ ಪಿ.ಎಸ್,ಟಿಂಬರ್ ಮರ್ಚೆಂಟ್ ಹಾಗೂ ಅಮ್ಮತ್ತಿ ಮಿಲನ್ಸ್ ಫುಟ್ಬಾಲ್ ಕ್ಲಬ್ ಅಧ್ಯಕ್ಷ ಎಂ.ಎಂ.ಲಿಜೇಶ್, ರಾಷ್ಟ್ರದ ಮಟ್ಟದ ಫುಟ್ಬಾಲ್ ಆಟಗಾರ ಅಮ್ಮತ್ತಿಯ ವಿಜೇಶ್ ಎಂ.ಎಂ(ವಿಜು) ಹಾಗೂ ರಾಷ್ಟ್ರೀಯ ಮಟ್ಟದ ಅಥ್ಲೀಟ್ ಮರಗೋಡುವಿನ ಎಂ.ಸಿ.ಮಿಲನ್ ಅವರನ್ನು ಅತಿಥಿಗಳು ಸನ್ಮಾನಿಸಿ ಗೌರವಿಸಿದರು.
ಈ ಸಂದರ್ಭ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಕೆ.ಜಿ ಬೋಪಯ್ಯ, ಕೊಡಗು ಜಿಲ್ಲಾ ಹಿಂದೂ ಮಲಯಾಳಿ ಫುಟ್ಬಾಲ್ ಅಸೋಸಿಯೇಷನ್ ಅಧ್ಯಕ್ಷ ಹಾಗೂ ಸಂಸ್ಥಾಪಕ ದರ್ಶನ್ ಸುಕುಮಾರ್ ಮರಗೋಡು, ಕೊಡಗು ಜಿಲ್ಲಾ ಹಿಂದೂ ಮಲಯಾಳಿ ಸಮಾಜದ ಪ್ರಧಾನ ಕಾರ್ಯದರ್ಶಿ ಪಿ.ಕೆ ಶಶಿಕುಮಾರ್ ಕಂಡಕರೆ, ಮಡಿಕೇರಿ ತಾಲ್ಲೂಕು ಮಲಯಾಳಿ ಸಮಾಜದ ಅಧ್ಯಕ್ಷ ಹಾಗೂ ಮಡಿಕೇರಿ ನಗರಸಭೆ ಅಧ್ಯಕ್ಷ ಕೆ.ಎಸ್ ರಮೇಶ್, ಕೊಡಗು ಹಿಂದೂ ಮಲಯಾಳಿ ಸಮಾಜದ ಟಿ.ಆರ್ ವಾಸುದೇವ್ ಕಡಗದಾಳು, ಎಸ್.ಎನ್.ಡಿ.ಪಿ ಅಧ್ಯಕ್ಷ ವಿ.ಕೆ ಲೋಕೇಶ್, ಸಿದ್ದಾಪುರ ಹಿಂದೂ ಮಲಯಾಳಿ ಸಮಾಜದ ಅಧ್ಯಕ್ಷ ಕೆ.ಕೆ ಶ್ರೀನಿವಾಸ್,ಕೊಡಗು ಜಿಲ್ಲಾ ಫುಟ್ಬಾಲ್ ಅಸೋಸಿಯೇಷನ್ ಅಧ್ಯಕ್ಷ ಪಾಣತ್ತಲೆ ಜಗದೀಶ್ ಮಂದಪ್ಪ ಮರಗೋಡು, ಮೂರ್ನಾಡು ಮಲಯಾಳಿ ಸಮಾಜದ ಅಧ್ಯಕ್ಷ ಕೆ.ಬಾಬು, ಕೆ.ಕೆ ಕನ್ಸ್ಟ್ರಕ್ಷನ್ ಮಾಲೀಕ ಟಿ.ಕೆ ಶಿಜು ಒಂಟಿಯಂಗಡಿ, ಜಿಲ್ಲಾ ಹಿಂದೂ ಮಲಯಾಳಿ ಸಮಾಜದ ಉಪಾಧ್ಯಕ್ಷ ಟಿ.ಕೆ ಸುಧೀರ್,ಮರಗೋಡು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಕಾಂಗೀರ ಸತೀಶ್ (ಅಶ್ವಿ), ಕುಶಾಲನಗರ ಹಿಂದೂ ಮಲಯಯ ಸಮಾಜದ ರವೀಂದ್ರ, ಶ್ರೀ ಮುತ್ತಪ್ಪನ್ ಮಲಯಾಳಿ ಸಮಾಜ ವಿರಾಜಪೇಟೆ ಇದರ ಅಧ್ಯಕ್ಷರಾದ ಪಿ.ಜೆ ಸುಮೇಶ್,ಮಡಿಕೇರಿ ಕೃಷ್ಣ ಪ್ರಿಂಟರ್ಸ್ ಮಾಲೀಕರಾದ ಉನ್ನಿಕೃಷ್ಣ ಎನ್.ವಿ ಹಾಗೂ ಇನ್ನಿತರರು ಹಾಜರಿದ್ದರು.