ಮಡಿಕೇರಿ ಜ.29 : ಧಾರ್ಮಿಕವಾಗಿ ಪೂಜನೀಯ ಸ್ಥಾನ ಪಡೆದುಕೊಂಡಿರುವ ‘ಅಶ್ವತ್ಥ ವೃಕ್ಷ’ವೊಂದಕ್ಕೆ ಕಂಕಣಭಾಗ್ಯ ಕೂಡಿ ಬಂದಿದೆ. ಮಡಿಕೇರಿ ತಾಲ್ಲೂಕಿನ ಕಡಗದಾಳು ಗ್ರಾಮದಲ್ಲಿ ಬೆಳೆದು ನಿಂತಿರುವ ಅಶ್ವತ್ಥ ವೃಕ್ಷಕ್ಕೆ ವಿವಾಹವೆಂದರೆ, ವಧು ಯಾರೆನ್ನುವ ಪ್ರಶ್ನೆ ಸಾಮಾನ್ಯ. ಇಲ್ಲಿ ಅಶ್ವತ್ಥ ಮರದೊಂದಿಗೆ ವಿವಾಹವಾಗಲಿರುವ ವಧು ‘ನೆಲ್ಲಿ’!. ವಿವಾಹ ‘ಶೋಭ ಕೃತ್ ನಾಮ ಸಂವತ್ಸರದ ಮಕರ ಮಾಸ 21 ಕ್ಕೆ ಸಲ್ಲುವ ಫೆ.4 ರ ಪೂರ್ವಾಹ್ನ 9.50ರ ಮೀನ ಲಗ್ನ’ದ ಶುಭ ಮುಹೂರ್ತದಲ್ಲಿ ನೆರವೇರಲಿದೆ.
ಗ್ರಾಮದ ಶ್ರೀ ಬೊಟ್ಲಪ್ಪ ಯುವ ಸಂಘ ವಿವಾಹದ ಪೂರ್ಣ ಜವಾಬ್ದಾರಿ ವಹಿಸಿಕೊಂಡಿದ್ದು, ವಿವಾಹ ಸಮಾರಂಭವನ್ನು ಅತ್ಯಂತ ಶ್ರದ್ಧೆಯಿಂದ ಅದ್ಧೂರಿಯಾಗಿ ಮಾಡಲು ರೂಪುರೇಷೆಗಳನ್ನು ಮಾಡಿಕೊಂಡಿದೆ. ಕಾರ್ಯಕ್ರಮದ ವಿಶೇಷ ಕರಪತ್ರವನ್ನು ಮುದ್ರಿಸಿದೆ. ಸೂಚಿತ ದಿನದಂದು ಹಿಂದು ಧಾರ್ಮಿಕ ವಿಧಿ ವಿಧಾನದಂತೆ ಸಾಂಗೋಪಸಾಂಗವಾಗಿ ವಿವಾಹ ನಡೆಯಲಿದ್ದು, ಇದರೊಂದಿಗೆ ಗಣಪತಿ ಹೋಮ, ನವಗ್ರಹ ಹೋಮ, ಅರ್ಚನೆ, ಪ್ರದಕ್ಷಿಣೆ ನಮಸ್ಕಾರ ಕಾರ್ಯಕ್ರಮಗಳನ್ನು ಆಯೋಜಿಸಿದೆ.
ವಿಶೇಷ ಕಾರ್ಯಕ್ರಮದ ಕುರಿತು ಮಾಹಿತಿ ನೀಡಿದ ಶ್ರೀ ಬೊಟ್ಲಪ್ಪ ಯುವ ಸಂಘದ ಖಜಾಂಚಿ ಅವಿನಾಶ್, 2003 ರಲ್ಲಿ ಕಡಗದಾಳಿನ ಶ್ರೀ ಬೊಟ್ಲಪ್ಪ ಯುವ ಸಂಘದ ಆವರಣದಲ್ಲಿ ದಿ. ರಂಗನಾಥರವರ ಮಾರ್ಗದರ್ಶನದಂತೆ ಅಶ್ವತ್ಥ ಗಿಡವನ್ನು ನೆಡಲಾಗಿತ್ತು. ಗಿಡ ಮರವಾಗಿ ಬೆಳೆಯುವ ಹಂತದಲ್ಲಿ 2012 ರಲ್ಲಿ ಈ ವೃಕ್ಷಕ್ಕೆ ‘ಉಪನಯನ’ವನ್ನು ಕ್ರಮ ಬದ್ಧವಾಗಿ ನೆರವೇರಿಸಲಾಗಿದೆ. ಈ ಹಂತದಲ್ಲಿ ಪುಣ್ಯ ಕಾರ್ಯ ನೆರವೇರಿಸಿದ ಅರ್ಚಕ ವೃಂದ ವೃಕ್ಷಕ್ಕೆ 21 ವರ್ಷವಾಗುವ ಹಂತದಲ್ಲಿ ವಿವಾಹ ಕಾರ್ಯ ನೆರವೇರಿಸಬೇಕು. ಅದಕ್ಕಾಗಿ ಸಿದ್ಧರಾಗಿರಬೇಕೆಂದು ಸಲಹೆ ನೀಡಿದ್ದರು. ಅದರಂತೆ ಇದೀಗ ಅಶ್ವತ್ಥ ವೃಕ್ಷಕ್ಕೆ ವಿವಾಹ ಕಾರ್ಯ ನಡೆಸಲು ಮುಂದಾಗಿರುವುದಾಗಿ ತಿಳಿಸಿದರು.
ನಾಡಿನ ಜನತೆಯ ಸುಭಿಕ್ಷೆಗೋಸ್ಕರವಾಗಿಯೂ ಅಶ್ವತ್ಥ ವೃಕ್ಷಕ್ಕೆ ನೆಲ್ಲಿ ಗಿಡದೊಂದಿಗೆ ವಿವಾಹವನ್ನು ಕಾಸರಗೋಡು ಅರ್ಚಕ ವೃಂದದ ಸಾರಥ್ಯದಲ್ಲಿ ನಿಗದಿ ಪಡಿಸಲಾಗಿದೆಯೆಂದು ಮಾಹಿತಿ ನೀಡಿದ್ದಾರೆ.
ಅಶ್ವತ್ಥ ವೃಕ್ಷದ ವಿವಾಹ ಕಾರ್ಯಕ್ರಮದ ಮಾಹಿತಿ ನೀಡುವ ಸಂದರ್ಭ ಶ್ರೀ ಬೊಟ್ಲಪ್ಪ ಯುವ ಸಂಘದ ಕಾರ್ಯದರ್ಶಿ ಶಿವಕಾಂತ್,ಉಪಾಧ್ಯಕ್ಷ ಎಂ.ಎನ್. ಹರೀಶ್ ಕುಮಾರ್, ಮಹಿಳಾ ವಿಭಾಗದ ಉಪಾಧ್ಯಕ್ಷರಾದ ದೀಪಾ ಉದಯ ಕುಮಾರ್, ಸಂಘದ ಮಾಜಿ ಅಧ್ಯಕ್ಷ ಪಿ.ಎಂ.ಸುರೇಶ್ ಹಾಗೂ ಸದಸ್ಯರಾದ ಡಿ.ಬಿ.ರಾಜ್ ಕುಮಾರ್ ಉಪಸ್ಥಿತರಿದ್ದರು.
Breaking News
- *ಕೊಡಗು : ಡಿ.1 ರಿಂದ ಬೆಂಬಲ ಬೆಲೆ ಯೋಜನೆಯಡಿ ಭತ್ತ ಖರೀದಿ ಪ್ರಕ್ರಿಯೆ ಆರಂಭ : ಜಿಲ್ಲಾಧಿಕಾರಿ ವೆಂಕಟ್ ರಾಜಾ*
- *ಪಡಿತರ ಚೀಟಿ ಪರಿಷ್ಕರಣೆ : ಅರ್ಹ ಬಿಪಿಎಲ್ ಕಾರ್ಡ್ ರದ್ದುಗೊಳಿಸುವುದಿಲ್ಲ : ಸಚಿವ ಮುನಿಯಪ್ಪ*
- *ಕೊಡಗು ಬ್ಲಡ್ ಡೋನಸ್೯ ಸಂಸ್ಥೆಯ 7ನೇ ವಾಷಿ೯ಕೋತ್ಸವ : ಜೀವ ಉಳಿಸುವ ರಕ್ತದಾನಿಗಳೇ ನಿಜವಾದ ಹೀರೋಗಳು : ಅನಿಲ್ ಹೆಚ್.ಟಿ.*
- *ದಿವ್ಯಜ್ಯೋತಿ ಪತ್ತಿನ ಸಹಕಾರ ಸಂಘದ ಚುನಾವಣೆ : ಜಾನ್ಸನ್ ಪಿಂಟೋ ಸೇರಿ ಹಲವರು ಕಣದಲ್ಲಿ*
- *ಕಲ್ಲು ಬಾಯ್ಸ್ ಲೈಕ್ಸ್ ಫ್ಯಾಶನ್ ಫುಟ್ಬಾಲ್ ಕಪ್ : ನಿಯೋನ್ ಎಫ್.ಸಿ ಅಮ್ಮತ್ತಿ ಚಾಂಪಿಯನ್*
- *ಗ್ರಾ.ಪಂ ಉಪಚುನಾವಣೆ : ಕೊಡಗಿನ ವಿವಿಧೆಡೆ ಮದ್ಯ ಮಾರಾಟ ನಿಷೇಧ*
- *ನಂದಿನಿ ವಿವಿಧ ಶ್ರೇಣಿಯ ಹಾಲು ಬಿಡುಗಡೆ : ದೇಶದ ಹಾಲು ಉತ್ಪಾದನೆಯಲ್ಲಿ ಕರ್ನಾಟಕ ಎರಡನೇ ಸ್ಥಾನದಲ್ಲಿದೆ : ಮುಖ್ಯಮಂತ್ರಿ ಸಿದ್ದರಾಮಯ್ಯ*
- *ಕಟ್ಟೆಹಾಡಿ ಅರಣ್ಯ ಹಕ್ಕು ಸಮಿತಿ ರಚನೆ : ಆದಿವಾಸಿಗಳನ್ನು ಒಕ್ಕಲೆಬ್ಬಿಸದಂತೆ ಆಗ್ರಹ*
- *ನ.29 ರಂದು ವಾಲ್ನೂರು-ತ್ಯಾಗತ್ತೂರು ಗ್ರಾಮ ಸಭೆ*
- *ಕೊಡಗು : ಗ್ರಾ.ಪಂ.ಉಪಚುನಾವಣೆ : ವಿವಿಧ ಸಂತೆ, ಜಾತ್ರೆಗಳ ನಿಷೇಧ*