ಮಡಿಕೇರಿ ಜ.29 NEWS DESK : ಕೊಡಗು ಜಿಲ್ಲಾ ಕಿವುಡರ ಸಂಘದ ಆಡಳಿತ ಮಂಡಳಿಯ ಸಭೆಯು ಸಂಘದ ಅಧ್ಯಕ್ಷೆ ಗೌರಮ್ಮ ಸೋಮಣ್ಣ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ವಿರಾಜಪೇಟೆಯ ಪುರಭವನದ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಸಂಘದ ಕಾರ್ಯ ಚಟುವಟಿಕೆಗಳನ್ನು ನಡೆಸುವ ಮೂಲಕ ಎಲ್ಲರಿಗೂ ಸರ್ಕಾರದ ಸೌಲಭ್ಯಗಳನ್ನು ಒದಗಿಸುವ ಬಗ್ಗೆ ಚರ್ಚಿಸಲಾಯಿತು.
ಗ್ರಾಮ ಪುನರ್ವಸತಿ ಕಾರ್ಯಕರ್ತೆ ಮತ್ತು ಸೌಭಾಗ್ಯ ವಿಕಲಚೇತನ ಸೇವಾ ಟ್ರಸ್ಟ್‍ನ ವಿಆರ್‍ಡಬ್ಲ್ಯು ಆಯಿಷಾ, ಕರ್ನಾಟಕ ರಾಜ್ಯ ಕಿವುಡರ ಕಲ್ಯಾಣ ಸಂಘದ ಉಪಾಧ್ಯಕ್ಷ ಎ.ಗಣೇಶ್ ರಾವ್, ಮೈಸೂರು ಕಿವುಡರ ಕಲ್ಯಾಣ ಸಂಘದ ಅಧ್ಯಕ್ಷ ಮೂರ್ತಿ, ಕರ್ನಾಟಕ ಕಿವುಡರ ಕ್ರೀಡಾ ಒಕ್ಕೂಟದ ಜೆ.ವಿ.ಮಹೇಶ್ ವರ್ಮ, ಕೆಡಿಡಿಎ ಚೆರ್‍ಮೆನ್ ಜೋಸೆಫ್ ಸ್ಯಾಮ್, ಉಪಾಧ್ಯಕ್ಷ ಶಂಕರ ನಾರಾಯಣ, ಪ್ರಧಾನ ಕಾರ್ಯದರ್ಶಿ ರಂಜಿತ್, ಸಹ ಕಾರ್ಯದರ್ಶಿ ನಾಗೇಶ್, ಖಜಾಂಚಿ ಕೆ.ಎ.ಸುರೇಶ್, ಕ್ರೀಡಾ ಕಾರ್ಯದರ್ಶಿ ಎಂ.ಎ.ರಂಶದ್, ಸದಸ್ಯರಾದ ಬಿ.ಎ.ಚಾಯಾದೇವಿ, ಹೆಚ್.ಪಿ.ಪ್ರಭಾಕರ್, ಟಿ.ಎಸ್.ಸುನೀಲ್, ಹೆಚ್.ವಿ.ವೆಂಕಟೇಶ್, ಅಮಿನ್ ಪಾಷ, ಅಸ್ಲಂ, ತೇಜವರ್ಮ ಸೇರಿದಂತೆ ಇತರರು ಹಾಜರಿದ್ದರು.
ಸಭೆಯಲ್ಲಿ ಸಂಘದ ಅಧ್ಯಕ್ಷೆ ಗೌರಮ್ಮ ಸೋಮಣ್ಣ ಅವರನ್ನು ಗಣ್ಯರು ಸನ್ಮಾನಿಸಿ ಗೌರವಿಸಿದರು.