ವಿರಾಜಪೇಟೆ ಜ.30 NEWS DESK : ಕುಶಾಲನಗರದ ರೈತ ಸಹಕಾರ ಭವನದಲ್ಲಿ ನಡೆದ ರಾಜ್ಯ ಮಟ್ಟದ ಅಬಾಕಸ್ ಸ್ಪರ್ಧೆಯಲ್ಲಿ ವಿರಾಜಪೇಟೆಯ ರೋಟರಿ ಶಾಲೆಯ 5ನೇ ತರಗತಿ ವಿದ್ಯಾರ್ಥಿ ಎನ್.ಸಿ.ಚಿರಂತ್ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ.
ಈ ಹಿಂದೆ ಹಲವಾರು ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನವನ್ನು ಪಡೆದುಕೊಂಡಿರುವ ಎನ್.ಸಿ.ಚಿರಂತ್, ಗಾಂಧಿನಗರದ ನಿವಾಸಿ ಎನ್.ಜೆ. ಚಂದ್ರಶೇಖರ್ ಹಾಗೂ ಎನ್.ಎಂ. ಹೇಮಾವತಿ ದಂಪತಿಯ ಪುತ್ರ.









