ಮಡಿಕೇರಿ ಜ.30 NEWS DESK : ವಿರಾಜಪೇಟೆ ಬಳಿಯ ಬೋಟೋಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗುಂಡಿಗೆರೆ-ಕೆದಮುಳ್ಳೂರು ಸಂಪರ್ಕ ರಸ್ತೆ ಪ.ಜಾತಿ-ಪಂಗಡದ 2.5 ಲಕ್ಷ ಅನುದಾನದಲ್ಲಿ ಅಭಿವೃದ್ಧಿಗೊಂಡಿದ್ದು, ನೂತನ ಕಾಂಕ್ರಿಟ್ ರಸ್ತೆಯನ್ನು ಗ್ರಾ.ಪಂ ಅದ್ಯಕ್ಷ ಎ.ಎಂ.ಬೋಪಣ್ಣ ಉದ್ಘಾಟಿಸಿದರು.
ನಂತರ ಮಾತನಾಡಿದ ಬೋಪಣ್ಣ ಅವರು, ಗ್ರಾಮೀಣ ಭಾಗದ ರಸ್ತೆಗಳ ಅಭಿವೃದ್ಧಿ ಆಗಬೇಕು. ಮುಂದಿನ ಅನುದಾನದಲ್ಲಿ ಇನ್ನು ಉಳಿದಿರುವ ರಸ್ತೆಗಳನ್ನು ಹಂತ ಹಂತವಾಗಿ ಅಭಿವೃದ್ಧಿ ಕಾಮಗಾರಿ ನಡೆಸುವುದಾಗಿ ತಿಳಿಸಿದರಲ್ಲದೆ ಗ್ರಾಮದ ಜನರಿಗೆ ಕುಡಿಯುವ ನೀರಿನ ಸೌಲಭ್ಯಯನ್ನು ನೀಡಲಾಗುವುದು ಎಂದರು.
ಕಾಂಕ್ರಿಟ್ ರಸ್ತೆ ಉದ್ಘಾಟನೆ ಸಂದರ್ಭ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಬಿ.ಮಣಿ, ಪಂಚಾಯಿತಿ ಸದಸ್ಯರಾದ ಎಂ.ಎಂ.ರಜಾಕ್, ವಸಂತಕಟ್ಟಿ, ಲತಾ ಹಾಗೂ ಗ್ರಾಮಸ್ಥರು ಹಾಜರಿದ್ದರು.









