ಮಡಿಕೇರಿ ಜ.30 NEWS DESK : ಪೊನ್ನಂಪೇಟೆ ಗ್ರಾ.ಪಂ ನೂತನ ಅಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತ ಅಣ್ಣೀರ ಹರೀಶ್ ಹಾಗೂ ಉಪಾಧ್ಯಕ್ಷರಾಗಿ ಆಲೀರ ರಶೀದ್ ಆಯ್ಕೆಯಾಗಿದ್ದಾರೆ.
ಒಟ್ಟು 20 ಸದಸ್ಯ ಬಲದ ಗ್ರಾ.ಪಂ ಯಲ್ಲಿ 11 ಬಿಜೆಪಿ ಬೆಂಬಲಿತ, 8 ಕಾಂಗ್ರೆಸ್ ಬೆಂಬಲಿತ ಮತ್ತು ಒಬ್ಬರು ಸ್ವತಂತ್ರ ಸದಸ್ಯರಿದ್ದಾರೆ. ಇಂದು ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ಪ್ರಕ್ರಿಯೆ ನಡೆದಾಗ ಬಿಜೆಪಿ ಬೆಂಬಲಿತ 3 ರಿಂದ 4 ಸದಸ್ಯರು ಅಡ್ಡ ಮತದಾನ ಮಾಡಿದ ಪರಿಣಾಮ ಕಾಂಗ್ರೆಸ್ ಬೆಂಬಲಿತರಿಗೆ ಜಯವಾಗಿದೆ.
ಅಣ್ಣೀರ ಹರೀಶ್ 12 ಮತಗಳನ್ನು ಗಳಿಸಿದರೆ, ಒಂದು ಮತ ತಿರಸ್ಕೃತವಾದ ಕಾರಣ ಆಲೀರ ರಶೀದ್ 11 ಮತಗಳನ್ನು ಪಡೆದರು. ಈ ರಾಜಕೀಯ ಬೆಳವಣಿಗೆ ಬಿಜೆಪಿ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.









