ಸುಂಟಿಕೊಪ್ಪ ಜ.30 NEWS DESK : ಬೋಯಿಕೇರಿ ಗ್ರಾಮದ ಶ್ರೀ ಸಿದ್ಧಿ-ಬುದ್ಧಿ ವಿನಾಯಕ ದೇವಾಲಯದ 8ನೇ ವರ್ಷದ ವಾರ್ಷಿಕ ಪ್ರತಿಷ್ಠಾಪನಾ ಮಹೋತ್ಸವದ ಅಂಗವಾಗಿ ದೇವಾಲಯದಲ್ಲಿ ವಿಶೇಷ ಪೂಜಾ ಕೈಂಕರ್ಯಗಳು ನಡೆಯಿತು.
ದೇವಾಲಯದಲ್ಲಿ ಮುಂಜಾನೆಯಿಂದಲೇ ಸ್ಥಳ ಶುದ್ಧಿ, ಪುತ್ಸಾಹ ವಾಚನ, ನವ ಕಲಶ, 108 ತೆಂಗಿನ ಕಾಯಿ, ಗಣಪತಿ ಹೋಮ ಹಾಗೂ ಮಹಾಪೂಜೆಯ ನಂತರ ಮಹಾ ಮಂಗಳಾರತಿ ನೇರವೇರಿತು. ನಂತರ ಭಕ್ತಾಧಿಗಳಿಗೆ ಪ್ರಸಾದ ವಿನಿಯೋಗ ಹಾಗೂ ಅನ್ನದಾನ ನೆರವೇರಿತು.









