ಮಡಿಕೇರಿ ಜ.31 NEWS DESK : ಕೇಂದ್ರದ ಬಿಜೆಪಿ ನೇತೃತ್ವದ ಸರ್ಕಾರ ಈ ಹಿಂದಿನ ಚುನಾವಣೆಯಲ್ಲಿ ಪ್ರಣಾಳಿಕೆಯಲ್ಲಿ ನೀಡಿದ್ದ ಎಲ್ಲಾ ಭರವಸೆಗಳನ್ನು ಕಾರ್ಯರೂಪಕ್ಕೆ ತರುವಲ್ಲಿ ಯಶಸ್ವಿಯಾಗಿದೆ. ಅಭಿವೃದ್ಧಿ ಕಾರ್ಯಗಳ ಕುರಿತು ಬಹಿರಂಗ ಚರ್ಚೆ ನಡೆಸಲು ಕಾಂಗ್ರೆಸ್ಸಿಗರು ಸಮಯ ಮತ್ತು ಸ್ಥಳವನ್ನು ನಿಗಧಿ ಮಾಡಿದರೆ ನಾವು ಬರಲು ಸಿದ್ಧರಿದ್ದೇವೆ ಎಂದು ಜಿಲ್ಲಾ ಬಿಜೆಪಿ ಅಧ್ಯಕ್ಷ ನಾಪಂಡ ರವಿ ಕಾಳಪ್ಪ ತಿರುಗೇಟು ನೀಡಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರು ಸಂಸದರನ್ನು ಟೀಕಿಸಿರುವುದು ಖಂಡನೀಯ, ಜನರ ಮುಂದೆ ವಾಸ್ತವಾಂಶವನ್ನು ಹೇಳಬೇಕಾಗಿದೆ. 2018ರಲ್ಲಿ ಜಿಲ್ಲೆಗೆ ರೈಲ್ವೆ ಯೋಜನೆ ತರುವುದಾಗಿ ಹೇಳಿದ್ದು ನಿಜ, ಯಾವುದೇ ರೈಲ್ವೆ ಯೋಜನೆಗೆ ಭೂ ಸ್ವಾಧೀನವನ್ನು ಹಾಗೂ ಶೇ.50 ಅನುದಾನ ರಾಜ್ಯ ಸರ್ಕಾರ ಮಾಡಿ ಕೊಡಬೇಕು 2013 ರಿಂದ 18ರವರೆಗೆ ಇದ್ದ ಸಿದ್ದರಾಮಯ್ಯನವರು ಉಚಿತವಾಗಿ ಭೂ ಸ್ವಾದೀನ ಹಾಗೂ ಶೇ.50 ಅನುದಾನ ನೀಡಲು ಸಾಧ್ಯವಿಲ್ಲ ಎಂಬುದಾಗಿ ತಿಳಿಸಿದರು. ಆದರೂ 2018ರಲ್ಲಿ ಲೈನ್ ಎಸ್ಟಿಮೇಟ್ ಮಾಡಿದ್ದು 1954 ಕೋಟಿ ಯೋಜನೆ ಆಗಿತ್ತು ಆಗ ಪಿಯೂಷ್ ಗೋಯಲ್ ಅವರು ಮಂಡಿಸಿದ ರೈಲ್ವೆ ಬಜೆಟಿನಲ್ಲಿ ಘೋಷಣೆ ಆಗಿ (ಪಿಂಕ್ ಬುಕ್)ನಲ್ಲಿ ನಮೂದಾಗಿದೆ ಮತ್ತೆ ಈಗ ಡಿ.ಪಿ.ಆರ್. ಮಾಡಿಸಲಾಗಿದ್ದು, 3092 ಕೋಟಿಗಳಿಗೆ ಸಬ್ಮಿಟ್ ಮಾಡಲಾಗಿದೆ ಎಂದು ಸ್ಪಷ್ಟಪಡಿಸಿದರು.
ವಿರಾಜಪೇಟೆ ನಗರದ ಕುಡಿಯುವ ನೀರಿನ ಅಮೃತ್ ಯೋಜನೆಗೆ 58 ಕೋಟಿ ರೂ. ಅನುಮೋದನೆಯಗಿದ್ದು, ಈ ಯೋಜನೆಯು 2023ರ ಫೆಬ್ರವರಿ ತಿಂಗಳಿನಲ್ಲಿ ಆಗಿನ ಶಾಸಕ ಕೆ.ಜಿ.ಬೋಪಯ್ಯ ಅವರ ಪ್ರಯತ್ನದ ಫಲವಾಗಿ ಜಾರಿಗೆ ಬಂದಿದೆ. ಇದನ್ನು ಈಗಿನ ಶಾಸಕರು ನಾನು ತಂದಿರುವುದು ಎಂದು ಹೇಳಿಕೊಂಡಿರುವುದು ಹಾಸ್ಯಾಸ್ಪದ ಎಂದು ಟೀಕಿಸಿದರು.
ಜಿಲ್ಲೆಯಲ್ಲಿ ಆಗಿರುವ ಪ್ರಧಾನಮಂತ್ರಿ ಗ್ರಾಮೀಣ ಸಡಕ್ ರಸ್ತೆಗಳು, ಅನೇಕ ಹೆದ್ದಾರಿಗಳ ಅಭಿವೃದ್ಧಿ, ಚತುಷ್ಪಥ ರಸ್ತೆ ನಿರ್ಮಾಣ ಆರಂಭವಾಗಿರುವುದು ಸಂಸದ ಪ್ರತಾಪ್ ಸಿಂಹ ಅವರ ಕಾಲದಲ್ಲಿ. ಯಾವುದೇ ಯೋಜನೆಗಳ ಬಗ್ಗೆ ಚರ್ಚೆಗೆ ನಮ್ಮ ಸಂಸದರು, ಮಾಜಿ ಶಾಸಕರುಗಳು ತಯಾರಿದ್ದು, ನಿಮ್ಮ ಶಾಸಕರುಗಳನ್ನು ಕರೆದು ವೇದಿಕೆ ಸಿದ್ಧಪಡಿಸಿ, ಚರ್ಚೆ ಮಾಡೋಣ ಎಂದು ರವಿ ಕಾಳಪ್ಪ ತಿಳಿಸಿದರು.
ಜಿಲ್ಲೆಯಲ್ಲಿ ಅನೇಕ ಯೋಜನೆಗಳು ನಮ್ಮ ಹಿಂದಿನ ಶಾಸಕರ ಸಂದರ್ಭದಲ್ಲಿ ಆಗಿದ್ದು, ಅದರ ಉದ್ಘಾಟನೆಯನ್ನು ಈಗಿನವರು ಮಾಡುತ್ತಿದ್ದಾರೆ. ಹಿಂದಿನ ಸರ್ಕಾರದ ಕಾಮಗಾರಿಗಳನ್ನು ನಮ್ಮದು ಎಂದು ಹೇಳಿಕೊಳ್ಳುತ್ತಿರುವುದು ಖಂಡನೀಯ ಎಂದರು.
ಉಚಿತ ಭಾಗ್ಯ ಯೋಜನೆಗಳ ಪೂರೈಕೆಗಾಗಿ ಅಗತ್ಯ ವಸ್ತುಗಳ ಬೆಲೆಯನ್ನು ಏರಿಕೆ ಮಾಡಲಾಗಿದೆ. ಹತ್ತು ಕೆಜಿ ಅಕ್ಕಿಯನ್ನು ತಾನೇ ಕೊಡುವುದಾಗಿ ಹೇಳಿ ಕೇಂದ್ರದ ಮೇಲೆ ಅವಲಂಭಿತವಾಗಿದೆ. ತಾನು ಘೋಷಿಸಿದ 10 ಕೆಜಿ ಯನ್ನು ಮೊದಲು ಕಾಂಗ್ರೆಸ್ ಸರ್ಕಾರ ನೀಡಲಿ ಎಂದು ರವಿ ಕಾಳಪ್ಪ ಒತ್ತಾಯಿಸಿದರು.
ಉಚಿತ ಬಸ್ ಸೇವೆ ಆರಂಭವಾದಲ್ಲಿಂದ ಅನೇಕ ಬಸ್ ಗಳ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ. ಇದರಿಂದ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಹಾಗೂ ಗ್ರಾಮಸ್ಥರಿಗೆ ತೊಂದರೆಯಾಗಿದೆ ಎಂದು ಟೀಕಿಸಿದರು.
ಉಚಿತ ವಿದ್ಯುತ್ 200ಯೂನಿಟ್ ನೀಡುವುದಾಗಿ ಭರವಸೆ ನೀಡಿ ಅವು ಯಾರಿಗೂ ತಲುಪುತ್ತಿಲ್ಲ. ಬಿಲ್ ಪಾವತಿ ಮಾಡುವವರಿಗೆ ಈ ಹಿಂದಿಗಿಂತ 3 ಪಟ್ಟು ಶುಲ್ಕ ಹೆಚ್ಚಿಸಲಾಗಿದೆ. ಯುವ ನಿಧಿ ಯೋಜನೆ ಎಲ್ಲಿ ಹೋಯಿತು ಎಷ್ಟು ನಿರುದ್ಯೋಗಿಗಳಿಗೆ ನೀವು ಹಣವನ್ನು ನೀಡಿದ್ದೀರಿ ಎಂದು ಪ್ರಶ್ನಿಸಿದ ಅವರು, ಈ ಹಿಂದಿನ ಬಿಜೆಪಿ ಸರ್ಕಾರದ ರೈತಪರ ಮತ್ತು ವಿದ್ಯಾರ್ಥಿಗಳ ಪರವಾಗಿದ್ದ ಯೋಜನೆಗಳನ್ನು ಸ್ಥಗಿತಗೊಳಿಸಿರುವುದು ಯಾಕೆ ಎಂದು ಪ್ರಶ್ನಿಸಿದರು.
ಭಾರತವು ವಿಶ್ವದ 5ನೇ ಅಭಿವೃದ್ಧಿ ಹೊಂದಿರುವ ದೇಶವಾಗಿದ್ದು, ಇತರ ಎಲ್ಲಾ ದೇಶಗಳಿಗೆ ಹೋಲಿಸಿದರೆ ಅತ್ಯಂತ ವೇಗವಾಗಿ ಅಭಿವೃದ್ಧಿಯತ್ತ ಸಾಗುತ್ತಿದೆ. ಕೇಂದ್ರ ಸಚಿವರ ಮೇಲೆ ಯಾವುದೇ ಭ್ರಷ್ಟಾಚಾರದ ಆರೋಪವು ಇಲ್ಲ. ದೇಶದ ಎಲ್ಲಾ ಭಾಗಗಳಿಗೂ ಸಂವಿಧಾನದಲ್ಲಿ ಸಮಾನತೆ ಎಂಬಂತೆ ಕಾಶ್ಮೀರಕ್ಕೆ ಮಾತ್ರ ನೀಡಿದ್ದ ವಿಶೆಷ ಆರ್ಟಿಕಲ್ 370ನ್ನು ರದ್ದು ಪಡಿಸಿ ಅಲ್ಲಿ ನಡೆಯುತ್ತಿದ್ದ ಭಯೋತ್ಪಾನೆಯನ್ನು ಮಟ್ಟ ಹಾಕಿರುವುದು ಬಿ.ಜೆ.ಪಿ ಸರ್ಕಾರದ ಸಾಧನೆಯಾಗಿದೆ. ದೇಶದಲ್ಲಿ ಕೋಮು ಸಂಘರ್ಷ ಕಡಿಮೆಯಾಗಿ ಎಲ್ಲರೂ ಸೌಹಾರ್ದತೆಯಿಂದ ಜೀವನ ಸಾಗಿಸುತ್ತಿದ್ದಾರೆ, ಆಂತರಿಕ ಭಯೋತ್ಪಾದನೆಗೂ ಕಡಿವಾಣ ಹಾಕಲಾಗಿದೆ ಎಂದರು.
ನಮ್ಮ ದೇಶದ ಸಂಸ್ಕೃತಿಯ ಪ್ರತೀಕವಾಗಿರುವ ಅಯೋಧ್ಯೆಯಲ್ಲಿ ಶ್ರೀ ರಾಮ ಮಂದಿರ ನಿಮಾರ್ಣ ಮಾಡಿರುವುದು ಹೆಮ್ಮೆಯ ವಿಚಾರವಾಗಿದೆ. ಆದರೆ ರಾಜ್ಯದ ಕಾಂಗ್ರೆಸ್ ಸರ್ಕಾರ ಹಿಂದೂ ವಿರೋಧಿ ನೀತಿ ಅನುಸರಿಸುತ್ತಿದೆ. ಮಂಡ್ಯದಲ್ಲಿ ಅಧಿಕಾರ ದುರುಪಯೋಗಪಡಿಸಿಕೊಂಡು ಹನುಮಧ್ವಜವನ್ನು ಕೆಳಗಿಳಿಸುವ ಮೂಲಕ ಸರ್ಕಾರ ಹಿಂದೂಗಳ ಭಾವನೆಗೆ ದಕ್ಕೆ ತಂದಿದೆ. ಕಾಂಗ್ರೆಸ್ ನ ಈ ಧೋರಣೆಗಳು ಬಿಜೆಪಿಗೆ ವರವಾಗಲಿದೆ ಎಂದು ರವಿ ಕಾಳಪ್ಪ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ವಿಧಾನ ಪರಿಷತ್ ಮಾಜಿ ಸದಸ್ಯ ಸುನೀಲ್ ಸುಬ್ರಮಣಿ, ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿಗಳಾದ ಅರುಣ್ ಭೀಮಯ್ಯ, ಕುಲ್ಲೊರಿಕೊಪ್ಪ ಮಾದಪ್ಪ, ವಕ್ತಾರ ಮಹೇಶ್ ಜೈನಿ ಹಾಗೂ ನಗರ ಬಿಜೆಪಿ ಅಧ್ಯಕ್ಷ ಮನು ಮಂಜುನಾಥ್ ಉಪಸ್ಥಿತರಿದ್ದರು.
Breaking News
- *ಸೋಮವಾರಪೇಟೆ : ಹಾಡಹಗಲೇ ಮಹಿಳೆಯ ಸರ, ಹಣ ಕದ್ದ ಚೋರರಿಗೆ ಗೂಸ*
- *ವೀರ ಸೇನಾನಿಗಳಿಗೆ ಅವಮಾನ : ವೀರಶೈವ ಲಿಂಗಾಯತ ಸಂಘಟನಾ ವೇದಿಕೆಯ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಎಸ್.ಮಹೇಶ್ ಖಂಡನೆ*
- *ಕಿಡಿಗೇಡಿಯ ಗಡಿಪಾರಿಗೆ ಮತ್ತು ಉನ್ನತ ಮಟ್ಟದ ತನಿಖೆಗೆ ಕೊಡವ ನ್ಯಾಷನಲ್ ಕೌನ್ಸಿಲ್ ಒತ್ತಾಯ*
- *ವಾರ ಭವಿಷ್ಯ: ನ.25 ರಿಂದ ಡಿ.1ರ ವರೆಗೆ ಯಾರ ಭವಿಷ್ಯ ಹೇಗಿದೆ…*
- *ವೀರ ಸೇನಾನಿಗಳನ್ನು ಅವಮಾನಿಸಿದವರನ್ನು ಗಡಿಪಾರು ಮಾಡದಿದ್ದರೆ ಕೊಡಗು ಬಂದ್ : ಜಬ್ಬೂಮಿ ಸಂಘಟನೆ ಎಚ್ಚರಿಕೆ*
- *ಹೊದ್ದೂರಿನ ಕಬಡಕೇರಿ ಗ್ರಾಮದಲ್ಲಿ ಸ್ವಚ್ಛತಾ ಶ್ರಮದಾನ*
- *ಕೊಡಗು ಕೃಷಿ ವಿಜ್ಞಾನ ವೇದಿಕೆಯ ಬೆಳ್ಳಿ ಮಹೋತ್ಸವ : ನ.26 ರಂದು ರೈತ ಮೇಳ*
- *ಡಿ.1 ರಂದು ಗಾಳಿಬೀಡುವಿನಲ್ಲಿ ಬಾಣೆ ಹಬ್ಬ*
- *ನ.26 ರಂದು ಮಡಿಕೇರಿಯಲ್ಲಿ ಜಿಕೀರ್, ಜಾರಿ ಮತ್ತು ನಾತೆ-ರಸುಲ್” ಗಾಯನ*
- *ವಿಶ್ವಾಸ್ ವೆಂಕಟ್ ಗೆ ಟೇಬಲ್ ಟೆನ್ನಿಸ್ ನಲ್ಲಿ ರನ್ನರ್ ಪ್ರಶಸ್ತಿ*