ಕುಶಾಲನಗರ ಜ.31 NEWS DESK : ಸ್ಮಾರ್ಟ್ ಬ್ರೈನ್ಸ್ ಅಬಾಕಸ್ ಅಕಾಡೆಮಿ ವತಿಯಿಂದ 9ನೇ ವರ್ಷದ ರಾಜ್ಯ ಮಟ್ಟದ ಅಬಾಕಸ್, ವೇದಿಕ್ ಮ್ಯಾಥ್ಸ್, ರೂಬಿಕ್ಸ್ ಕ್ಯೂಬ್, ಕ್ಯಾಲಿಗ್ರಫಿ ಮತ್ತು ಮಿಡ್‌ಬ್ರೇನ್ ಆಕ್ಟಿವೇಶನ್ ಸ್ಪರ್ಧೆ ಯು ರೈತ ಸಹಕಾರ ಭವನದ ಸಭಾಂಗಣದಲ್ಲಿ ನಡೆಯಿತು.
ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಸದಾಶಿವಯ್ಯ ಎಸ್.ಪಲ್ಲೇದ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಚಿಕ್ಕವಯಸ್ಸಿನಲ್ಲೇ ಸ್ಪರ್ಧಾತ್ಮಕಕ ಕಾರ್ಯಕ್ರಮಗಳಲ್ಲಿ ಭಾಗಹಿಸುವುದರಿಂದ ಸ್ಪರ್ಧಾ ಯುಗಕ್ಕೆ ಹೇಗೆ ತೆರೆದುಕೊಳ್ಳಬೇಕು ಎಂಬುದು ತಿಳಿಯುತ್ತದೆ. ಸ್ಪರ್ಧೆಗಳಲ್ಲಿ ಸೋಲು ಗೆಲುವಿಗಾಗಿ ಅಲ್ಲದೆ ಒಳ್ಳೆಯ ಅನುಭವಕ್ಕಾಗಿ ಭಾಗವಹಿಸಬೇಕು. ವಿಶೇಷವಾಗಿ ಸೋತಾಗ ನಮಗೆ ಸಿಗುವ ಅನುಭವ ಮತ್ತು ಜೀವನದ ಪಾಠ ಗೆದ್ದಾಗ ಸಿಗುವುದಿಲ್ಲ. ಅಲ್ಲದೇ, ಒಮ್ಮೆ ಸೋತವರು ಮತ್ತೊಮ್ಮೆ ಗೆಲ್ಲಲೇ ಬೇಕು. ಅದಕ್ಕೆ ನಿರಂತರ ಪರಿಶ್ರಮ ಬೇಕಾಗುತ್ತದೆ ಮಕ್ಕಳ ಪ್ರತಿಭೆಯ ಅನಾವರಣಕ್ಕೆ ಅಬಾಕಸ್ ಪೂರಕವಾಗಿದೆ
ಇದರ ಸದುಪಯೋಗಪಡಿಸಿಕೊಂಡು ಪ್ರತಿಭಾನ್ವಿತರಾಗಿ ಮುಂದೆ ಬರಬೇಕೆಂದು ಕರೆ ನೀಡಿದರು.
ಮೈಸೂರು ಸಣ್ಣ ನೀರಾವರಿ ಇಲಾಖೆಯ ಸಿವಿಲ್ ಸಹಾಯಕ ಇಂಜಿನಿಯರ್ ಶೈಜೆನ್ ಕೆ. ಪೀಟರ್ ಮಾತನಾಡಿ, ಅತಿಯಾದ ಬಳಕೆಯ ಸಾಮಾಜಿಕ ಜಲತಾಣಗಳಿಂದ ಮಕ್ಕಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಆದ್ದರಿಂದ ವಿದ್ಯಾರ್ಥಿಗಳು ತಮ್ಮ ಪ್ರತಿಭೆಯ ಮೂಲಕ ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕಾದರೆ ಅಬಾಕಸ್‌ನಂತಹ ವಿಶಿಷ್ಟ ಜ್ಞಾನ ಮಾದರಿಗಳಲ್ಲಿ ತೊಡಗಿಸಿಕೊಳ್ಳುವುದು ಎಲ್ಲ ರೀತಿಯಲ್ಲಿಯೂ ಅನುಕೂಲಕರವಾಗಿದೆ.
ಸರ್ಕಾರಿ ಶಾಲೆಯ ವಿದ್ಯಾರ್ಥಿಗಳು ಅಬಾಕಸ್ ನಲ್ಲಿ ಪಾಲ್ಗೊಳ್ಳುತ್ತಿರುವುದು ಶ್ಲಾಘನೀಯ. ಭಾರತದ ಅಬಾಕಸ್ ಮೂಲಕ ಸಾಧಿಸುವ ಛಲ ದೊಂದಿಗೆ ಪ್ರತಿಭಾನ್ವಿತರಾಗಿ ಮುಂದೆ ಬರಬೇಕೆಂದರು.
ಉದ್ಗಮ್ ಶಾಲೆ ಪ್ರಾಂಶುಪಾಲ ಬೋಪಣ್ಣ ಮಾತನಾಡಿ, ಸ್ಮಾರ್ಟ್ ಬ್ರೈನ್ಸ್ ಅಬಾಕಸ್ ಅಕಾಡೆಮಿ ಕಳೆದ 9 ವರ್ಷಗಳಿಂದಲೂ ಮಕ್ಕಳ ಪ್ರತಿಭೆಯ ಅನಾವರಣಕ್ಕೆ ಸಹಕಾರ ನೀಡಿ ಪೂರಕ ಬೆಳವಣಿಗೆಗೆ ಕೈಜೋಡಿಸುತ್ತಿರುವುದು ಮಾನವ ಮಿದುಳಿನ ಸಾಮರ್ಥ್ಯವನ್ನು ಮತ್ತು ಅದರ ಪರಿಣಾಮಕಾರಿ ಬಳಕೆಯನ್ನು ಸಕ್ರಿಯಗೊಳಿಸುವ ಕೌಶಲ್ಯ ನಿರ್ವಹಣೆ ತಂತ್ರಗಳನ್ನು ಕಲಿಸುತ್ತದೆ. ಅಬ್ಯಾಕಸ್ ವಿದ್ಯಾರ್ಥಿಗಳಿಗೆ ಹೆಚ್ಚಿನ ವೇಗ ಮತ್ತು ನಿಖರತೆಯೊಂದಿಗೆ ಮಾನಸಿಕ ಲೆಕ್ಕಾಚಾರಗಳನ್ನು ಮಾಡಲು ಸಹಾಯ ಮಾಡುತ್ತದೆ.ಇದು ಅವರ ಜೀವನದುದ್ದಕ್ಕೂ ಎಲ್ಲಾ ಕ್ಷೇತ್ರಗಳಲ್ಲಿ ಜ್ಞಾನವನ್ನು ಅನ್ವಯಿಸುವಂತೆ ಮಾಡುತ್ತದೆ. ಇದು ಅವರ ಜೀವನದುದ್ದಕ್ಕೂ ಎಲ್ಲಾ ಕ್ಷೇತ್ರಗಳಲ್ಲಿ ಜ್ಞಾನವನ್ನು ಅನ್ವಯಿಸುವಂತೆ ಮಾಡುವ ಅಬಾಕಸ್ ಮಕ್ಕಳಿಗೆ ಬೆಳವಣಿಗೆಗೆ ಸಹಕಾರಿಯಾಗಲಿದೆ ಎಂದರು.
ಸ್ಮಾರ್ಟ್ ಬ್ರೈನ್ಸ್ ಅಬಾಕಸ್ ಅಕಾಡೆಮಿ ನಿರ್ದೇಶಕಿ ಕುಸುಮಾ ಎಸ್. ರಾಜ್ ಮಾತನಾಡಿ, ಕಳೆದ 13ವರ್ಷಗಳಿಂದ ಅಕಾಡೆಮಿ ಕಾರ್ಯ ನಿರ್ವಹಿಸುತ್ತಿದ್ದು, ಜಿಲ್ಲೆ ಹಾಗೂ ರಾಜ್ಯಮಟ್ಟದ ಶಾಲೆಗಳಲ್ಲಿ ಮಕ್ಕಳಿಗೆ ಅಬಾಕಸ್ ಬಗ್ಗೆ ಅರಿವು ಮೂಡಿಸುವುದರೊಂದಿಗೆ ಸಾವಿರಾರು ವಿದ್ಯಾರ್ಥಿಗಳು
ಅಬಾಕಸ್ ಮೂಲಕ ಕಲಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಮಕ್ಕಳ ಪ್ರತಿಭೆಯ ಆವರಣಕ್ಕೆ ರಾಜ್ಯಮಟ್ಟದ ಸ್ಪರ್ಧೆಯನ್ನು ಆಯೋಜಿಸಲಾಗಿದ್ದು,
ಕೊಡಗು ಮೈಸೂರು ಹಾಸನ ಜಿಲ್ಲೆಯ 18 ಶಾಲೆಗಳ 365 ವಿದ್ಯಾರ್ಥಿಗಳು ಸ್ವರ್ಧೆಯಲ್ಲಿ ಭಾಗವಹಿಸಿದ್ದಾರೆ.
ಮಕ್ಕಳಿಗೆ ವಿಶೇಷ ಪ್ರತಿಭೆಗೆ ಸಹಕಾರಿಯಾಗಲಿರುವ ವೇದಿಕ್ ಮ್ಯಾಥ್ಸ್, ರೂಬಿಕ್ಸ್ ಕ್ಯೂಬ್,ಕ್ಯಾಲಿಗ್ರಫಿ ಮತ್ತು ಮಿಡ್‌ಬ್ರೇನ್ ಆಕ್ಟಿವೇಶನ್ ಸ್ಪರ್ಧೆ ಆಯೋಜಿಸಲಾಗಿತ್ತು. ವಿದ್ಯಾರ್ಥಿಗಳು ಕಲಿಕೆಯ ಪ್ರತಿಭೆಯೊಂದಿಗೆ ಸರ್ದೆಯಲ್ಲಿ ಪಾಲ್ಗೊಂಡು ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಅಬಾಕಸ್ ಪೂರ್ಣ ಶಿಕ್ಷಣ ಪಡೆದ ಮೂವರು ವಿದ್ಯಾರ್ಥಿಗಳಿಗೆ ಪದವಿ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಈ ಸಂದರ್ಭ ಅಬಾಕಸ್ ಅಕಾಡೆಮಿಯ ಶಿಕ್ಷಕರುಗಳಾದ ಗೀತಾ, ಕಲ್ಪನಾ, ಕಾವ್ಯ, ಪವಿತ್ರ ಹಾಗೂ ನಿರ್ದೇಶಕ ಸುಕೇಶ್ ರಾಜ್ ಸೇರಿದಂತೆ ವಿದ್ಯಾರ್ಥಿಗಳ ಪೋಷಕರು ಹಾಜರಿದ್ದರು.