ವಿರಾಜಪೇಟೆ ಜ.31 NEWS DESK : ಮುಳಿಯ ಜ್ಯುವೆಲ್ಲೆರ್ಸ್ ವತಿಯಿಂದ ನಡೆದ ದೇಶಭಕ್ತಿ ಗೀತೆಗಳ ನೃತ್ಯ ಸ್ಪರ್ಧೆಯಲ್ಲಿ ವಿರಾಜಪೇಟೆಯ ನಾಟ್ಯಾಂಜಲಿ ನೃತ್ಯ ಸಂಸ್ಥೆಯ ವಿದ್ಯಾರ್ಥಿಗಳು ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ.
ಸಂಸ್ಥೆಯ ವಿದ್ಯಾರ್ಥಿಗಳಾದ ಶ್ರಾವ್ಯ, ಶ್ರಾವಣಿ, ಶ್ರೇಯ, ತಷ್ಮ ತಂಗಮ್ಮ, ಗಹನ, ನೇಸರ, ಬಿಯಾಂಕಾ ರೈ, ದೃಶ್ಯ, ಧನ್ಯಶ್ರೀ, ಕೌಶಿ ಕಾವೇರಮ್ಮ, ಭಾಗವಹಿಸಿ ಪ್ರಥಮ ಸ್ಥಾನ ಪಡೆದು ಸಂಸ್ಥೆಗೆ ಕೀರ್ತಿ ತಂದಿದ್ದಾರೆ.
ಸಂಸ್ಥೆಯ ಶಿಕ್ಷಕರು ಹೇಮಾವತಿ ಕಾಂತ್‍ರಾಜ್ ಹಾಗೂ ಕುಮಾರಿ ಕಾವ್ಯಶ್ರೀ ಕಾಂತ್‍ರಾಜ್ ತರಬೇತಿ ನೀಡಿದರು.









