ವಿರಾಜಪೇಟೆ ಜ.31 NEWS DESK : ಕರಡ ಶಾಖೆಯ “ಬ್ಯಾಂಕ್ ಆಫ್ ಬರೋಡ” ವತಿಯಿಂದ ವಿರಾಜಪೇಟೆಯ ಕಾವೇರಿ ಶಾಲೆಗೆ ಕ್ರೀಡಾ ಸಾಮಾಗ್ರಿಗಳನ್ನು ವಿತರಿಸಲಾಯಿತು.
ಶಾಖೆಯ ಸೀನಿಯರ್ ಮ್ಯಾನೇಜರ್ ಸಿ.ವಿ.ಮಹೇಶ್ ವರ್ಮ ಕಾವೇರಿ ಶಾಲೆಗೆ ಕ್ರೀಡಾ ಸಾಮಾಗ್ರಿಗಳ ರೂಪದಲ್ಲಿ ರೂ.10,000 (ಹತ್ತು ಸಾವಿರ ) ರೂಪಾಯಿ ದೇಣಿಗೆಯನ್ನು ನೀಡಿದರು.
ಈ ಸಂದರ್ಭ ಕಾವೇರಿ ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷ ಬಿ.ಎಸ್.ಸುದೇಶ್, ಕಾರ್ಯದರ್ಶಿ ಪಿ.ಎನ್.ವಿನೋದ್, ಬೋಧಕ ಬೋಧಕೇತರ ಸಿಬ್ಬಂದಿ ವರ್ಗದವರು ಹಾಗೂ ವಿದ್ಯಾರ್ಥಿಗಳು ಕೃತಜ್ಞತೆ ಸಲ್ಲಿಸಿದರು.
ಕಾವೇರಿ ಶಾಲೆಯ ದೈಹಿಕ ಶಿಕ್ಷಕಿ ಮೋನಿಕ ಹಾಗೂ ರಾಜ್ಯಮಟ್ಟದ ಶೆಟ್ಟಲ್ ಬ್ಯಾಡ್ಮಿಂಟನ್ ಆಟಗಾರರು ಹಾಗೂ ಕ್ರೀಡಾ ನಾಯಕರುಗಳಾದ ಆಕರ್ಷ್ ಕೊಂಗಂಡ ಮತ್ತು ಎಂ.ಜಿ.ಅಯ್ಯಪ್ಪ ಹಾಜರಿದ್ದರು.









