ಮಡಿಕೇರಿ ಫೆ.2 NEWS DESK : ಕೂರ್ಗ್ ರಿಕ್ರಿಯೇಷನ್ ವತಿಯಿಂದ ಕೊಡಗಿನ ಹೋಂಸ್ಟೇ, ಹೊಟೇಲ್ ಮತ್ತು ರೆಸಾರ್ಟ್‍ಗಳ ಮಾಲೀಕರು ಹಾಗೂ ಸಿಬ್ಬಂದಿಗಳಿಗಾಗಿ “ಕೂರ್ಗ್ ಕ್ರಿಕೆಟ್ ಕ್ಲ್ಯಾಶ್-2024” ಕ್ರಿಕೆಟ್ ಪಂದ್ಯಾವಳಿಯನ್ನು ಆಯೋಜಿಸಲಾಗಿದೆ ಎಂದು ರಿಕ್ರಿಯೇಷನ್ ನ ಪ್ರಮುಖ ಕೆ.ಜಿ.ಮದನ್ ತಿಳಿಸಿದ್ದಾರೆ.
ನಗರದ ಜನರಲ್ ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ಫೆ.7, 8 ಮತ್ತು 9 ರಂದು ಬೌಂಡರಿ ಬ್ಯಾಟಲ್ ಬಾಕ್ಸ್ ಕ್ರಿಕೆಟ್ ಹಾಗೂ ಸ್ಮ್ಯಾಶ್ ಬ್ಯಾಷ್ ಎಂಬ ಎರಡು ವಿಭಾಗಗಳಲ್ಲಿ ಪಂದ್ಯಾವಳಿ ನಡೆಯಲಿದೆ.
ಬೌಂಡರಿ ಬ್ಯಾಟಲ್ ಬಾಕ್ಸ್ ಕ್ರಿಕೆಟ್ ಪಂದ್ಯಾವಳಿ ಕೊಡಗಿನಲ್ಲಿ ಇದೇ ಪ್ರಥಮ ಬಾರಿಗೆ ನಡೆಸಲಾಗುತ್ತಿದ್ದು, ರೂ.800 ಪ್ರವೇಶ ಶುಲ್ಕ ಹಾಗೂ ಲೈಫ್ ಲೈನ್ ರೂ.1,600 ನಿಗಧಿ ಪಡಿಸಲಾಗಿದೆ. ವಿಜೇತ ತಂಡಕ್ಕೆ ರೂ.30 ಸಾವಿರ ಆಕರ್ಷಕ ನಗದು ಬಹುಮಾನ ನೀಡಲಾಗುವುದು.
ಸ್ಮ್ಯಾಶ್ ಬ್ಯಾಷ್ ಟೆನ್ನಿಸ್ ಬಾಲ್ ಪಂದ್ಯಾವಳಿಗೆ ಪ್ರವೇಶ ಶೂಲ್ಕ ರೂ.2,500 ನಿಗಧಿಪಡಿಸಲಾಗಿದೆ. ವಿಜೇತ ತಂಡಕ್ಕೆ ರೂ.50 ಸಾವಿರ ಆಕರ್ಷಕ ನಗದು ಬಹುಮಾನ ನೀಡಲಾಗುವುದು.
ಪಂದ್ಯಾವಳಿಯಲ್ಲಿ ಹೋಂಸ್ಟೇ, ಹೊಟೇಲ್ ಮತ್ತು ರೆಸಾರ್ಟ್‍ಗಳ ಪುರುಷ ಹಾಗೂ ಮಹಿಳಾ ಕ್ರೀಡಾಪಟುಗಳು ಪಾಲ್ಗೊಳ್ಳಬಹುದಾಗಿದ್ದು, ಪ್ರತ್ಯೇಕವಾಗಿ ಪಂದ್ಯಾವಳಿ ನಡೆಯಲಿದೆ. ಈಗಾಗಲೇ ಕೆಲವು ತಂಡಗಳು ನೋಂದಾಯಿಸಿಕೊಂಡಿದ್ದು, ಸ್ಮ್ಯಾಶ್ ಬ್ಯಾಷ್ ಟೆನ್ನಿಸ್ ಬಾಲ್ ಪಂದ್ಯಾವಳಿಗೆ ಹೋಂಸ್ಟೇ, ಹೊಟೇಲ್ ಹಾಗೂ ರೆಸಾರ್ಟ್‍ಗಳ ಹೆಸರಿನಲ್ಲಿ ಜಿಲ್ಲೆಯ ಯಾರು ಬೇಕಾದರು ಪಾಲ್ಗೊಳ್ಳಬಹುದಾಗಿದೆ.
ಅಂಪೈರ್‍ಗಳ ನಿರ್ಧಾರವೇ ಅಂತಿಮವಾಗಿರುತ್ತದೆ. ಹೆಚ್ಚಿನ ಮಾಹಿತಿಗೆ ಹಾಗೂ ಹೆಸರು ನೋಂದಾವಣಿಗೆ 8310128790, 7338553205 ಸಂಪರ್ಕಿಸಬಹುದಾಗಿದೆ ಎಂದು ಕೆ.ಜಿ.ಮದನ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.